ಕೊಳವೆ ಬಾವಿಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಿ ಗುಬ್ಬಿ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ.


ಗುಬ್ಬಿ : ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿ ರೈತರ ಕೊಳವೆಬಾವಿಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಮೂಲಕ ರೈತರ ಜೀವನಕ್ಕೆ ಕೊಳ್ಳಿ ಇಡಲು ಸರಕಾರ ಮುಂದಾಗಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಕಿಡಿಕಾರಿದರು.


 ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನಾ ಮೆರವಣಿಗೆ ಮಾಡಿಕೊಂಡು ಬೆಸ್ಕಾಂ ಕಚೇರಿಗೆ ಆಗಮಿಸಿ ಪ್ರತಿಭಟಿಸಿ ಮಾತನಾಡಿದ ಅವರು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ರೈತರಿಗೆ ವಿದ್ಯುತ್ ಕ್ಷೇತ್ರದಿಂದ ಮತ್ತಷ್ಟು ಆಘಾತ ಮಾಡಲು ಸರಕಾರ ಮುಂದಾಗಿದೆ ಖಾಸಗೀಕರಣ ಮಾಡಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುತ್ತಿರುವುದು ದುರದೃಷ್ಟಕರ. ಈ ದೇಶದ ಅನ್ನದಾತ ರೈತನ ಇಲ್ಲದಿದ್ದರೆ ಯಾವುದೂ ನಡೆಯುವುದಿಲ್ಲ ರೈತರ ಏಳಿಗೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ, ಮೀಟರ್ ಅಳವಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದ್ದರು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿದ ಅವರು ಮೀಟರ್ ಅಳವಡಿಸುವುದರಿಂದ ರಾಜ್ಯದ ಸುಮಾರು45 ಲಕ್ಷ ಪಂಪ್ ಸೆಟ್ ಗಳಿಗೆ  ಸಮಸ್ಯೆಯಾಗುತ್ತದೆ ಇನ್ನೂ ರಾಜ್ಯದಲ್ಲಿ ಲಕ್ಷಾಂತರ ರೈತರು ಅಡಿಕೆ ಬೆಳೆಯುತ್ತಿದ್ದು ಇಲ್ಲಿನ ಅಡಿಕೆ ತೆಂಗಿಗೆ ಹೆಚ್ಚಿನ ಬೆಂಬಲ ಬೆಲೆಯನ್ನು ಕೊಡದ ಸರಕಾರಗಳು ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದಕ್ಕೆ ಮುಂದಾಗಿದೆ ಇದರಿಂದ ರಾಜ್ಯದ ಹಾಗೂ ದೇಶದಲ್ಲಿ ಅಡಿಕೆ ಬೆಳಗಾರರಿಗೆ ದೊಡ್ಡ ಹೊಡೆತ ಬೀಳಲಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಗೃಹ ಮಂತ್ರಿಗಳಿಗೆ ಆಗ್ರಹಿಸಿದರು.

 ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಲೋಕೇಶ್, ಸೇರಿದಂತೆ ನೂರಾರು ರೈತಸಂಘದ ಮುಖಂಡರು ಹಾಜರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು