ಮಧುಗಿರಿ: ವಿಧಾನಸಭಾ ಕ್ಷೇತ್ರದ ಸ್ಥಳೀಯನಾದ ನಾನು ದೇಶದ ಪ್ರಧಾನಿಯಾಗಬೇಕು ಎಂದು ಆಸೆ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ ಎಂದು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಡಿವಿ ಹಳ್ಳಿ ರಂಗನಾಥ್ ತಿಳಿಸಿದರು.
ಮಧುಗಿರಿ ಪಟ್ಟಣದಲ್ಲಿ ಅಪಾರ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು ಮಧುಗಿರಿ ಕ್ಷೇತ್ರದಲ್ಲಿ ಭ್ರμÁ್ಟಚಾರ ಮತ್ತು ಮೂಲಭೂತ ಸಮಸ್ಯೆಗಳು ತಂಡವಾಡುತ್ತಿವೆ. ಕೇಸ್ ತಳಿರೊಬ್ಬರು ಶಾಸಕರಾಗದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ನಾನು ಮಧುಗಿರಿಯನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವುದು ಹಾಗೂ ಏಕಶಿಲಾ ಬೆಟ್ಟಕ್ಕೆ ರೂಪೆ ಅಳವಡಿಸುವ ಮೂಲಕ ಪ್ರವಾಸೋದ್ಯಮ ತಾಣವನ್ನು ಮಾಡಬೇಕು ಎಂದು ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ಇನ್ನು ಕ್ಷೇತ್ರದಲ್ಲಿ ಆರೋಗ್ಯ ಸಮಸ್ಯೆಗಳು ಎದ್ದು ಕಾಣುತ್ತಿದ್ದು ಪ್ರತಿ ಹೋಬಳಿ ಕೇಂದ್ರದಲ್ಲೂ ಹೈಟೆಕ್ ಸೂಪರ್ ಸ್ಪೆμÁಲಿಟಿ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸುವುದು ಹಾಗೂ ಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವುದು ನನ್ನ ಮುಖ್ಯ ಗುರಿಯಾಗಿದೆ. ಇಂತಹ 10 ಹಲವು ಯೋಜನೆಗಳ ಕನಸು ಕಟ್ಟಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ ನಾನು ಒಬ್ಬ ಸ್ಥಳೀಯನಾಗಿದ್ದು ನನಗೆ ರಾಜಕೀಯ ಅವಶ್ಯಕತೆ ಇರಲಿಲ್ಲ ಕ್ಷೇತ್ರದ ಹಿತ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿದ್ದೇನೆ ಮಧುಗಿರಿಯನ್ನು ಅಭಿವೃದ್ಧಿಪಡಿಸುವುದು ನನ್ನ ಮುಖ್ಯ ಗುರಿಯಾಗಿರುತ್ತದೆ ಎಂದರು.
ಏಕಿಶಲಾ ಬೆಟ್ಟಕ್ಕೆ ರೋಪ್ ಸೇರಿದಂತೆ ಪ್ರವಾಸಿ ತಾಣಗಳು ಹಾಗೂ ಸ್ಥಳಿಯ ಉದ್ಯೋಗವಕಾಶಗಳು ಸೃಷ್ಟಿಸುವುದು ನನ್ನ ಪ್ರಮುಖ ಗುರಿ, ಈಗಾಗಲೇ ನಾನು ಚಾರಿಟೆಡ್ ಅಕೌಟೆಂಟ್ ಆಗಿ ವೃತ್ತಿ ಮಾಡುತಿದ್ದು ಸ್ಥಳಿಯರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿ ನೂರರು ಜನರಿಗೆ ತರಬೇತಿ ನೀಡುತಿದ್ದೇನೆ ಎಂದರು. ನಂತರ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಲ್ನಿಡಿಗೆ ಮೂಲಕ ಸಂಚರಿಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಕಲ್ಲಕುಂಟ ನಾಗರಾಜು, ನಿರ್ಮಾಪಕ ಪ್ರದೀಪ್ ಕುಮಾರ್ ಎಂ.ಬಿ, ವೆಂಕಟೇಶ್ ಬಾಬು ಕೆ.ಎಂ, ಗಿರೀಶ್, ಪುನೀತ್, ಗುರುಪ್ರಸಾದ್, ಮಹೇಶ್ ಗೌಡ, ಶ್ರೀನಿವಾಸ್ ಕೃಷ್ಣ, ತಾರಾ, ಭಾಗ್ಯ, ರತ್ನಮ್ಮ ಹಾಜರಿದ್ದರು.
ವರದಿ ಮಧುಗಿರಿ ಬಾಲು ಪಣಿಂದ್ರ.