ಗುಬ್ಬಿ : ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆಯಬೇಕಾಗಿದ್ದ ಬಗರ್ ಹುಕುಂ ಸಭೆಯು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಗ್ರೇಡ್ 2 ತಹಶೀಲ್ದಾರರನ್ನು ಭೇಟಿ ಮಾಡಿ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶಶಿಕಿರಣ್ ನೂರಾರು ರೈತರು ನಮಗೆ ಹಕ್ಕುಪತ್ರ ಸಿಗುತ್ತದೆ ಎಂದು ಕಾದು ಕುಳಿತಿದ್ದರು ಆದರೆ ಶಾಸಕರ ಮತ್ತು ಬಿಜೆಪಿ ಮುಖಂಡರ ರಾಜಕೀಯ ಕಿತ್ತಾಟದಿಂದ ರೈತರು ಹಕ್ಕು ಪತ್ರ ಪಡೆಯುವುದನ್ನು ಕಳೆದುಕೊಂಡಿದ್ದಾರೆ ಕೂಡಲೇ ಸಭೆ ನಡೆಸಿ ರೈತರಿಗೆ ಹಕ್ಕು ಪತ್ರ ನೀಡ ಡಬೇಕು ಎಂದು ಒತ್ತಾಯ ಮಾಡಿದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ಸಾವಿರಾರು ಎಕರೆ ಅಷ್ಟು ಅಕ್ರಮ ನಡೆದಿರುವುದರ ಬಗ್ಗೆ ತನಿಖೆ ಆಗುತ್ತಿದ್ದಾಗ ಮತ್ತೊಮ್ಮೆ ಸಭೆ ಮಾಡಿ ಯಾರಿಗೆ ಭೂಮಿ ಕೊಡಲು ನಿಂತಿದ್ದಾರೋ ತಿಳಿಯುತ್ತಿಲ್ಲ ಹಿಂದೆ ಅಕ್ರಮವಾಗಿ ಮಂಜೂರು ಮಾಡಿರುವಂತಹ ಭೂಮಿಯನ್ನು ವಜಾ ಮಾಡಬೇಕು, 10 ವರ್ಷಗಳ ಹಿಂದೆ ಹಕ್ಕು ಪತ್ರ ನೀಡಿದ್ದರು ಇನ್ನೂ ಖಾತೆ ಮಾಡಲು ಆಗಿಲ್ಲ ಕೊಡಲೇ ಅದನ್ನು ಸರಿ ಪಡಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಪ್ರಸನ್ನ ಕುಮಾರ್ ಮಾತನಾಡಿ ಶಾಸಕ ಶ್ರೀನಿವಾಸ್ ಹಾಗೂ ಬಿಜೆಪಿ ಸರ್ಕಾರ ನಿಜವಾದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಇದನ್ನು ನೋಡಿಕೊಂಡು ಕಾಂಗ್ರೆಸ್ ಸಮಿತಿ ಸುಮ್ಮನೆ ಕೂರುವುದಿಲ್ಲ ರೈತರಿಗೆ ದ್ರೋಹ ವಾಗುತ್ತಿರುವುದವುದನ್ನು ತಪ್ಪಿಸಬೇಕು ಇದನ್ನು ಅಧಿಕಾರಿಗಳು ಮಾಡಬೇಕು ಹಿಂದೆ ನಡೆದಿರುವಂತಹ ಬಗರ್ ಹೂಕುಂ ಭೂಮಿ ಕೇವಲ ಶಾಸಕರ ಹಿಂಬಾಲಕರಿಗೆ ಸಿಕ್ಕಿದೆಯೇ ಹೊರತು ನಿಜವಾದ ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದು ನೇರವಾಗಿ ಆರೋಪ ಮಾಡಿದರು.
ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಪಡೆದಿದ್ದು ಇದು ನಾವು ಸಿದ್ದ ಮಾಡಿರುವುದಿಲ್ಲ ಸರಕಾರ ಮಾಡಿಕೊಂಡಿರುವಂತಹ ದಾಖಲಾತಿಗಳು ಇದನ್ನು ಹುಡುಕಿದಾಗ ಇದರಲ್ಲಿ ಎಷ್ಟು ಅನ್ಯಾಯವಾಗಿದೆ ಎಂಬುದನ್ನ ಅಧಿಕಾರಿಗಳು ಅವರೇ ಮರು ಪರಿಶೀಲಿಸಲಿ ಇದರಲ್ಲಿ ಉಳುಮೆ ಮಾಡುವವರಿಗೆ ಕೊಟ್ಟಿದ್ದಾರೆ ಅಥವಾ ಬೇರೆಯವರು ಕೊಟ್ಟಿದ್ದಾರೆ ಎಂಬುದನ್ನು ತಹಸಿಲ್ದಾರರು ಹುಡುಕಲಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನರಸಿಂಹಯ್ಯ, ಎಂವಿ ಶ್ರೀನಿವಾಸ್, ಶಿವು, ಸಿದ್ದೇಶ್,ಗೋಪಾಲ್,ಯಾದವ್ ಹೇಮಂತ್, ಜಿ ಎಲ್ ರಂಗನಾಥ ಸೇರಿದಂತೆ ಇನ್ನಿತರರು ಹಾಜರಿದ್ದರು
