ಸಾಹಿತ್ಯ ಪರಿಷತ್ತು, ಜನ ಸಾಹಿತ್ಯ ಪರಿಷತ್ತಾಗಿಸಬೇಕು:- ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ

 ಚಿಕ್ಕನಾಯಕನಹಳ್ಳಿ : ಸಾಹಿತ್ಯ ಪರಿಷತ್ತು, ಜನ ಸಾಹಿತ್ಯ ಪರಿಷತ್ತಾಗಿಸಬೇಕು:- ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ .



   ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ಘಟಕ  ಹಮ್ಮಿಕೊಂಡಿರುವ 10ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ  ತಾಲೂಕಿನ ಹಳ್ಳಿ ಹಳ್ಳಿಯಲ್ಲಿ ಕನ್ನಡ ಪರಿಷತ್ತನ್ನ    ಜನಸಾಮಾನ್ಯರ ಪರಿಷತ್ತನ್ನಾಗಿಸುವ ಉದ್ದೇಶದಿಂದ  ನೇರವಾಗಿ ರೈತರು ಬೆಳೆದ ಉತ್ಪನ್ನಗಳಾದ ದವಸ ಧಾನ್ಯಗಳು, ತೆಂಗಿನ ಕಾಯಿ   ಭಿಕ್ಷಾ ರೂಪದಲ್ಲಿ  ಸಂಗ್ರಹ ಮಾಡುವ ಮೂಲಕ  ತಾಲೂಕು ಸಮ್ಮೇಳನವನ್ನು  ನಿರ್ವಹಣೆ ಮಾಡಲಿದೆ.


 ಚಿಕ್ಕನಾಯಕನಹಳ್ಳಿ ತಾಲೂಕು, ಹುಳಿಯಾರ್ ಹೋಬಳಿ ಸಿಂಗಾಪುರ ಗ್ರಾಮದಲ್ಲಿ 

 ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 'ಸಾಹಿತ್ಯ ಜೋಳಿಗೆ' ಭಿಕ್ಷಾ ಅಭಿಯಾನಕ್ಕೆ  *ಹಿರಿಯ ನೆಲ ಮೂಲದ ಸಂಸ್ಕೃತಿಯ ಚಿಂತಕರು, ಲೇಖಕರು,ಕವಿಗಳಾದಂತ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯನವರು* ಅರಸಿ  ಅವರ ತೋಟದಲ್ಲಿ ಸಾಹಿತ್ಯ ಜೋಳಿಗೆಗೆ  ತೆಂಗಿನ ಕಾಯಿ ತುಂಬಿ ಮಾತನಾಡಿದರು.


ಚಿಕ್ಕನಾಯಕನಹಳ್ಳಿ ಕ ಸಾ ಪ  ಘಟಕ ವಿನೂತನ ಪ್ರಯೋಗ ಕೈಗೊಂಡಿದ್ದು ಜನಸಾಮಾನ್ಯರನ್ನ ಪರಿಷತ್ತಿಗೆ ಹತ್ತಿರ ಮಾಡುವ ಉದ್ದೇಶದಿಂದ  ಜನತೆಯ ಪಾಲು ಕನ್ನಡ ಪರಿಷತ್ತಿಗೆ ಸೇರಬೇಕು, ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಎಲ್ಲರ ಮನೆಗೆ  ಜೋಳಿಗೆ ಹಿಡಿದು  ಹೋಗುತ್ತಿರುವುದು ಸಮ್ಮೇಳನ ಯಶಸ್ವಿಯಾಗಿಸಲಿಕ್ಕೆ ತಂಡ ಬದ್ಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.


*ತಾಲ್ಲೂಕು ಕಸಾಪ  ಅಧ್ಯಕ್ಷ ಎಂಎಸ್ ರವಿಕುಮಾರ್ ಕಟ್ಟೆಮನೆ ಮಾತನಾಡಿ*  ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆಬೀಡದ ಚಿಕ್ಕನಾಯಕನಹಳ್ಳಿಯಲ್ಲಿ ಇಲ್ಲಿಯವರೆಗೆ 9 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಾಗಿದ್ದು 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು *ಹಿರಿಯ ಲೇಖಕರು ಹಾಗೂ ಚರಿತ್ರೆಯ ಸಂಶೋಧಕರು ಆದ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ರವರ ಸರ್ವಾಧ್ಯಕ್ಷತೆಯಲ್ಲಿ* ಫೆಬ್ರವರಿ  ದಿನಾಂಕ 4 ಮತ್ತು 5 ,2023 ರಂದು ಚಿಕ್ಕನಾಯಕನಹಳ್ಳಿಯ ಕನ್ನಡ ಸಂಘದ ವೇದಿಕೆಯಲ್ಲಿ ಆಯೋಜಿಸಿದೆ.


ಈ ಸಮ್ಮೇಳನದ ಆಯೋಜನೆಗೆ ಸುಮಾರು 5 ಲಕ್ಷ ರೂಪಾಯಿಗಳ ಅಂದಾಜು ವೆಚ್ಚವನ್ನು ನಿರೀಕ್ಷಿಸಿದ್ದು ಈ ಮೊತ್ತವನ್ನು ಸಾರ್ವಜನಿಕವಾಗಿ ತಾಲೂಕಿನ ಹಳ್ಳಿ ಹಳ್ಳಿಯಲ್ಲಿ   ರೈತ ಉತ್ಪನ್ನಗಳನ್ನು ಭಿಕ್ಷಾ ರೂಪದಲ್ಲಿ ಸಂಗ್ರಹಿಸುವ ಮೂಲಕ ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮ್ಮೇಳನವನ್ನು ಆಯೋಜಿಸಬೇಕೆಂಬ ಆಶಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನದ್ದಾಗಿದೆ.

ಆದ್ದರಿಂದ


ಇಂದು ತಾಲೂಕಿನ ಹಿರಿಯ ಸಾಹಿತಿ ಹುಳಿಯಾರು ಹೋಬಳಿ ಸಿಂಗಾಪುರದಲ್ಲಿ ಈ ನಾಡು ಕಂಡ *ನೆಲ ಮೂಲ ಸಂಸ್ಕೃತಿಯ ಚಿಂತಕ, ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷರಾದ ಎಸ್ ‌ಜಿ ಸಿದ್ದರಾಮಯ್ಯನವರು*

ಕ ಸಾ ಪ ಜಿಲ್ಲಾಧ್ಯಕ್ಷರಾದ *ಕೆ. ಎಸ್.ಸಿದ್ದಲಿಂಗಪ್ಪನವರಿಗೆ*  ತಾಲ್ಲೂಕು ಕಸಾಪ  ಸಮ್ಮುಖದಲ್ಲಿ *ಸಾಹಿತ್ಯ ಜೋಳಿಗೆಗೆ* ತಮ್ಮ ತೋಟದಲ್ಲಿನ  ತೆಂಗಿನಕಾಯಿಗಳನ್ನು ಭಿಕ್ಷಾ ರೂಪದಲ್ಲಿ ನೀಡುವ ಮೂಲಕ 'ಸಾಹಿತ್ಯ ಜೋಳಿಗೆ' ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.


 

*ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ  ಕೆ ಎಸ್ ಸಿದ್ದಲಿಂಗಪ್ಪ* ಜೋಳಿಗೆಗೆ ಕಾಯಿ ತುಂಬಿಸಿಕೊಂಡು ಮಾತನಾಡಿ    ಸಾಹಿತ್ಯ ಪರಿಷತ್ ಹಣ ವೆಚ್ಚ ಮಾಡಿ ಮಾಡುವುದು ದೊಡ್ಡದಲ್ಲ,  ಸಮ್ಮೇಳನವನ್ನು  ಜನಸಾಮಾನ್ಯರ ಪರಿಷತ್ ನಾಗಿಸಬೇಕು ಎಂಬುವ ಉದ್ದೇಶವಿಟ್ಟು  ಹಳ್ಳಿ ಹೋಬಳಿ ತಾಲೂಕಿನ ಜನತೆ ಸಾಹಿತ್ಯ ಸಂಭ್ರಮದಲ್ಲಿ ತಮ್ಮ ಪಾಲು ಇದೆ ಎಂಬ ದೃಢ ಅಚಲ ಮನಸ್ಸು ಬಂದಾಗ  ಜನ ಸಂಪತ್ಭರಿತವಾದಂತಹ, ಜನ ಪಾಲ್ಗೊಳ್ಳುವಂತಹ, ಜನರಿಂದಲೇ ಕನ್ನಡ ಸಾಹಿತ್ಯ ಪರಿಷತ್ ಸಂಘಟನೆ ಮಾಡಿರುವಂತಹ ಕೀರ್ತಿ  ಯಶಸ್ವಿ ಸಮ್ಮೇಳನ ಚಿಕ್ಕನಾಯಕನಹಳ್ಳಿ, ಕಸಾಪ ತಂಡಕ್ಕೆ  ಸಿಗಲಿದೆ  ಎಂದರು.


ತಾಲೂಕು ಕನ್ನಡ ಸಾಹಿತ್ಯ ಪರಿಷತ್ *ಕಸಬಾ ಅಧ್ಯಕ್ಷ ಗಂಗಾಧರ್ ಮಗ್ಗದಮನೆ* ಮಾತನಾಡಿ  ಲೇಖಕರಾದಂತ   ಎಸ್ ಜಿ ಸಿದ್ದರಾಮಯ್ಯನವರ ನೀಡಿದಂತಹ ಜೋಳಿಗೆಯನ್ನು ಕಸಾಪ ತಂಡ ತಾಲೂಕಿನಾದ್ಯಂತ  ಹಿಡಿದು ನಿಜವಾದ ಜನಪರವಾದಂತಹ ಜನರ ಮಧ್ಯೆ ಇರುವಂತ ಸಮ್ಮೇಳನ ರೂಪಿಸಲಿಕ್ಕೆ 


ಈ ಅಪರೂಪದ ವಿಶಿಷ್ಟ ಹಾಗೂ ಅರ್ಥಪೂರ್ಣ ಅಭಿಯಾನ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮ್ಮೇಳನವನ್ನು ರೂಪಿಸುವುದಕಷ್ಟೇ ಸೀಮಿತವಾಗದೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯಾಗಿದೆ.


ಆದ್ದರಿಂದ ಈ ಸಮ್ಮೇಳನಕ್ಕೆ ತಾಲ್ಲೂಕಿನ ಎಲ್ಲಾ ಜನತೆ ವಿಶೇಷವಾಗಿ ನಮ್ಮ ಬೆನ್ನೆಲುಬಾದ ರೈತರು ಕಾಯಿ, ದವಸ-ಧಾನ್ಯ, ಬೇಳೆ-ಕಾಳು ಹೀಗೆ ಬೆಳೆದ ಬೆಳೆಯ ಬೊಗಸೆಯಷ್ಟು ಭಿಕ್ಷೆಯನ್ನು ಅಕ್ಷರ ದಾಸೋಹಕ್ಕಾಗಿ 'ಸಾಹಿತ್ಯ ಜೋಳಿಗೆಗೆ' ಹಾಕಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನಾಗಿಸಿ ಕೊಳ್ಳಬೇಕೆಂದು  ವಿನಂತಿಸಿದ್ದಾರೆ.


 *ಚಲನಚಿತ್ರ ಕಲಾವಿದ ಹುಳಿಯಾರ್ ಗೌಡಿ  ಮಾತನಾಡಿ** ಚಿಕ್ಕನಾಯಕನಹಳ್ಳಿ ತಾಲೂಕು ಕಸಾಪ ಘಟಕದಿಂದ ಹತ್ತನೇ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು  ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜೋಳಿಗೆ ಸಮ್ಮೇಳನ ವಿಶೇಷ ಅಭಿಯಾನದ ಮೂಲಕ  ರೈತರ ಹತ್ತಿರ ಹೋಗಿ ಜೋಳಿಗೆ ಹಿಡಿದು ದವಸಧಾನ್ಯ  ಪಡೆಯುವ ಮೂಲಕ  ಸಾಮಾನ್ಯ ಜನಕ್ಕೆ ಹತ್ತಿರವಾಗುತ್ತಿದೆ.

ಸಾಹಿತ್ಯ ಸಮ್ಮೇಳನ ಜಾತ್ರೆ ಯಶಸ್ವಿಯಾಗಲಿಕ್ಕೆ ನೀವು ಬನ್ನಿ ಎಲ್ಲರನ್ನೂ ಕರೆದುಕೊಂಡು ಬನ್ನಿ ಎಂದು ತಿಳಿಸಿದರು.


 *ಸಿಂಗಾಪುರ ರೈತ  ಗುರುಮೂರ್ತಿ* ಮಾತನಾಡಿ ಚಿನಾ ಹಳ್ಳಿ ಸಾಹಿತ್ಯ ಸಮ್ಮೇಳನಕ್ಕೆ ನಮ್ಮ ಮನೆಯಲ್ಲಿನ  ತೆಂಗಿನಕಾಯಿ  ಯನ್ನ ಜೋಳಿಗೆ ಗೆ ಹಾಕಿ  ತಾಲೂಕಿನ ಎಲ್ಲಾ ರೈತರಿಂದ ಇದೇ ರೀತಿ ಮುಂದುವರೆದು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.


 ಈ ವೇಳೆ  ಜಿಲ್ಲಾ ಕಾರ್ಯಕಾರಣಿ  ಸದಸ್ಯ ಯೋಗೀಶ್ವರಪ್ಪ, ನಾಗರಾಜು, ತಾ. ಕ. ಸಾ ಪ  ಉಪಾಧ್ಯಕ್ಷರಾದ ನಂದೀಶ್ ಭಟ್ಲೆರಿ,  ಗೌರವ ಕಾರ್ಯದರ್ಶಿ ನಿರೂಪ್, ಕೋಶಾಧ್ಯಕ್ಷರಾದ  ಎಂ ಎಸ್ ಯೋಗೀಶ್ ಕುಮಾರ್ ,,ಸಂಚಾಲಕ ಚಂದ್ರಶೇಖರ್ ಚಿಕ್ಕರಾಂಪುರ, ಕರವೇ ತಾಲೂಕು ಅಧ್ಯಕ್ಷ ಸಿಟಿ ಗುರುಮೂರ್ತಿ, ಹುಳಿಯಾರ್ ಹೋಬಳಿ ಅಧ್ಯಕ್ಷ ನಾರಾಯಣಪ್ಪ, ರಘು, ಹರ್ಷ, ನವೀನ್ ರಾವತ್,  ಇತರರು ಇದ್ದರು.



ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು