ಶಿರಾ; ಜಾಗತಿಕ ತಾಪಮಾನ ಏರಿಕೆಯ ವಿಷಯ ಆತಂಕ ಉಂಟುಮಾಡುತ್ತದೆ ಆದ ಕಾರಣ ಅರಣ್ಯ ಸಂರಕ್ಷಣೆಯನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರು ಹೇಳಿದರು.
ಅವರು ಶಿರಾ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ, ವನ ಮಹೋತ್ಸವ ಹಾಗೂ ಗ್ರಾ.ಪಂ.ಮಳಿಗೆಗಳ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಎಷ್ಟೇ ಜಾಗೃತಿ ಮೂಡಿಸಿ,ಕಾನೂನು ಜಾರಿಗೆ ಮಾಡಿದರು ಬಳಕೆ ನಿಯಂತ್ರಣ ಮಾಡಲು ಅಗುತ್ತಿಲ್ಲ ಪರಿಸರಕ್ಕೆ ಸೇರಿ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಗ್ರಾ.ಪಂ.ಗಳ ಕಛೇರಿ ನವೀಕರಣ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಣೆಗೆ, ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅದ್ಯತೆ ನೀಡುತ್ತೇನೆ ಎಂದರು.
ತಾ.ಪಂ.ಇ.ಓ ಅನಂತರಾಜು, ವಲಯ ಅರಣ್ಯಾಧಿಕಾರಿ ನವನೀತ್, ಸಾಮಾಜಿಕ ಅರಣ್ಯಾಧಿಕಾರಿ ಹಂಸವಿ, ತಾವರೆಕೆರೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಶಿವಕುಮಾರ್ ಸದಸ್ಯರು
ಮತ್ತಿತರರು ಇದ್ದರು.
ವರದಿ ಶಿರಾ ಶ್ರೀಮಂತ್