ಭೂವನಹಳ್ಳಿ ಗ್ರಾ.ಪಂ.ನೂತನ ಕಟ್ಟಡಕ್ಕೆ ಹಾಗೂ ಕಾಡಜ್ಜನಪಾಳ್ಯ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಟಿ.ಬಿ.ಜಯಚಂದ್ರ.

 ಶಿರಾ: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಅಯ-ವ್ಯಯದಲ್ಲಿ ಹಣ ಮೀಸಲಿರಿಸಿ ನುಡಿದಂತೆ ನಡೆದಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.


ಅವರು ತಾಲ್ಲೂಕಿನ ಭೂವನಹಳ್ಳಿ ಗ್ರಾ.ಪಂ.ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ, ಕಾಡಜ್ಜನಪಾಳ್ಯ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡುವಲ್ಲಿ ವಿಳಂಬನೀತಿ ಜೊತೆಗೆ ತಾರತಮ್ಯ ತೋರುತ್ತಿದೆ ಇದನ್ನು ತಪ್ಪಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳೊಟ್ಟಿಗೆ ಸಮನ್ವಯ ಕಾದುಕೊಳ್ಳಲಾಗುವುದು ಎಂದರು.

ಶಿರಾ ತಾಲ್ಲೂಕಿಗೆ ಭರ್ಜರಿ ಅನುದಾನವನ್ನು ತರಲು ಎಲ್ಲಾ ರೀತಿಯಲ್ಲಿ ಸಜ್ಜಾಗಿರುವುದಾಗಿ ತಿಳಿಸಿದರು.

ಭೂವನಹಳ್ಳಿ ಗ್ರಾ.ಪಂ.ಅಧ್ಯಕ್ಷ ಮಹೇಶ್,ಸದಸ್ಯರಾದ ರಂಗಮ್ಮ,ಗೀತಾ ಬಾಯಿ, ಲಲಿತಾಬಾಯಿ, ಮುರುಳಿ,ನಾಗಮ್ಮ,ಲೋಕೇಶ್,ಮಂಜುಳಾ, ಪುಷ್ಪಲತಾ, ಮುಖಂಡರಾದ ಬಿ.ಎಸ್.ಸತ್ಯನಾರಾಯಣ, ಶಶಿಧರ್ ಗೌಡ, ಜನಾರ್ಧನ್, ಲಕ್ಷ್ಮಿಕಾಂತ್ ಮತ್ತಿತರರು ಇದ್ದರು.

ವರದಿ ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು