ಗುಬ್ಬಿ : ಇ-ಆಡಳಿತ ಯೋಜನೆಯಡಿ “ತಂತ್ರಾಂಶ ಆಧಾರಿತ ಯೋಜನೆಯು ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಆಡಳಿತವನ್ನು ವೇಗಗೊಳಿಸುವ ಮಹತ್ತರ ಉದ್ದೇಶಕ್ಕಾಗಿ ಬರುವ ಸೋಮವಾರದಿಂದ ತಾಲೂಕು ಆಡಳಿತವು ತಾಲೂಕು ಕಚೇರಿಯಲ್ಲಿ "ಇ ಆಫೀಸ್ ಯೋಜನೆ" ಯನ್ನು ಆರಂಭಿಸಲಾಗುತ್ತಿದೆ ಎಂದು ತಹಶೀಲ್ದಾರ್ ಬಿ ಆರತಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಒದಗಿಸುವ ಮಾಹಿತಿಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ತರ ಉದ್ದೇಶದೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನದ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಇ-ಆಡಳಿತ ಕೇಂದ್ರದ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಈ ಹೊಸ ನಾಗರಿಕ ಪೋರ್ಟಲ್ ಅನ್ನು ಜಾರಿಗೆ ತಂದಿದೆ.
ಆಡಳಿತದಲ್ಲಿ ನಾಗರಿಕರು ಸಕ್ರಿಯವಾಗಿ ಈ ಪೋರ್ಟಲ್ ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಪ್ರಕಟವಾದ ಸರ್ಕಾರಿ ಆದೇಶಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಇ-ಆಫೀಸ್ ಭಾರತ ಸರ್ಕಾರದ ಇ-ಆಡಳಿತ ಯೋಜನೆಯಡಿ “ತಂತ್ರಾಂಶ ಆಧಾರಿತ ಯೋಜನೆ” ಯು ಇದ್ದಾಗಿದೆ. ಹಾಗಾಗಿ ಇ ಆಫೀಸ್ ಬರುವ ಸೋಮವಾರದಿಂದ ಚಾಲ್ತಿಗೆ ತರಲು ಆರಂಭಿಸುತ್ತಾ ಇದ್ದು ಸಾರ್ವಜನಿಕರು ಹಾಗೂ ರೈತರ ಅರ್ಜಿಗಳನ್ನು ಗಣಕೀಕೃತ ಮೂಲಕ ಸ್ವೀಕರಿಸಿ ಲಗತ್ತುಗಳನ್ನು ಸ್ಕ್ಯಾನ್ ಮಾಡಿ ಸಂಬಂಧ ಪಟ್ಟ ವಿಷಯ ನಿರ್ವಾಹಕರಿಗೆ ಆನ್ ಲೈನ್ ಮೂಲಕ ಕಳುಹಿಸಲಾಗುವುದರಿಂದ ಅರ್ಜಿಗಳನ್ನು ಸ್ವೀಕರಿಸಲು ವಿಳಂಬವಾಗಲಿದ್ದು, ಇದಕ್ಕೆ ಸಹಕರಿಸಿ ಪಾರದರ್ಶಕತೆ ಮತ್ತು ನಿಖರತೆಯೊಂದಿಗೆ ಸರ್ಕಾರದ ಆಡಳಿತವನ್ನು ವೇಗಗೊಳಿಸುವ ಮಹತ್ತರ ಕಾರ್ಯಕ್ಕೆ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ವರದಿ ಸಂಜಯ್ ಕೊಪ್ಪ