ಮಧುಗಿರಿ : ತಾಲೂಕಿನ ಗಡಿಗ್ರಾಮದ ಕಸಾಪಪುರ-ಆಂದ್ರ ಗಡಿ ಗ್ರಾಮದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 60 ಲಕ್ಷ ಹಣ ನೀಡಲಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಸಾಪುರ-ಆಂದ್ರ ಗಡಿ ಭಾಗದ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿ ಗ್ರಾಮದ ಗ್ರಾಮೀಣ ರಸ್ತೆಗಳಿಗೆಂದೆ 100 ಕೋಟಿಗೂ ಹೆಚ್ಚು ಹಣ ವ್ಯಯಿಸಲಾಗಿದೆ. ಅದರಂತೆ ಕಸಾಪುರ-ಆಂದ್ರ ಗಡಿವರೆಗೂ 60 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ. ಗಡಿ ಗ್ರಾಮಗಳ ರಸ್ತೆಗಳು ಸಧೃಡವಾಗಿದ್ದರೆ ವ್ಯವಹಾರಿಕವಾಗಿ, ವಾಣಿಜ್ಯವಾಗಿ ಗ್ರಾಮಗಳ ಮಧ್ಯೆ ಸಂಪರ್ಕ ಬೆಸೆಯಲಿದ್ದು ಅಭಿವೃದ್ಧಿಯಾಗಲಿದೆ. ಸಣ್ಣ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಲಿದ್ದು ರಸ್ತೆಗಳ ಅಭಿವೃದ್ಧಿ ಮುಖ್ಯವೆಂದು ತಿಳಿದು ಈ ರಸ್ತೆಗೆ ಕಾಯಕಲ್ಪ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಜು, ಗ್ರಾ.ಪಂ.ಸದಸ್ಯ ರವಿಕುಮಾರ್, ಮುಖಂಡರಾದ ದತ್ತಣ್ಣ, ಮಂಜಣ್ಣ, ನಾಗರಾಜು, ರಂಗನಾಥ್, ಪುಟ್ಟ ಮಲ್ಲೇಶ್, ಗಿರಿ ರಂಗನಾಥ್, ಜಯಣ್ಣ, ಲಕ್ಷ್ಮೀನಾರಾಯಣ್, ಲಕ್ಷ್ಮೀಕಾಂತ್, ರಘುವೀರ್ ಹಾಗೂ ಇತರರು ಜೊತೆಗಿದ್ದರು.
ವರದಿ ಮದುಗಿರಿ ಬಾಲು ಪಾಣಿಂದ್ರ.
