ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿಯ ಕೆಲವು ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆಯಾದರು.

 ಮಧುಗಿರಿ : ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿಯ ಹಾಲಿ ಡೇರಿ ಅಧ್ಯಕ್ಷ, ಭೀಮರಾಜು, ಹಾಲಿ ಗ್ರಾ.ಪಂ. ಸದಸ್ಯ ಗಂಗಾಧರ್ ನಾಯ್ಕ್, ಕಾಂಗ್ರೆಸ್ ತೊರೆದು ಶಾಸಕ ವೀರಭದ್ರಯ್ಯನವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಂ.ವಿ.ವೀರಭದ್ರಯ್ಯ ಶಾಸಕನಾಗಿ ಆಯ್ಕೆಯಾಗಲು ನನಗೆ ಎಲ್ಲ ರೀತಿಯ ಸಹಕಾರ ನೀಡಿದ್ದೀರಿ. ಹಾಗಾಗಿ ಈ ಗ್ರಾಮದ ರಸ್ತೆಯನ್ನು 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದೇನೆ. ಮುದ್ದೇನಹಳ್ಳಿ-ಕುರಿಹಳ್ಳಿ ರಸ್ತೆಯನ್ನು 46 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ನದಿಗೆ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದು ಉಳಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಕುಮಾರಸ್ವಾಮಿ ಸರ್ಕಾರ ಕಳೆದ ಕಾಂಗ್ರೆಸ್‍ನವರಿಂದ ಕ್ಷೇತ್ರದ ಅಭಿವೃದ್ಧಿಗೆ ಪೆಟ್ಟು ಬಿದ್ದಿದೆ. ಭೀಕರ ಬರಗಾಲ, ನಂತರ ಭಯಂಕರ ಕರೋನಾ ನಡುವೆ ಸರ್ಕಾರವನ್ನು ಕಳೆದುಕೊಂಡು ಇಲ್ಲಿಯವರೆಗೂ 1200 ಕೋಟಿ ಅನುದಾನ ತಂದಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಸುರೇಶ್, ನಾಸೀರ್, ಸೈಯದ್ ಗೌಸ್, ಮುಖಂಡರಾದ ಸಿದ್ದೇಶ್ವರ, ಮಲ್ಲಯ್ಯ, ಸಿದ್ದಲಿಂಗಪ್ಪ, ಚೆಲುವರಾಜು, ಜಬೀ, ರಾಜಕುಮಾರ್, ಹಾಗೂ ನೂರಾರು ಮಹಿಳೆಯರು ಭಾಗವಹಿಸಿದ್ದರು.



ವರದಿ ಮದುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು