ಒಕ್ಕಲಿಗನಾಗಿದ್ದರೂ ನನ್ನ ಸಮುದಾಯವೇ ನನ್ನ ಕೈ ಬಿಟ್ಟದ್ದು ಬೇಸರ ತಂದಿದೆ ಶಾಸಕ ಎಸ್ ಆರ್ ಶ್ರೀನಿವಾಸ್.

 ಗುಬ್ಬಿ : ಈ ಬಾರಿಯ ಚುನಾವಣೆಯಲ್ಲಿ ಸಣ್ಣಪುಟ್ಟ ಸಮುದಾಯಗಳು ನನ್ನ ಕೈ ಹಿಡಿದವು ನಾನು ಒಕ್ಕಲಿಗನಾಗಿದ್ದರು ನಮ್ಮ ಸಮುದಾಯವೇ ನನ್ನ ಕೈಹಿಡಿಯದೆ ಇದ್ದದ್ದು ಬೇಸರ ತಂದಿದೆ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.


ತಾಲೂಕಿನ ಹೇರೂರಿನ ಬಾಲಾಜಿ ಕನ್ವೆನ್ಷನಲ್ ಹಾಲ್ ನಲ್ಲಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್ ಆರ್ ಶ್ರೀನಿವಾಸ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 20 ವರ್ಷಗಳಿಂದ ನಿಮ್ಮ ಜೊತೆಯಲ್ಲೇ ಇದ್ದೇನೆ ನಾನು ಏನು ಎಂಬುದು ತಮಗೆಲ್ಲರಿಗೂ ತಿಳಿದಿದ್ದರೂ ಸಹ 4 ವರ್ಷ 6 ತಿಂಗಳುಗಳ ಕಾಲ ನನ್ನ ಜೊತೆಯಲ್ಲೇ ಇರುತ್ತೀರ ಎಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತೀರಾ ಇನ್ನು ನಾಲ್ಕು ತಿಂಗಳ ಅವಧಿಯಲ್ಲಿ ನನ್ನ ಕೈ ಬಿಟ್ಟಿದ್ದೀರಾ ಜೆಡಿಎಸ್ ಪಕ್ಷ ನಾನೆಂದು ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ ಕುಮಾರಸ್ವಾಮಿ ಹಾಗೂ ನನ್ನ ನಡುವೆ ಇದ್ದಂತಹ ವೈಯಕ್ತಿಕ ವೈಮನಸು ಬಿಟ್ಟರೆ ಬೇರೇನು ಇಲ್ಲ ದೇವೇಗೌಡರನ್ನು ನಾನು ಎಂದಿಗೂ ಸಹ ವಿರೋಧ ಮಾಡಿಲ್ಲ ಮಾಡುವುದು ಇಲ್ಲ ನನ್ನ ಮನೆಯ ಮುಂದೆ ಕುಮಾರಸ್ವಾಮಿ ಪ್ರತಿಭಟನೆ ಮಾಡಿಸಿದಾಗ ನನಗೆ ಬೇಸರವಾಗಿ ನಾನು ಮಾತನಾಡಿರುವುದು ನಿಜ ನಿಮ್ಮ ಏನೇ ಕಷ್ಟ ಬಂದರೂ ನೀವು ಫೋನ್ ಮಾಡುವುದು ನನಗೆ ಹೊರತು ಕುಮಾರಸ್ವಾಮಿಗೆ ಅಲ್ಲ ಆದರೂ ಕುಮಾರಸ್ವಾಮಿಯವರನ್ನ ನಾನು ಏನೋ ಅಂದುಬಿಟ್ಟೆ ಎಂದು ಈ ಬಾರಿ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ನನ್ನನ್ನು ಕೈಬಿಟ್ಟಿದೆ

 ನಾನು ಇರುವುದರಿಂದಲೇ ನಿಮ್ಮ ಸಮುದಾಯಕ್ಕೆ ಒಂದಷ್ಟು ಗೌರವ ಸಿಕ್ಕಿದೆ ಎಂಬುದನ್ನು ಮರೆಯಬೇಡಿ ಬೇರೆ ಯಾರೋ ಗೆದ್ದಿದ್ದರೆ ಅವರ ಮನೆಯ ಮುಂದೆ ನೀವು ನಿಂತಿದ್ದಾಗ ನಿಮಗೆ ಗೊತ್ತಾಗುತ್ತಿತ್ತು ನನ್ನ ಕಳೆದುಕೊಂಡಿರುವುದು ತಪ್ಪು ಎಂದು, ಚುನಾವಣೆಯ ಮುಂಚೆ ಬರುವವರು ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂದು ಹೇಗೆ ನಂಬುತ್ತಿರೋ ಅರ್ಥವಾಗುತ್ತಿಲ್ಲ ಒಕ್ಕಲಿಗ ಸಮುದಾಯದ ಎಲ್ಲಾ ಗ್ರಾಮಗಳಿಗೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.

ಮಾನ್ಯ ಮುಖ್ಯಮಂತ್ರಿ ಅವರ ಜೊತೆಯಲ್ಲಿ ಮಾತನಾಡಿ ಒಕ್ಕಲಿಗ ಸಮುದಾಯ ಭವನ ಸೇರಿದಂತೆ ನಮ್ಮ ಸಮುದಾಯಕ್ಕೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಡುತ್ತೇನೆ ಎಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಿ ನಾನು ಪ್ರತಿ ಸಮುದಾಯದ ಜನರ ಹೃದಯದಲ್ಲಿದ್ದೇನೆ ಎಂಬುದನ್ನು ನೀವು ಮರೆಯಬೇಡಿ ಈ ಬಾರಿಯ ಚುನಾವಣೆಯಲ್ಲಿ ಯಾರು ಮತಗಳನ್ನು ಹಾಕಿ ಗೆಲ್ಲಿಸಿದ್ದಾರೆ ಎಂಬುದು ನಿಮಗೆ ಅರ್ಥವಾಗಿದೆ ಈಗ ಮಾಡಿರುವ ತಪ್ಪನ್ನು ಮುಂದಿನ ಚುನಾವಣೆಯಲ್ಲಿ ಮಾಡದೆ ನಮ್ಮ ಪಕ್ಷವನ್ನು ಗೆಲ್ಲಿಸುವುದಕ್ಕೆ ತಾವೆಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.

   ವಕೀಲ ಚಿಕ್ಕರಂಗೇಗೌಡ ಮಾತನಾಡಿ ಈ ಭಾರಿಯ ಗುಬ್ಬಿ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿತ್ತು ಶ್ರೀನಿವಾಸ್ ಅವರ ಗೆಲುವಿನಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದ್ದು ಸರ್ಕಾರವು ಸಹ ನಮ್ಮದೇ ಇರುವುದರಿಂದ ಗುಬ್ಬಿ ವಿಧಾನಸಭಾ ಕ್ಷೇತ್ರ ಈ ಬಾರಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ತಂದು ಕೆಲಸ ಮಾಡಲು ಅನುಕೂಲವಾಗಿದೆ ಇನ್ನು ರಾಜ್ಯದಲ್ಲಿ ಒಕ್ಕಲಿಗರ ಸಂಘವಿದ್ದು ಅದನ್ನು ಬಳಸಿಕೊಂಡು ಗುಬ್ಬಿ ಕ್ಷೇತ್ರದಲ್ಲಿಯೂ ಸಹ ಹೆಚ್ಚಿನ ನಮ್ಮ ಸಮುದಾಯ ಅಭಿವೃದ್ಧಿ ಮಾಡುವುದಕ್ಕೆ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ನಾಡ ಪ್ರಭು ಕೆಂಪೇಗೌಡರ ಪುತ್ತಳಿ ನೀಡುವ ಮೂಲಕ ಶ್ರೀನಿವಾಸ್ ಹಾಗೂ ಪತ್ನಿ ಭಾರತಿ ಶ್ರೀನಿವಾಸ್ ಅವರನ್ನು ಒಕ್ಕಲಿಗ ಸಮುದಾಯದಿಂದ ಗೌರವಿಸಲಾಯಿತು.

  ಕಾರ್ಯಕ್ರಮದಲ್ಲಿ ಮುಖಂಡರಾದ ಮುರುಳಿಧರ್ ಹಾಲಪ್ಪ, ಪಟೇಲ್ ದೇವರಾಜು, ಚೇತನ್ ಲಿಂಗಮ್ಮನಹಳ್ಳಿ, ಸಿ ಕೆ ಗೌಡ, ಮೊಹನ್,ವೆಂಕಟೇಶ್,ರಾಜಣ್ಣ,ಲೋಕೇಶ್, ಮದುವೆ ಮನೆ ಕುಮಾರ್,ಮಂಜುನಾಥ್, ಕೇಬಲ್ ರಾಜು,ಸೇರಿದಂತೆ ತಾಲೂಕಿನ ಒಕ್ಕಲಿಗ ಸಮುದಾಯದ ಮುಖಂಡರು ಕಾರ್ಯಕರ್ತರು ವಾಸಣ್ಣ ಅಭಿಮಾನಿಗಳು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು