ಗುಬ್ಬಿ : ಪಟ್ಟಣದಲ್ಲಿನ ಬಾಬು ಜಗಜೀವನ್ ರಾಮ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ್ ಅರಸು ಅವರ 108ನೇ ವರ್ಷದ ಜಯಂತಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೆ ಹೆಚ್ಚು ಒತ್ತು ಕೊಡುತ್ತಾ ಇದ್ದು, ಓದಿಗೆ ಹೆಚ್ಚು ಗಮನ ಕೊಡಲು ಸಾಧ್ಯವಿಲ್ಲ ಇದು ವಿಧ್ಯಾಭ್ಯಾಸಕ್ಕೆ ಒಳ್ಳೆಯ ವಯಸ್ಸು. ಜವಾಬ್ದಾರಿಯಿಂದ ವಿಧ್ಯಾಭ್ಯಾಸವನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನರಕಯಾದನೆಗೆ ಒಳಗಾಗುವ ಸನ್ನಿವೇಶ ಸೃಷ್ಟಿಯಾಗ ಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಎಚ್ಚರಿಕೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಸರ್ಕಾರದ ಸವಲತ್ತನ್ನು ಶಿಕ್ಷಣಕ್ಕೆ ನೀಡುತ್ತಾ ಬಂದಿದ್ದು, ಇದಕ್ಕೆ ಪೂರಕವಾಗಿ ಪ್ರತಿಯೊಂದು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹೆಣ್ಣು ಮಕ್ಕಳದೇ ಕಾರುಬಾರು ಆಗಿದ್ದು, ಬಹುತೇಕ ನೂರಕ್ಕೆ ತೊಂಭತ್ತು ಭಾಗ ವಿದ್ಯಾಭ್ಯಾಸದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಸರ್ಕಾರಿ ಸವಲತ್ತನ್ನು ಪಡೆಯುವ ಜೊತೆಗೆ ಸರ್ಕಾರಿ ಉದ್ಯೋಗದ ಮುಖೇನ ಎಲ್ಲಾ ರಂಗದಲ್ಲೂ ಹೆಣ್ಣು ಮಕ್ಕಳದ್ದೇ ಸಾಮ್ರಾಜ್ಯ , ನಮ್ಮ ತಾಲೂಕಿನ ಸರ್ಕಾರಿ ಅಧಿಕಾರಗಳಲ್ಲಿ ಬಹುತೇಕ ಪಾಲು ಹೆಣ್ಣು ಮಕ್ಕಳತ್ತಾಗಿದೆ. ಈಗಲಾದರೂ ಗಂಡು ಮಕ್ಕಳು ಹೆಚ್ಚೆತ್ತು ವಿಧ್ಯಾಭ್ಯಾಸಕ್ಕೆ ಮುಂದೆ ಬರದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳೇ ಉತ್ತಮ ಸಮಾಜವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಹಾಗಾಗಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದಾಗ ಅರಸು ಅವರು ಶೋಷಿತ ವರ್ಗಗಳಿಗೆ ಕೊಟ್ಟಿರುವ ಕೊಡುಗೆಗಳನ್ನು ಸ್ಮರಿಸಿಕೊಳ್ಳಲು ಸಾಧ್ಯ. ಇಂದು ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ್ ಅರಸು ಅವರ 108 ನೇ ಜನ್ಮದಿನವನ್ನು ಆಚರಿಸುತ್ತಾ ಇದ್ದು, ಎಲ್ಲಾ ವರ್ಗಗಳ ನಿಗಮ ಮಂಡಳಿಯನ್ನು ರಚಿಸಿ ಆರ್ಥಿಕವಾಗಿ ಸಬಲರಾಗಲು ಮೂಲ ಕಾರಣಿ ಭೂತರಾಗಿದ್ದಾರೆ ಎಂದು ತಿಳಿಸಿದರು.
ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪುರಸ್ಕಾರ, ರಾಷ್ಟ್ರ ಮಟ್ಟದಲ್ಲಿ ಕರಾಟೆ ಸ್ಪರ್ಧೆ ಭಾಗವಹಿಸಿ ಬಂಗಾರ ಹಾಗೂ ಬೆಳ್ಳಿ ಪದಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ. ಆರತಿ, ತಾಲೂಕು ವೈದ್ಯಾಧಿಕಾರಿ ಡಾ. ಬಿಂದು ಮಾಧವ, ಪ.ಪಂ.ಸದಸ್ಯ ಮಹಮದ್ ಸಾದಿಕ್, ಮುಖ್ಯಾಧಿಕಾರಿ ಶಂಕರ್, ಶ್ರೀನಿವಾಸ್, ಸಂಘದ ಅಧ್ಯಕ್ಷ ಕಾಂತರಾಜ್ ಅರಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಜಯ್ ಕೊಪ್ಪ ಗುಬ್ಬಿ