ಭೂಕಬಳಿಕೆ ಎರಡನೇ ತನಿಖೆಯಲ್ಲಿ 583 ಎಕರೆ ನಕಲಿ ದಾಖಲೆ ಸೃಷ್ಟಿ ಶಾಸಕ ಶ್ರೀನಿವಾಸ್ ಅಚ್ಚರಿ.

 


ರೈತರು ಉಳುಮೆ ಮಾಡುತ್ತಿದ್ದ ಜಮೀನಿನ ದಾಖಲಾತಿಯನ್ನು ಬದಲಾಯಿಸಿ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದ ಮಧ್ಯವರ್ತಿಗಳು ಎಂತಹ ಹುದ್ದೆಯಲ್ಲಿದ್ದರೂ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ನೀಡಿದ ಶಾಸಕ ಎಸ್ ಆರ್ ಶ್ರೀನಿವಾಸ್.


 ಗುಬ್ಬಿ  ತಾಲೂಕಿನ ಎಸ್.ಕೊಡಗಿಹಳ್ಳಿ ಪಾಳ್ಯ ಗ್ರಾಮದಲ್ಲಿ ಗ್ರಾಮೀಣಾ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಮನೆ ಮನೆ ನಳ ಸಂಪರ್ಕ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಭೂ ಹಗರಣದ ಬಗ್ಗೆ ತನಿಖೆಯು ನಡೆಯುತ್ತಾ ಇದ್ದು, ಎರಡನೇ ಹಂತದಲ್ಲಿ 583 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿರುವುದು ತನಿಖೆಯಿಂದ ತಿಳಿದು ಬಂದಿದ್ದು, 1988-89, 1995-96 ರಲ್ಲಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ಬೇರೆಯವರಿಗೆ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿಕೊಟ್ಟಿದ್ದು ತನಿಖೆಯ ಹಂತದಲ್ಲಿ ತಿಳಿದು ಬಂದಿದೆ ಎಂದ ಅವರು ಸುಮಾರು ವರ್ಷಗಳಿಂದ ಭೂಮಿಯಲ್ಲಿ ತೆಂಗು ಅಡಿಕೆ ಬೆಳೆದ ಫಲಾನುಭವಿಗಳು ಒಬ್ಬರದರೆ ಸ್ಥಳದಲ್ಲಿರುವುದು ಮತ್ತೊಬ್ಬರು ಇವೆಲ್ಲವನ್ನೂ ನೋಡ್ತಾ ಇದ್ರೆ ಆಶ್ಚರ್ಯ ಹಾಗಿದೆ. ತಾಲೂಕಿನಲ್ಲಿ 200 ಮಂದಿಗೆ ನಕಲಿ ದಾಖಲೆ ಸೃಷ್ಟಿಸಿರುವುದು ತನಿಖೆಯಿಂದ ಗೊತ್ತಾಗಿದ್ದು, ಪಟ್ಟಣ ಪಂಚಾಯಿತಿಯ ಅಧ್ಯಕ್ಷರ ಮೇಲೆ ಮೊದಲ ಹಂತದಲ್ಲಿ ಕೇವಲ ಎರಡು ಆಪಾದನೆ ಇದ್ದು, ಎರಡನೇ ಹಂತದ ತನಿಖೆಯಲ್ಲಿ ಐದು ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಹಾಗಲವಾಡಿ, ಚೇಳೂರು, ನಿಟ್ಟೂರು ಹೋಬಳಿಯಲ್ಲಿ ಹೆಚ್ಚು ನಕಲಿ ದಾಖಲೆ ಸೃಷ್ಟಿಯಾಗಿದೆ ಎಂದು ತನಿಖಾ ವರದಿಯಿಂದ ತಿಳಿದು ಬಂದಿದೆ ಎಂದ ಅವರು ಈ ಎಲ್ಲಾ ತೊಡಕುಗಳನ್ನು ಬಗೆಹರಿಸಿ ಉಳುಮೆದರರಿಗೆ ಜಮೀನನ್ನು ಉಳಿಸಿಕೊಡಲು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದು ಎಂ. ಅರ್. ವಜಾ ಮಾಡಿ ರೈತರಿಗೆ ನ್ಯಾಯ ಒದಗಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

  ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದೆ ರೈತರಿಗೆ ತೊಂದರೆಯಾಗುತ್ತಾ ಇದ್ದು ಹೊಸ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದ ಅವರು ಸುಮಾರು ಐದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು ನಗರದ ಅಭಿವೃದ್ದಿಯ ಕಡೆ ಹೆಚ್ಚು ಒತ್ತು ನೀಡಲಾಗಿದ್ದು, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಎಂಟು ತಿಂಗಳಿನಿಂದ ಅಧ್ಯಕ್ಷರು ಇಲ್ಲದ ಕಾರಣ ಅನುಮೋದನೆಗೆ ತಡವಾಗಿದ್ದು, ಅ.14ರ ಶುಕ್ರವಾರ ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಿಶ್ಚಯವಾಗಿದ್ದು ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

 ತನಿಖಾ ಹಂತದಲ್ಲಿರುವ ಭೂ ಹಗರಣದಲ್ಲಿ ಶಾಮೀಲಾಗಿರುವ ಯಾವುದೇ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

ವರದಿ: ವೀರಭದ್ರಯ್ಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು