ರಾಜ್ಯಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಗುಬ್ಬಿಯ ಶುಭೋದಯ ವಿದ್ಯಾರ್ಥಿ ತರುಣ್ ಜೈನ್ ಆಯ್ಕೆ.


 ಗುಬ್ಬಿ : ರಾಜ್ಯಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಗುಬ್ಬಿಯ ಶುಭೋದಯ ವಿದ್ಯಾರ್ಥಿ ತರುಣ್ ಜೈನ್ ಆಯ್ಕೆಯಾಗುವ ಮೂಲಕ ತಾಲೂಕಿಗೆ ಹಾಗು ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ.

 ದಕ್ಷಿಣ ಕರ್ನಾಟಕದ 2022 23ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನವು ಧಾರವಾಡದಲ್ಲಿ ನಡೆದಿದ್ದು ಅದರಲ್ಲಿ ಆಯ್ಕೆಯಾಗಿ ರಾಷ್ಟ್ರಮಟ್ಟಕ್ಕೆ ಮನ್ನಣೆಯನ್ನ ಪಡೆದಿದ್ದಾನೆ

 ತರುಣ್ ಜೈನ ಮಾಡಿರುವಂತಹ ವಿಜ್ಞಾನ ವಸ್ತು ಪ್ರದರ್ಶನ ಬಹಳ ವಿಶೇಷವಾಗಿದ್ದು ದೇಶದಲ್ಲಿ ಗಡಿ ಕಾಯುವ ಸೈನಿಕರ ಜೀವ ಉಳಿಸಲು ಮಾಡಿರುವಂತಹ ಹೊಸ ನೂತನ ಪ್ರಯೋಗವಾಗಿದೆ ಶತ್ರು ಪಾಳಯವನ್ನು ಬಡಿದೊಡಿಸಲು ಸೈನಿಕರೇ ಬೇಕಿಲ್ಲ ಆ ಭಾಗದಲ್ಲಿ ಆಧುನಿಕ ತಾಂತ್ರಿಕತೆಯನ್ನು ಬಳಸಿ ವಾಹನದ ವ್ಯವಸ್ಥೆಯನ್ನು ಮಾಡಿ ಬಹಳ ದೂರದಲ್ಲಿ ಬರುತ್ತಿರುವ ಶತ್ರು ಸೈನ್ಯವನ್ನು ಗುರುತಿಸಿ ಸೈನಿಕರ ಬದಲಿಗೆ ಯಂತ್ರವೇ ಅವರನ್ನು ಬಡಿದುಡಿಸುವಂತಹ ಯಾಂತ್ರಿಕ ಪ್ರದರ್ಶನವನ್ನು ತರುಣ್ ಜೈನ್ ಮಾಡಿದ್ದಾನೆ ಈ ವಾಹನವು ಕೇವಲ ರಸ್ತೆಯಲ್ಲಿ ಮಾತ್ರವಲ್ಲದೆ ಸಾಗರ ಸಮುದ್ರಗಳಲ್ಲಿಯೂ ಸಹ ಚಲಿಸುವಂತಹ ತಾಂತ್ರಿಕ ಯೋಜನೆಯಾಗಿದೆ ಹಾಗಾಗಿ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿದೆ.

 ರಾಜ್ಯಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಾಜು ಸೇರಿದಂತೆ ಆಡಳಿತ ವರ್ಗ ಶಾಲೆಯ ಸಿಬ್ಬಂದಿ ವರ್ಗ ಶಿಕ್ಷಕರು ಅಭಿನಂದಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು