ನಾನು ಎಂಬ ಅಹಂ ಬಿಟ್ಟು ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪಟ್ಟಣದ ಅಭಿವೃದ್ಧಿ ಸಾಧ್ಯ ಶಾಸಕ ಎಸ್.ಆರ್ ಶ್ರೀನಿವಾಸ್

ಗುಬ್ಬಿ : ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು 10 ಲಕ್ಷ ರೂಪಾಯಿಗಳ ಎಸ್ ಎಫ್ ಸಿ ಯೋಜನೆಯ ಕಟ್ಟಡ ಕಾಮಗಾರಿಗೆ ಶಾಸಕ ಎಸ್ ಆರ್ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದರು. 
 

 ನಗರದ ದರ್ಜಿಗರ ಬೀದಿಯಲ್ಲಿ ಸಮುದಾಯ ಭವನ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಟ್ಟಣ ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರುಗಳು ಒಂದುಗೂಡಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಇಲ್ಲದೆ ಹೋದರೆ ಪಟ್ಟಣದ ಅಭಿವೃದ್ಧಿ ಮಾಡಲು ಸಾಧ್ಯವಾಗುವುದಿಲ್ಲ ನಾನು ಎಂಬ ಅಹಂ ಬಿಟ್ಟು ಒಟ್ಟುಗೂಡಿ ಕೆಲಸ ಮಾಡಿದರೆ ಒಳಿತು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.

 ಇದೇ ಜನವರಿ 10 ಕ್ಕೆ ಬಗರ್ ಹುಕುಂ ಗೆ ಸಂಬಂಧಪಟ್ಟಂತೆ ಸಭೆ ಮಾಡಲಾಗುತ್ತದೆ ಎಂದು ತಿಳಿದ ಅವರು ಸವಿತಾ ಸಮಾಜದ ಸಮುದಾಯ ಭವನಕ್ಕೆ ಎಷ್ಟೇ ಹಣ ಖರ್ಚಾದರೂ ಸುಸಜ್ಜಿತವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣ ಮಾಡುವಂತೆ ತಿಳಿಸಿದ್ದೇನೆ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಸದಸ್ಯರಾದ ಶಿವಕುಮಾರ್, ಸಿ ಮೋಹನ್, ಕೃಷ್ಣಮೂರ್ತಿ, ಕುಮಾರ್, ಶೌಕತ್ ಅಲಿ ಪ್ರಕಾಶ್, ಮಹಮದ್ ಸಾಧಿಕ್, ಮುಖಂಡರಾದ ಪಾಪಣ್ಣ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ರಮೇಶ್, ಜಿಲ್ಲಾ ನಿರ್ದೇಶಕ ಸುನಿಲ್, ಸೇರಿದಂತೆ ಸವಿತಾ ಸಮಾಜದ ಯುವ ಪಡೆ ಹಾಗೂ ಮುಖಂಡರುಗಳು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು