ಮಧುಗಿರಿ : ಪ್ರಸ್ತುತ ಯುಗದಲ್ಲಿ ಶಿಕ್ಷಣವೇ ಶಕ್ತಿ ಎಂದು ಎಲೆ ರಾಂಪುರದ ಕುಂಚಿಟಿಗಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ.
ತಾಲೂಕಿನ ಕಾವಣ ದಾಲ ಗ್ರಾಮದಲ್ಲಿ ಗುರುಕುಲ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಶ್ರೀ ವಾಣಿ ವಿದ್ಯಾ ಮಂದಿರದ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಂಸ್ಕಾರ ಯುತ ಶಿಕ್ಷಣ ಗ್ರಾಮೀಣ ಭಾಗದ ಮಕ್ಕಳಿಗೆ ಅತ್ಯಾವಶ್ಯಕವಾಗಿದ್ದು ಈ ಹಿನ್ನಲೆಯಲ್ಲಿ ಶ್ರೀ ವಾಣಿ ವಿದ್ಯಾ ಮಂದಿರ ಗ್ರಾಮೀಣ ಭಾಗದ ಮಕ್ಕಳಿಗೆ ಸಂಸ್ಕಾರ ಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು ತಂತ್ರಜ್ಞಾನ ವಿಸ್ತರಿಸಿದಂತೆ ಶಿಕ್ಷಣವು ವಿಸ್ತರಿಸುತ್ತ ಹೋಗುತ್ತದೆ ಇಂದಿನ ಯುಗದಲ್ಲಿ ತಂತ್ರಜ್ಞಾನ ಯುತ ಶಿಕ್ಷಣ ಅತ್ಯವಶ್ಯಕ ಗ್ರಾಮೀಣ ಭಾಗದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಸಂತಸದ ವಿಷಯ ಇದೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ಗ್ರಾಮೀಣ ಭಾಗದ ಮಕ್ಕಳು ತೊಡಗಿಸಿಕೊಳ್ಳಲು ಪ್ರಾರ್ಥಮಿಕ ಶಿಕ್ಷಣ ಅಡಿಪಾಯ ಪ್ರಾರ್ಥಮಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಶಿಸ್ತು ಸಂಯಮ ಗುಣಮಟ್ಟದ ಶಿಕ್ಷಣ ಪಡೆದಾಗ ಮಾತ್ರ ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಸತ್ಯನಾರಾಯಣ ಮತ್ತು ಸ್ನೇಹಿತರು ಗ್ರಾಮೀಣ ಭಾಗದಲ್ಲಿ ಶಾಲೆಯನ್ನು ತೆರೆದು ವಿದ್ಯಾಧಾನ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದ್ದು ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಜೀ ವಾಹಿನಿಯ ಸರಿಗಮ ಖ್ಯಾತಿಯ ಕಂಬದ ರಂಗಯ್ಯ, ಕಾವಣದಾಲದ.ಗುರುಕುಲ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರ ಮೌಳಿ, ವಕೀಲರ ಸಂಘದ ಮಾಜಿ ಅಧ್ಯಕ್ಷ.ಎಸ್.ಎ.ಶ್ಯಾಮನಾಥ್, ಗುರುಕುಲ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಿ ಆರ್ ಸತ್ಯನಾರಾಯಣ, ಶಾಲಾ ನಿರ್ದೇಶಕರಾದ ಸೀತಾರಾಮಶಾಸ್ತ್ರಿಗಳು, ಮುಖ್ಯ ಶಿಕ್ಷಕರಾದ ರಾಮಕೃಷ್ಣ, ನಾಗೇಂದ್ರ,
ಎಂ ಜಿ ರಘು ಯಾದವ್, ಎಂ.ಎಸ್.ಸಂತೋಷ್, ಹೊಸಕೆರೆ ವಿ.ಎಸ್.ಎಸ್ ಅಧ್ಯಕ್ಷ ಎಚ್.ವಿ.ಮಂಜುನಾಥ್, ವಕೀಲ ಹನುಮಂತರೆಡ್ಡಿ, ಹಾಜರಿದ್ದರು.
ವರದಿ : ಮಧುಗಿರಿ ಬಾಲು ಪಣಿಂದ್ರ.
