ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ : ಕೇಂದ್ರ ಸಚಿವ ಮುರುಗನ್.

 ಮಧುಗಿರಿ : ರಾಜ್ಯದಲ್ಲಿ ದಲಿತರಿಗೆ ಇದ್ದ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ಕೇಂದ್ರ ಸಚಿವ ಮುರುಗನ್ ತಿಳಿಸಿದರು.


ಪಟ್ಟಣದ ಬಿಜೆಪಿ ಅಭ್ಯರ್ಥಿ ಎಲ್.ಸಿ.ನಾಗರಾಜುರವರ ಸ್ವಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಪ್ರತಿ ಬಡವನಿಗೆ ಸೂರು, ಶುದ್ಧ ಕುಡಿಯುವ ನೀರು ಹಾಗೂ ಆಹಾರವನ್ನು ನರೇಂದ್ರ ಮೋದಿಯವರು ನೀಡುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ದೇಶ ವಿಶ್ವಕ್ಕೆ ಮಾದರಿ ಆಡಳಿತ ನೀಡುತ್ತಿದ್ದು ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯವೂ ಅಭಿವೃದ್ಧಿಯಾಗಿದೆ. ಸಾಮಾಜಿಕ ನ್ಯಾಯದ ನಾಯಕನಾಗಿ ಪ್ರದಾನಿ ನರೇಂದ್ರ ಮೋದಿಯವರು ರೂಪುಗೊಂಡಿದ್ದು ಅಂಬೇಡ್ಕರ್ ಸಮಾದಿಯನ್ನು ಕಣ್ಣೆತ್ತಿಯೂ ನೋಡದ ಕಾಂಗ್ರೆಸ್ ಇಂದು ದಲಿತರ ಪರ ಎಂದು ಸುಳ್ಳು ಹೇಳುತ್ತಿದ್ದಾರೆ.

ಆದರೆ ಮಾತಾಡದೆ ಅಂಬೇಡ್ಕರ್ ರವರ ಜನ್ಮಸ್ಥಳ, ವಿದ್ಯಾಭ್ಯಾಸ ಮಾಡಿದ ಸ್ಥಳ ಹಾಗೂ ಐಕ್ಯವಾದ ಸ್ಥಳವನ್ನು ಮೋದಿಯವರು ಸುಂದರವಾಗಿಸಿದ್ದಾರೆ. ನಮ್ಮ ಅಭ್ಯರ್ಥಿ ಎಲ್.ಸಿ.ನಾಗರಾಜು ವಿದ್ಯಾವಂತನಿದ್ದು ಕೆಎಎಸ್ ಅಧಿಕಾರವನ್ನು ತೊರೆದು ಈ ಕ್ಷೇತ್ರದ ಬಡವರ ಪರವಾಗಿ ಕೆಲಸ ಮಾಡಲು ಬಂದಿದ್ದಾರೆ. ಅವರನ್ನು ನೀವು ಗೆಲ್ಲಿಸಬೇಕೆಂದರು.

ರಾಷ್ಟ್ರ ಮಾದಿಗ ಸಮಾಜದ ನಾಯಕರಾದ ಮಂದ ಕೃಷ್ಣ ಮಾದಿಗ ರವರು ಮಾತನಾಡಿದ ಅವರು, ದೇಶದ 100 ಹಿರಿಯ ಮಾದಿಗ ಸಮಾಜದ ಮುಖಂಡರೊಡನೆ ಚರ್ಚೆ ನಡೆಸಿದ್ದು ಶೇ.98 ರಷ್ಟು ನಾಯಕರು ಈ ಬಾರಿ ಬಿಜೆಪಿ ಗೆಲ್ಲಿಸಲು ಸಹಮತ ಸೂಚಿಸಿದ್ದು ಅದಕ್ಕೆ ಕಾರಣವೂ ಇದೆ. ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದವರು ಆದರೂ ದಲಿತ ಸಮಾಜಕ್ಕೆ ಸೇರಿದ ರಾಮನಾಥ್ ಕೋವಿಂದ್ ಹಾಗೂ ದ್ರೌಪದಿ ಮುರ್ಮುರವರನ್ನು ದೇಶ ಉನ್ನತ ಸ್ಥಾನಕ್ಕೆ ಕೂರಿಸಿ ಸಮಾಜಕ್ಕೆ ಹಾಗೂ ಸಂವಿಧಾನಕ್ಕೆ ಗೌರವ ತಂದಿದ್ದು ನಮಗೆ ಮೋದಿಯವರ ಆಡಳಿತ ಹಿತವೆನಿಸಿದೆ. ನಾನೂ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ. ಬದಲಿಗೆ ನನ್ನ ಸಮಾಜದ ಹಿತವನ್ನು ಬಯಸುವವರನ್ನು ನಾವು ಗೌರವಿಸಲೇಬೇಕು. ಅದರಂತೆ ಮಧುಗಿರಿಯಲ್ಲೂ ಎಸ್ಟಿ ಸಮಾಜದ ಎಲ್.ಸಿ.ನಾಗರಾಜುಗೆ ಟಿಕೆಟ್ ನೀಡಿದ್ದು ಎಲ್ಲ ದಲಿತ ಮುಖಂಡರು ಕಾಲೋನಿಗಳಿಗೆ ತೆರಳಿ ಬಿಜೆಪಿಗೆ ಮತ ಹಾಕಿಸಬೇಕು. ಈ ಮೂಲಕ ಮೀಸಲಾತಿ ಬಗ್ಗೆ ಕಾಳಜಿಯಿರುವ ಮೋದಿಯವರಿಗೆ ಬೆಂಬಲಿಸಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಎಲ್.ಸಿ.ನಾಗರಾಜು ಮಾತನಾಡಿ, ನಾನೊಬ್ಬ ಎಸ್ಟಿ ಸಮಾಜದ ಬಡ ಕುಟುಂಬದ ಸ್ಥಳೀಯ ಹುಡುಗ. ಜೆಡಿಎಸ್-ಕಾಂಗ್ರೆಸ್ ಸ್ಥಳಿಯರಿಗೆ ಟಿಕೆಟ್ ನೀಡಿಲ್ಲ. ಆದರೆ ಜಾತಿಮೀರಿ ಆಲೋಚನೆ ಮಾಡಿ ಈ ಬಾರಿ ಬಿಜೆಪಿ ನನಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಎಸ್ಸಿ-ಎಸ್ಟಿ ಸಮಾಜ ಒಂದಾಗಿ ನನ್ನ ಗೆಲುವಿಗೆ ಸಹಕಾರ ನೀಡಬೇಕು. ನಾನು ಗೆದ್ದರೆ ಗ್ರಾಮವೆಲ್ಲ ಒಂದೇ ಎಂಬ ಭಾವನೆ ಬರುವಂತೆ ಕಾಲೋನಿಗಳು ಎಂಬ ಪರಿಕಲ್ಪನೆಯನ್ನೇ ಬದಲಾಯಿಸುತ್ತೇನೆ. ಬಿಜೆಪಿ ಎಂದಿಗೂ ಮೀಸಲಾತಿ ಪರವಾದ ಪಕ್ಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಹರ್ಯಾಣ ಸಂಸದ ಜಿಲ್ಲಾ ಬಿಜೆಪಿ ಉಸ್ತುವಾರಿ ಸಂಜಯ್ ಭಾಟೆ, ಗೌತಮ್, ಪ.ವರ್ಗಗಳ ಆಯೋಗದ ಸದಸ್ಯ ದೊಡ್ಡೇರಿ ವೆಂಕಟೇಶ್, ಮಂಡಲಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ ಜಯಣ್ಣ, 

ಯುವ ಮೋರ್ಚ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಮುಖಂಡರಾದ ಶಂಕರಪ್ಪ, ನಾಗರಾಜಪ್ಪ, ಭೀಮಣ್ಣ, ಉಪ್ಪಾರಹಳ್ಳಿ ಶಿವಕುಮಾರ್, ಕಾರ್ಪೇನಹಳ್ಳಿ ನವೀನ್, ಚಿತ್ರನಟರಾದ ಪ್ರಕಾಶ್, ರೇಖಾ, ಸುರೇಶ್ ಚಂದ್ರ ಹಾಗೂ ಮುಂತಾದವರು ಇದ್ದರು. 

ವರದಿ ಮಧುಗಿರಿ ಬಾಲು 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು