ಚಿಕ್ಕನಾಯಕನಹಳ್ಳಿ : ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಮತದಾನ ಅತ್ಯಂತ ಅಗತ್ಯ ಎಂದು ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ ತೇಜಸ್ವಿನಿ ನುಡಿದರು.
ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮತದಾರ ದಿನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಬಿ.ತೇಜಸ್ವಿನಿ ಮತದಾನದ ಅರಿವು ಮತ್ತು ಜಾಗೃತಿ ಬಗ್ಗೆ ಮಾತನಾಡಿ ಎಲ್ಲಾ 18 ವರ್ಷದ ಯುವಕ, ಯುವತಿಯರು ಮತದಾನ ನೋಂದಣಿಯಲ್ಲಿ ಪಾಲ್ಗೊಳ್ಳಬೇಕೆಂದರು.
ಚುನಾವಣೆ ಹತ್ತಿರದಲ್ಲಿದ್ದು ಪ್ರಜ್ಞಾವಂತ ಮತದಾರರು ಒಳ್ಳೆಯ ದೃಷ್ಟಿಕೋನದಿಂದ ಚಲಾಯಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದ ಉದ್ಘಾಟನೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನಮೋಹನ್ ಮಾತನಾಡಿ ಮತದಾನ ಎಂಬುದು ಅತ್ಯಂತ ಪವಿತ್ರವಾದ ಕೆಲಸ ಇದನ್ನು ಬಹಳಷ್ಟು ಗಮನಹರಿಸಿ ಎಂದರು, ಮೊದಲ ಸಾರ್ವತ್ರಿಕ ಚುನಾವಣೆಯಿಂದ ಇಲ್ಲಿಯವರೆಗೆ ಅನೇಕ ಚುನಾವಣೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯವನ್ನು ಬೆಳೆಸಿದ್ದಾರೆ. ಇಂತಹ ಪವಿತ್ರ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಹೇಳಿದರು.
ಆಶಯನುಡಿಗಳನ್ನು ನುಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಸಿ.ರವಿಕುಮಾರ್. ಮಾತನಾಡಿ ವಿದ್ಯಾರ್ಥಿಗಳು ಸಮಾಜದ ಒಂದು ಭಾಗವಾಗಿದ್ದು ನಿಮ್ಮೆಲ್ಲರಿಗೂ ಈ ದೇಶ ಕಟ್ಟುವ ಹೊಣೆಯಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರೊಫೆಸರ್ ಸದಾನಂದ ಸ್ವಾಮಿ ಮತದಾನದಲ್ಲಿ ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಾಲ್ಲೂಕಿನ ಆಡಳಿತದ ಸಿಬ್ಬಂದಿ, ಮತ್ತು ಕಾಲೇಜಿನ ಉಪನ್ಯಾಸಕರಾದ ಸತೀಶ್, ರಮೇಶ್ ಅನಿತಾ ಲಕ್ಷ್ಮಿ ಭಾಗವಹಿಸಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು
