ಕೇಂದ್ರ ಸರಕಾರದ ಪೆಟೆಂಟ್ ಗೆ ಆಯ್ಕೆಯಾದ ತುಮಕೂರಿನ ಸಿದ್ದು ಹಾಗೂ ಶಂಕರ್ ಹಲಸು ಆಯ್ಕೆ.

 ಗುಬ್ಬಿ : ಗುಬ್ಬಿ ತಾಲ್ಲೂಕಿನ ಸಿದ್ದು ಹಾಗೂ ಶಂಕರ ಹಲಸಿನ ಹಣ್ಣುಗಳು ಇಡೀ ರಾಷ್ಟ ಹಾಗೂ ರಾಜ್ಯದಲ್ಲಿ ಸಿಕ್ಕಾಪಟ್ಟೆ ಫೇಮಸ್.


  ಈ ಹಲಸಿನ ವಿಶೇಷ ಗುಣಗಳು ಕಂಡ ಕೇಂದ್ರ ಸರಕಾರ ಪೆಟೆಂಟ್ ನೀಡುವ ಮೂಲಕ ಎರಡು ಹಲಸುಗಳಿಗೆ ವಿಶೇಷ ಮಾನ್ಯತೆ ಸಿಕ್ಕಂತಾಗಿದೆ ಗುಬ್ಬಿ ತಾಲೂಕಿನ ಚೇಳುರಿನ ಸಿದ್ದು ಹಾಗೂ ತಿಪಟೂರು ತಾಲೂಕಿನ ಚೌಡಲಪುರದಲ್ಲಿ ಇರುವ ಶಂಕರ ಹಲಸು, ದೇಶದಲ್ಲಿ ಉತ್ಕೃಷ್ಟವೆಂದು ಗುರುತಿಸಲಾಗಿದೆ.


 ರಾಜ್ಯದಲ್ಲಿಯೇ ಮೊದಲ ಬಾರಿಗೆ ತೋಟಗಾರಿಕಾ ಬೆಳೆ ಹಲಸಿನ ಹಕ್ಕು ಸ್ವಮಿತ್ಯ ಸಿಕ್ಕಿದೆ ಸಿದ್ದು ಶಂಕರ ಹಲಸು ಬೆಳೆಯುವ ಮಾಲೀಕರು ಹಕ್ಕು ಸ್ವಮಿತ್ಯ  ಪಡೆದಿದ್ದು ಮುಂದಿನ 20 ವರ್ಷ ಈ ಹಣ್ಣಿನ ತಳಿಯನ್ನು ಬೇರೆಯವರು ಬೆಳೆಯಲು ಅವಕಾಶವಿರುವುದಿಲ್ಲ ಹಣ್ಣಿನ ಮಾಲೀಕರು ಅನುಮತಿ ನೀಡಿದರೆ ಮಾತ್ರ ಬೇರೆಯವರು ಈ ತಳಿಗಳನ್ನು ಬೆಳೆಸಿ ಮಾರಾಟ ಮಾಡಬಹುದು.


 ತುಮಕೂರು ಹೊರವಲಯದಲ್ಲಿರುವ ಐ ಐ ಎಚ್ ಆರ್ ಸಂಸ್ಥೆಯು 2017ರಲ್ಲಿ ಗುಬ್ಬಿ ತಾಲೂಕಿನ ಚೇಳುರಿನ ಸಿದ್ದು ಹಲಸು ಮತ್ತು 2019 ರಲ್ಲಿ ಚೌಡಾ ಪ್ರದ ಶಂಕರಾಹಲಸಿನ ತಳಿಯನ್ನು ದೇಶದ ಅತ್ಯುತ್ತಮ ಹಲಸಿನ ತಳಿಗಳು ಎಂದು ಗುರುತಿಸಿದೆ.


 ಇದೇ ಸಂದರ್ಭದಲ್ಲಿ ಮಾತನಾಡಿದ ಚೇಳೂರಿನ ಪರಮೇಶ್ ಈ ಹಲಸಿನಲ್ಲಿ ಅತ್ಯಂತ ಹೆಚ್ಚಿನ ಕಬ್ಬಿನಾಂಶ ವಿಟಮಿನ್ ಪ್ರೋಟೀನ್ಗಳು ಇರುವುದರಿಂದ ಈ ಹಲಸಿನ ಗುಣಮಟ್ಟವು ಸಹ ಚೆನ್ನಾಗಿದೆ ಹಾಗಾಗಿ ಈ ಒಂದು ಹಲಸಿಗೆ ಪೇಂಟೆಂಟ್ ಸಿಕ್ಕಿರುವುದು ಹೆಚ್ಚಿನ ಖುಷಿ ತಂದಿದೆ ಎಂದು ತಿಳಿಸಿದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು