10 ಕೋಟಿ ವೆಚ್ಚದ ವಸತಿಶಾಲೆ ಲೋಕಾರ್ಪಣೆ ಮಾಡಿದ ಎಂ.ವಿ.ವೀರಭದ್ರಯ್ಯ.

ಮಧುಗಿರಿ : 10 ಕೋಟಿ ವೆಚ್ಚದ ಸುಸಜ್ಜಿತವಾದ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯನ್ನು ಶಾಸಕ ಎಂ.ವಿ.ವೀರಭದ್ರಯ್ಯ ಲೋಕಾರ್ಪಣೆ ಮಾಡಿದರು.


ತಾಲೂಕಿನ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿಯಲ್ಲಿ ಶಾಲೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕರು ನಮ್ಮದು ಬರದ ನಾಡು. ಇಲ್ಲಿ ಯಾವುದೇ ಉದ್ಯೋಗ, ನೀರಾವರಿ ಹಾಗೂ ಕೈಗಾರಿಕೆಗಳಿಲ್ಲ. ವ್ಯವಸಾಯವನ್ನೇ ನಂಬಿರುವ ಜನತೆಗೆ ಶಿಕ್ಷಣವೇ ಆಸ್ತಿಯಾಗಿದೆ. ಇಂತಹ ಶಿಕ್ಷಣ ಇಂದು ಬಡವರಿಗೆ ಕೈಗೆಟಕುತ್ತಿಲ್ಲ. ಅದಕ್ಕಾಗಿ ಶಾಸಕನಾದ ಮೊದಲ ವರ್ಷ ಕೈಗೊಂಡ ವವಸತಿಶಾಲೆಯನ್ನು ಇಂದು ಲೋಕಾರ್ಪಣೆ ಮಾಡುತ್ತಿದ್ದೇನೆ. ಇದು ನನಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮಾಡಿದ ಕೆಲಸ ತೃಪ್ತಿ ನೀಡಿದೆ. ಇಂತಹ ಶಿಕ್ಷಣ ಕೇಂದ್ರಗಳು ಮಧುಗಿರಿಗೆ ಅತಿ ಅವಶ್ಯಕವಾಗಿದ್ದು ಮಕ್ಕಳು ಹೆತ್ತವರ ಹಾಗೂ ನಿಮಗೆ ಶೈಕ್ಷಣಿಕವಾಗಿ ಸಹಕಾರ ನೀಡಿದ ಈ ಸಮಾಜಕ್ಕೆ ಋಣಿಯಾಗಿರಬೇಕು. ಇಂತಹ ಹತ್ತಾರು ವಸತಿಶಾಲೆಗಳನ್ನು ತಂದಿದ್ದು ಸಮಸ್ಯೆ ಬಾರದಂತೆ ಮಕ್ಕಳಿಗೆ ಸರ್ಕಾರದ ಸೌಲಭ್ಯ ತಲುಪಿಸಿ. ಯಾವುದೇ ವಸ್ತುವನ್ನು 

ಕದಿಯಬಹುದು. ಆದರೆ ಶಿಕ್ಷಣವನ್ನು ಕೌಶಲ್ಯವನ್ನು ಕದಿಯಲು ಸಾಧ್ಯವಿಲ್ಲ. ನೀವುಗಳು ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಆಸ್ತಿಯಾಗಬೇಕು. ಆಗಲೇ ನಮ್ಮ ಈ ಕಾರ್ಯಕ್ಕೆ  ಸಾರ್ಥಕತೆ ಒದಗಿಬರಲಿದೆ. ಈ ಬಾರಿ ಪ್ರಥಮವಾಗಿ ಎಸ್‍ಎಸ್‍ಎಲ್‍ಸಿ ತರಗತಿಯಿದ್ದು ಹೆಚ್ಚಿನ -Àಲಿತಾಂಶ ಪಡೆಯುವ ಮೊದಲ 5 ಮಕ್ಕಳಿಗೆ ನಾನು ನಗದು ಹಾಗೂ ಪುರಸ್ಕಾರ  ನೀಡಿ ಗೌರವಿಸುತ್ತೇನೆ. ಎಲ್ಲರೂ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂದರು. 

ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಜಾವೀದ್ ಕೆ. ಕರಂಗಿ ಮಾತನಾಡಿ ಈ ಶಾಲೆಯಲ್ಲಿ 250 ಮಕ್ಕಳಿದ್ದು ಶೇ.75 ರಷ್ಟು ಅಲ್ಪಸಂಖ್ಯಾತ ಹಾಗೂ ಶೇ.25 ರಷ್ಟು ಉಳಿದ ವರ್ಗದ ಮಕ್ಕಳಿಗೆ ಅವಕಾಶವಿದೆ. ಇಲ್ಲಿ ಪಾಠದ ಜೊತೆ ಇತರೆ ಚಟುವಟಿಕೆಗಳಿಗೂ ಆದ್ಯತೆ ನೀಡಲಿದ್ದೇವೆ. ಇಂತಹ ಶಾಲೆ ತರಲು ಶ್ರಮಿಸಿದ ಶಾಸಕರಿಗೆ ಇಲಾಖೆ ವತಿಯಿಂದ ಅಭಿನಂದನೆಗಳು ಎಂದರು. 


ಬಾಕ್ಸ್ : ಶಿಕ್ಷಣ ಕದಿಯಲಾರದ ಅಮೂಲ್ಯ ಸಂಪತ್ತು. ಇದನ್ನು ಸಾ„ಸಿದರೆ ಸಮಾಜಕ್ಕೆ ಆಸ್ತಿಯಾಗುತ್ತೀರ. ಎಲ್ಲರೂ ಶಿಕ್ಷಣದ ಕಡೆ ಮುಖ ಮಾಡಿ ನಾಡಿನ ಸೇವೆಗೆ ಮುಂದಾಗಿ- ಎಂ.ವಿ.ವೀರಭದ್ರಯ್ಯ, ಶಾಸಕರು. 


ಈ ಸಂದರ್ಭದಲ್ಲಿ ಗೃಹಮಂಡಲಿ ಎಇಇ ಹಾಲೇಶಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು, ಕುಂಚಿಟಿಗ ಒಕ್ಕಲಿಗ ಸಂಘದ ಅಧ್ಯಕ್ಷ ರಾಜಶೇಖರ್, ಪುರಸಭೆಯ ಮಾಜಿ ಸದಸ್ಯರಾದ ಶಫೀಕ್ ಅಹ್ಮದ್, ಸಲೀಂ ಉನ್ನೀಸಾ, ಮುಖಂಡರಾದ ಅಲ್ಲಾ ಭಕಾಷ್, ದಾದು, ಪ್ರಾಂಶುಪಾಲ ಬಸವರಾಜ್, ಗುತ್ತಿಗೆದಾರ ವಿಷ್ಣು, ಗ್ರಾ.ಪಂ. ಸದಸ್ಯರಾದ ರವಿ, ಚಿತ್ತಣ್ಣ, ಮುಖಂಡರಾದ ಗುಲಾಬಿ ರವಿ, ಮಹ್ಮದ್ ಷರೀಪ್ ಉಲ್ಲಾ, ಮಕ್ಕಳು ಹಾಗೂ ಇತರರು ಇದ್ದರು.


ವರದಿ : ಮಧುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು