ಗುಬ್ಬಿ : ಡಬ್ಬಲ್ ಇಂಜಿನ್ ಸರ್ಕಾರವು ದೀನ ದಲಿತ ಪರ ಸರ್ಕಾರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ತಾಲ್ಲೂಕಿಗೆ ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ಪರವಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರವು ಜನಪರ ಸರ್ಕಾರವಾಗಿದೆ ಈ ಕ್ಷೇತ್ರದ 40 ಸಾವಿರ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸಹಕಾರ ನೀಡಿದ್ದೇವೆ ಮುಖ್ಯಮಂತ್ರಿ ರೈತ ವಿದ್ಯಾರ್ಥಿನಿಧಿ ಯೋಜನೆ ಅಡಿ ಯಲ್ಲಿ 7,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದೇವೆ. ಆಯುಷ್ಮಾನ್ ಆರೋಗ್ಯ ನಿದಿ ಯೋಜನೆ,
ಹೀಗೆ ಅನೇಕ ಜನಪರ ಯೋಜನೆಗಳನ್ನು ಕೈಗೊಂಡಿದ್ದೇವೆ.
ಅನೇಕ ವರ್ಷಗಳ ಎಸ್ ಸಿ ಎಸ್ ಟಿ ಒಳಮೀಸಲಾತಿಯನ್ನು ಯಾವುದೇ ಸರ್ಕಾರವು ಮಾಡಿರಲಿಲ್ಲ ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮಾಡಿದೆ
ಎಲ್ಲಾ ಸಮುದಾಯದವರಿಗೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿ ಕೊಡುವಂತಹ ಕೆಲಸ ಮಾಡಿದ್ದೇವೆ ಹಿಂದುಳಿದ ವರ್ಗದವರಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಯಕ್ಕೆ 2% ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇವೆ.
ಆದರೆ ಕಾಂಗ್ರೆಸ್ ಪಕ್ಷದವರು ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎಂದು ಕಿಡಿ ಕಾರುತ್ತಾರೆ ಇಂಥ ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ ಎಸ್ಟಿ ಮತದಾರರು ಮತ ನೀಡಬಾರದು ಡಬಲ್ ಇಂಜಿನ್ ಸರ್ಕಾರವು ದಲಿತರ ಒಳ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ ಬಿಜೆಪಿ ಸರ್ಕಾರ ದಲಿತರ ಪರ ಸರ್ಕಾರ, ಕಾಡುಗೊಲ್ಲ ನಿಗಮವನ್ನು ಮಾಡಿದ್ದೇವೆ, ಅಗ್ನಿ ಬನ್ನಿರಾಯ ನಿಗಮವನ್ನು ಮಾಡಿದ್ದೇವೆ, ಎಲ್ಲಾ ವರ್ಗದವರಿಗೂ ನಮ್ಮ ಸರಕಾರ ಆದ್ಯತೆ ನೀಡಿದೆ ಹಾಗಾಗಿ ಈ ಬಾರಿ ನಮ್ಮ ಗುಬ್ಬಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ಅವರು ಎಲ್ಲಾ ಸಮುದಾಯದ ಮತದಾರರ ಹೃದಯವನ್ನು ಗೆದ್ದಿದ್ದಾರೆ ಹಾಗಾಗಿ ಈ ಬಾರಿ ಅವರನ್ನು ಜಯಶೀಲರನ್ನಾಗಿ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರುಗಳು ಆಗಮಿಸಿದ್ದರು.