ಪಾವಗಡದಲ್ಲಿ ಸರಳ ಸಂಭ್ರಮದ ಗಣರಾಜ್ಯೋತ್ಸವ.

 ಪಾವಗಡದಲ್ಲಿ ಸರಳ ಸಂಭ್ರಮದ ಗಣರಾಜ್ಯೋತ್ಸವ 



ತಾಲ್ಲೂಕು ಆಡಳಿತ ವತಿಯಿಂದ ಹಾಗೂ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 74ನೇ ಗಣರಾಜ್ಯೋತ್ಸವವನ್ನು ಪಟ್ಟಣದಸರ್ಕಾರಿ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.

 ಧ್ವಜಾರೋಹಣವನ್ನು ಶಾಸಕ ವೆಂಕಟರವಣಪ್ಪ ನೆರವೇರಿಸಿ ಮಾತನಾಡಿ ರಾಷ್ಟ್ರೀಯ ಹಬ್ಬಗಳು ಕೇವಲ ಸರ್ಕಾರಿ ಕಚೇರಿಗಳು , ಅಧಿಕಾರಿಗಳಿಗೆ ಸೀಮಿತವಾಗಬಾರದು ನಮ್ಮೇಲ್ಲರನ್ನು ಒಗ್ಗೂಡಿಸುವ ಸಾಂಸ್ಕ್ರತಿಕ ಮನೆ ಮನೆಯ ಹಬ್ಬವಾಗಿ ನಾವೇಲ್ಲರೂ ಆಚರಿಸಬೇಕು , ತಾಲ್ಲೂಕಿನ

ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕಂಕಣ ಬದ್ದರಾಗಬೇಕು, ಸಂವಿಧಾನದ ಆಶಯದಂತೆ ನಾವೆಲ್ಲರೂ ಸೌಹಾರ್ಧತೆಯಿಂದ ಬಾಳಬೇಕು ಎಂದು ತಿಳಿಸಿದರು   

 

 ಧ್ವಜಾರೋಹಣದ ಬಳಿಕ ವಿವಿಧ ತುಕುಡಿಗಳಿಂದ ಪಥಸಂಚಲನ ನಡೆಯಿತು.

ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು 


ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಗಾಯನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಮೆರಗು ತಂದವು.


ಕಾರ್ಯಕ್ರಮ ದಲ್ಲಿ ತಹಶೀಲ್ದಾರ್ ವರದರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರಾಜಕೀಯ ಮುಖಂಡರು, ರೈತ ಮುಖಂಡರು , ಇತರರು ಹಾಜರಿದ್ದರು.


ವರದಿ: ಪಾವಗಡ ಶ್ರೀನಾಥ್ 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು