ಚಿಕ್ಕನಾಯಕನಹಳ್ಳಿ : ಎಪಿಎಂಸಿ ನಫೆಡ್ ಕೊಬ್ಬರಿ ಖರೀದಿ ಕೇಂದ್ರದಲ್ಲಿನ ಕರ್ಮಕಾಂಡದ ಬಗ್ಗೆ ಜಿಬಿ ನ್ಯೂಸ್ ಕನ್ನಡ ವರದಿ ಮಾಡಿತ್ತು ವರದಿಗೆ ಎಚ್ಚೆತ್ತ ಅಧಿಕಾರಿಗಳು 24 ಗಂಟೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ದೌಡು ಅಲ್ಲಿನ ರೈತರಿಂದ ಮಾಹಿತಿ ಸಂಗ್ರಹ.
ಜಿಲ್ಲಾಧಿಕಾರಿ ಹಾಗೂ ನಫೆಡ್ ಅಧಿಕಾರಿಗಳಿಗೆ ಮನವರಿಕೆ ಮಾಡಿ ಸಮಸ್ಯೆ ಶೀಘ್ರ ಪರಿಹಾರ ಎಪಿಎಂಸಿಯಲ್ಲಿನ ಅವ್ಯವಸ್ಥೆ ಬಗ್ಗೆ ಸೂಕ್ತ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚನೆ. ರೈತರಿಗೆ ಅನುಕೂಲವಾಗಲಿ ಎಂದು ಮತ್ತೊಂದು ಕೌಂಟರ್ ತೆರೆದ ಅಧಿಕಾರಿಗಳು.
ಚಿಕ್ಕನಾಯಕನಹಳ್ಳಿ ಭಾಗದ ಕೊಬ್ಬರಿ ಸಣ್ಣದಾದರೂ ಗುಣಮಟ್ಟದಲ್ಲಿ ಅಪ್ಪಟ ಬಂಗಾರ ಎಫ್ ಎ ಕ್ಯೂ 75 ಅಳತೆ ಮಾಪಕದಿಂದ ರೈತರಿಗೆ ಅನ್ಯಾಯ ದಿನಾಂಕ 2.02.2023ರಿಂದ ಪ್ರಾರಂಭಿಸಿ ಪ್ರತಿ ಕಿಂಕಾಲಗೆ 11750ರಂತೆ ಬೆಂಬಲ ಬೆಲೆ 2007 ರೈತರಿಂದ ಒಟ್ಟು 33013.75 ಕ್ವಿಂಟಲ್, 82,532 ಚೀಲ ಸಂಗ್ರಹ ಗುರಿಯಿದ್ದು ರೈತರು 1297 ಜನರಿಂದ 21,236.8 ಕ್ವಿಂಟಲ್ ಖರೀದಿ ಮಾಡಲಾಗಿದೆ.
ಒಟ್ಟು ರೈತರು 2007 ಜನ ನೋಂದಣಿಯಾಗಿದ್ದು 710 ಜನ ಬಾಕಿ ಉಳಿದಿದ್ದಾರೆ ಬಾಕಿ ಬರಬೇಕಾದ 11776.95 ಕ್ವಿಂಟಲ್, ಹಾಗೂ. 29,440 ಚೀಲ ಬರಬೇಕಿದೆ ಅಳತೆ ಮಾಪಕದ ಅವೈಜ್ಞಾನಿಕ ಅಳತೆಯಲ್ಲಿ ಅನ್ಯಾಯ ಆಗುತ್ತಿರುವುದರಿಂದ ರೈತರು ಕಂಗಾಲು.
ಜಿಲ್ಲಾ ತೋಟಗಾರಿಕಾ ನಿರ್ದೇಶಕರು ರಘು ಅಮೋಘ ಟಿವಿ ಯೊಂದಿಗೆ ಮಾತನಾಡಿ ಕೊಬ್ಬರಿ ಖರೀದಿ ಮಾಡಲು ರೈತರಿಗೆ ಸಹಾಯವಾಗಲಿ ಎಂದು ನೆಫೆಡ್ ತೆರೆದಿರುವುದು, ಆದರೆ ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಮನವರಿಕೆ ಯಾಗಿದ್ದು ಈ ಬಗ್ಗೆ ವರದಿ ನೀಡಲಿದ್ದೇನೆ.
ಈಗಾಗಲೇ ಕೊಬ್ಬರಿ ಖರೀದಿ 75 % ಮುಗಿದಿದ್ದು, ಇನ್ನು ಉಳಿದ 25% ಮಾತ್ರ ಬಾಕಿ. ಇದೆ ಗಾತ್ರದಲ್ಲಿ ಸಣ್ಣ ಇದ್ದರೂ ಗುಣಮಟ್ಟದಲ್ಲಿ ನಂಬರ್ ಒನ್ ಕೊಬ್ಬರಿ ಜಿಲ್ಲಾಧಿಕಾರಿಗಳು ಹಾಗೂ ನಫೇಡ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಿದ್ದೇವೆ.
ರೈತ ಹೊನ್ನೇಬಾಗಿ ಶಶಿಧರ್ ಮಾತನಾಡಿ ನಫೆಡ್ ಪ್ರಾರಂಭದಲ್ಲಿ ಅನುಸರಿಸಿದ ಎಫ್ ಎ ಕ್ಯೂ ಅಳತೆ ಮಾಪಕ 30 ವರ್ಷದಿಂದ ಇಂದಿಗೂ ಅನುಸರಿಸುತ್ತಿರುವುದು ರೈತರಿಗೆ ನುಂಗಲಾಗದ ತುತ್ತಾಗಿದೆ. ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಕೊಬ್ಬರಿ ಗುಣಮಟ್ಟವಾಗಿದ್ದು ರೈತರಿಗೆ ಅನ್ಯಾಯವಾಗುತ್ತಿರುವುದು ಬಾರಿ ನಷ್ಟ ನೋವಿನ ಸಂಗತಿ ಅರ್ಧಕರ್ಧ ಸುಕ್ಕು, ಪುಡಿ, ಸಣ್ಣ ಕೊಬ್ಬರಿ ತೆಗೆಯುತ್ತಿರುವುದರಿಂದ ರೈತರ ನಷ್ಟ, ನಫೆಡ್ ಮುಚ್ಚಿ ಇಲ್ಲದಿದ್ದರೆ ಕೊಂಡುಕೊಳ್ಳಿ ಎಂದು ಅಧಿಕಾರಗಳಲ್ಲಿ ಮನವಿ.
ಮಂಚಸಂದ್ರ ರೈತ ಮಹೇಶ್ ಮಾತನಾಡಿ ನಫೆಡ್ ಖರೀದಿ ಕೇಂದ್ರದಲ್ಲಿ ನಡೆಯುತ್ತಿರುವ ಶೋಷಣೆಗೆ 12 ದಿನದಿಂದ ನೊಂದು ರೋಸಿ ಹೋದ ರೈತ ಎಪಿಎಂಸಿ ಆವರಣದಲ್ಲಿ ಪರಿತಪಿಸುತ್ತಾ ತಂದ ಕೊಬ್ಬರಿ ದಾಸ್ತಾನವನ್ನು ಕಮಿಷನ್ ಅಂಗಡಿ ಮಾಲೀಕರಿಗೆ ನೀಡಿ ಬಾಡಿಗೆ ತಂದ ಟ್ಯಾಕ್ಟರ್, ಕೂಲಿ ಹುಟ್ಟುತ್ತಿಲ್ಲ ಎಂದು ಹಣವನ್ನು ತೋಡಿಕೊಂಡರು.
ಮತ್ಘಟ್ಟ ರೈತ ಕುಮಾರ್ ಮಾತನಾಡಿ ಒಂದು ಚೀಲಕ್ಕೆ 10 ರಿಂದ 12 ಕೆಜಿ ನಷ್ಟ ಆಗುತ್ತಿದೆ ನಾಮಕಾವಸ್ತೆ ನಫೆಡ್ ಮೂಲಕ ರೈತರಿಗೆ ಅನುಕೂಲ ಮಾಡುವ ಬದಲು ನಷ್ಟವೇ ಹೆಚ್ಚಾಗುತ್ತಿದೆ ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಅಧಿಕಾರಿಗಳು ಸಹ ಗಮನ ಹರಿಸುತ್ತಿಲ್ಲ, ರೈತರನ್ನ ಅಧಿಕಾರಿಗಳನ್ನು ಇಟ್ಟುಕೊಂಡು ಹೆದರಿಸುತ್ತಿದ್ದಾರೆ,ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಇನ್ನಿತರ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು.ಹಣವನ್ನು ಸರಿಯಾದ ಸಮಯಕ್ಕೆ ಖಾತೆಗೆ ಹಾಕಬೇಕು ಎಂದು ಮನವಿ ಮಾಡಿದರು.
ರೈತ ಸಾವಶೆಟ್ಟಿಹಳ್ಳಿ ಶಿವಕುಮಾರ್ ಮಾತನಾಡಿ ಎಪಿಎಂಸಿ ಆವರಣದಲ್ಲಿ ರೈತರಿಗೆ ನಿಲ್ಲಲು, ಮಲಗಲು ಸೂಕ್ತ ಜಾಗವಿಲ್ಲ, ವಿಷ ಜಂತುಗಳ ಕಾಟ, ಕುಡಿಯುವ ನೀರಿಲ್ಲ, ಬೆಳಕಿನ ವ್ಯವಸ್ಥೆ ಇಲ್ಲ, ಶೌಚಾಲಯ ವ್ಯವಸ್ಥೆ ಇಲ್ಲ, ಹಾಗೂ ನಮ್ಮ ದಾಸ್ತಾನಿಗೆ ಯಾವುದೇ ಭದ್ರತೆ ಇಲ್ಲದೆ ಇರುವುದು ಆತಂಕ ಆಗಿದೆ. ಇಲ್ಲಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿ.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.