ಗುಬ್ಬಿ : ತಾಲ್ಲೂಕಿನ ಕೊಡಿಯಾಲ ಹಾಗೂ ಎಣ್ಣೆಕಟ್ಟೆ ಗ್ರಾಮದಲ್ಲಿ ಕೆರೆ ಏರಿ ದುರಸ್ತಿ ಹಾಗೂ ಎತ್ತರ ಮಾಡಲು ಗುದ್ದಲಿ ಪೂಜೆಯನ್ನು ನೆರೆವೇರಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ಎಲ್ಲಾ ಸಹಕಾರಿ ಸಂಘ ನಂದಿನಿಯಂತ ರಾಜ್ಯದ ಪ್ರಮುಖ ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಆದಿನಕ್ಕೆ ಒಳ ಪಡಿಸಿ ಇಲ್ಲಿನ ಜನರಿಗೆ ಯಾವುದೇ ಅಧಿಕಾರ ಸಿಗದ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ಇನ್ನೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬಿಜೆಪಿ ಪಕ್ಷದ ಮಾಸ್ ಲೀಡರ್ ಅವರನ್ನು ಕೈ ಬಿಟ್ಟರೆ ಪಕ್ಷವನ್ನು ಹೇಗೆ ಮೊನ್ನೆಡೆಸಲು ಸಾಧ್ಯ ವಾಗುತ್ತದೆ ಪಕ್ಷ ಕಟ್ಟಿಬೆಳೆಸಲು ಸಾಕಷ್ಟು ಕಷ್ಟ ಪಟ್ಟವರು ಅವರು ಅವರಿಗೆ ಗೌರವ ಕೊಡಬೇಕು ಮತ್ತು ಅಧಿಕಾರ ನೀಡಬೇಕು ಆಗ ಮಾತ್ರ ಪಕ್ಷ ಉಳಿಸಲು ಸಾಧ್ಯ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಧ್ಯಕ್ಷರು ಸದಸ್ಯರುಗಳು ಚೇಳೂರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಸೇರಿದಂತೆ ಮುಖಂಡರಾದ ಕೊಡಿಯಲ ಮಹದೇವ್, ದಾಮು,ನಿರಂಜನ್, ಮೊಹನ್ ಪುಟ್ಟರಾಜು ಇಂಜೆನಿಯರ್ ವಿನಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.
