ಗುಬ್ಬಿ : ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ವಿಚಾರ ಧಾರೆಗಳನ್ನು ಪೋಷಕರು ಕಲಿಸಬೇಕು ಎಂದು ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನಿಟ್ಟೂರು ಅನುಭವ ಮಂಟಪದಲ್ಲಿ ಅನಾದಿ ನಿರಂಜನ ಜಂಗಮೋತ್ಸವ ಮತ್ತು ನೊಳಂಬೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರಣ ಪರಂಪರೆ ಎಂಬುದು ಸಾವಿರಾರು ವರ್ಷಗಳ ಇತಿಹಾಸವಿರುವ ಸಂಸ್ಕಾರವಾಗಿದ್ದು ಪ್ರತಿಯೊಬ್ಬ ಶರಣರು ತಿಳಿಸಿರುವ ವಚನಗಳ ಸಾರಾಂಶವೇ ಮಾನವೀಯತೆ ಮೇಲೆ ಬದುಕು ಸಾಗಬೇಕು ಎಂಬುದು ಹಾಗಾಗಿ ಪ್ರತಿಯೊಬ್ಬರೂ ಸಹ ಹಿಂದಿನವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಸಮಾಜ ಹಾಗೂ ಕುಟುಂಬ ಸರಿ ದಾರಿಯಲ್ಲಿ ನಡೆಯುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಸಹ ಮುಂದೆ ಗುರಿ ಇರಬೇಕು ಹಿಂದೆ ಗುರುವಿದ್ದಾಗ ಅವನು ನಡೆಯುವ ದಾರಿಯು ಸಹ ಸರಿಯಾಗಿಯೇ ಇರುತ್ತದೆ ಇಂತಹ ಶರಣರ ಕಾರ್ಯಕ್ರಮಗಳು ವಚನಗಳ ಕಾರ್ಯಕ್ರಮಗಳಲ್ಲಿ ಮಕ್ಕಳು ಪೋಷಕರು ಭಾಗಿಯಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಕನಕಪುರದ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಮಾತನಾಡಿ ಶರಣ ತತ್ವ ಪರಂಪರೆಗಳು ಮಾನವನ ಜೀವನಾಡಿಗಳಾಗಿದ್ದು ಬಸವೇಶ್ವರರು ಹೇಳಿದ ಪ್ರತಿಯೊಂದು ಸಾಲುಗಳು ವಚನಗಳು ಇನ್ನೂ ನೂರಾರು ವರ್ಷಗಳು ಕೂಡ ಜೀವಂತಿಕೆಯಿಂದ ಇರುತ್ತವೆ ಅವರ ಪ್ರತಿಯೊಂದು ಸಾಲಿನಲ್ಲೂ ನಮ್ಮ ಬದುಕಿನ ಆರಂಭದಿಂದ ಕೊನೆಯವರೆಗೂಬದುಕನ್ನು ರೂಪಿಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೋಳಂಬ ವೆಬ್ ಸೈಟ್ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಿಂಗಟಗೆರೆ ಮಠದ ಮಹಾಲಿಂಗ ಸ್ವಾಮೀಜಿ, ಪಾಂಡೊಮಟ್ಟಿ ಮಠದ ಡಾ ಗುರುಬಸವ ಸ್ವಾಮೀಜಿ, ಮಾಗಡಿಯ ರುದ್ರೇಮುನೇಶ್ವರ ದ ಚಂದ್ರಶೇಖರ ಸ್ವಾಮೀಜಿ, ಕುಣಿಗಲ್ ಹಿರೇಮಠದ ಶಿವಕುಮಾರ ಶಿವಯೋಗಿ ಸ್ವಾಮೀಜಿ, ತೆವೆಡಿಹಳ್ಳಿ ಮಠದ ಗೋಸಲ ಚನ್ನಬಸವೇಸ್ವರ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಧ್ವಾನ್ ಎಂ ಜಿ ಸಿದ್ದರಾಮಯ್ಯ, ಕೊರಂ ಬಸವರಾಜು, ಶೈಲಾ ನಾಗರಾಜು, ಸಿದ್ದರಾಮೇಗೌಡ, ನಿರಂಜನಮೂರ್ತಿ, ಬಿ ಎಂ ನಂಜುಂಡಪ್ಪ, ಸೇರಿದಂತೆ ನೂರಾರು ಶರಣ ಭಕ್ತರು ಹಾಜರಿದ್ದರು.