ಗುಬ್ಬಿ ವಿಧಾನ ಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ 23 ಮಂದಿ ಕದನ ಕಲಿಗಳು.

 ಗುಬ್ಬಿ : ಏಪ್ರಿಲ್ 14ರಿಂದ ಇಲ್ಲಿಯವರೆವಿಗೂ  23 ನಾಮಪತ್ರ ಸಲ್ಲಿಕೆಯಾಗಿದ್ದು, 15ಮಂದಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.  ಏಪ್ರಿಲ್ 13ರಂದು ಚುನಾವಣಾ ನಾಮಪತ್ರ ಸಲ್ಲಿಕೆ ಆರಂಭವಾಗಿ ಇಂದಿಗೆ ಮುಕ್ತಾಯವಾಯಿತು. ನಾಳೆ   ಬೆಳಗ್ಗೆ 11ಗಂಟೆಗೆ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಬಿ ಆರತಿ ತಿಳಿಸಿದ್ದಾರೆ.


ಇಂದು ಬಿಜೆಪಿ, ಬಿ.ಎಸ್.ಪಿ, ಸ್ವತಂತ್ರ ಅಭ್ಯರ್ಥಿ, ಜೈ ಮಹಾಭಾರತ್ ಪಾರ್ಟಿ, ಕಾಂಗ್ರೆಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಕೆ ಆಗಿದೆ.


 ಇಂದು 09 ನಾಮಪತ್ರ ಸಲ್ಲಿಕೆಯಾಗಿದ್ದು  ನಾಮಪತ್ರವನ್ನು  ಚುನಾವಣಾ ಅಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ಸಹಾಯಕ ಚುನಾವಣಾ ಅಧಿಕಾರಿ ಬಿ ಆರತಿ ನಾಮಪತ್ರವನ್ನು ಪಡೆದಿದ್ದು, ಈ ಸಂದರ್ಭದಲ್ಲಿ ಸಂಜೀವ್ ಸಿಂಗ್ ಜನರಲ್ ಅಪ್ಸರ್ ವರ್ ಉಪಸ್ಥಿತರಿದ್ದರು.


ವರದಿ ಸಂಜಯ್ ಕೊಪ್ಪ.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು