ಕಾನೂನು ಸಚಿವ ರಾದರೂ ಕನಿಷ್ಠ ಜ್ಞಾನವಿಲ್ಲ, ನಾನೇ ಮೇಧಾವಿ. ಎನ್ನುವ ಅಹಂ.: ಸಿ ಬಿ ಎಸ್.

 ಚಿಕ್ಕನಾಯಕನಹಳ್ಳಿ : ಇದು ಪ್ರಜಾಪ್ರಭುತ್ವ ದೇಶ ಕಾನೂನು ಸಚಿವರಾದವ ಇವರಿಗೆ ಕನಿಷ್ಠ ಜ್ಞಾನವಿಲ್ಲವೇ, ನಾನೇ ಬುದ್ದಿವಂತ, ನಾನೇ ಸರ್ವ ಶ್ರೇಷ್ಠ ಎನ್ನುವ ಅಹಂ ಹೆಚ್ಚಾಗಿ, ಹಿರಿಯರು, ಕಿರಿಯರು ಮಾನ್ಯ ಕಾನೂನು ಸಚಿವರಿಗೆ ಲೆಕ್ಕವಿಲ್ಲ.ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.


 ಪಟ್ಟಣದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಗೃಹ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,

ಕಾನೂನು ಸಚಿವರಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, *ನನ್ನನ್ನು ಹಾಲು ಕುಡಿಯುವ ಕಂದನಿಗೆ ಮಗುವಿಗೆ ಹೋಲಿಸಿದ್ದಾರೆ, ನಾನು 6 ಬಾರಿ ಚುನಾವಣೆ ಎದುರಿಸಿದ್ದೇನೆ 3 ಬಾರಿ ಅತಿ ಹೆಚ್ಚು ಮತ ಪಡೆದು ಗೆದ್ದಿದ್ದೇನೆ*

 **ಸಚಿವರು ನನ್ನ ವಿರುದ್ದ ಹೀನಾಯ ಸೋಲು ಕಂಡಿದ್ದಾರೆ. ಅವರು ಕೇವಲ ಅಲ್ಪ ಮತದಿಂದ ಗೆದ್ದಿರುವ ಇತಿಹಾಸ ನೋಡಲಿ.* 


*ಹೇಮಾವತಿ ನೀರಿನ ಬಗ್ಗೆ ಮಾತನಾಡುತ್ತಾರೆ, ಹೇಮಾವತಿ ನೀರು ಬರಲು 2011 ರಿಂದ ನೀರಾವರಿ *ತಜ್ಞ ಪರಮಶಿವಯ್ಯ, ಸಂಸದರು, ಮಠಾಧೀಶರರು, ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು* ಸೇರಿ ನೀರಿಗಾಗಿ ಹಗಲು ರಾತ್ರಿ ಹೋರಾಟ ಮಾಡುವ ರನ್ನು ಹೀಯಾಳಿಸಿ ಹೇಮಾವತಿ ನೀರು ನನ್ನ ಅವಧಿಯಲ್ಲಿ ಹಿಂದೆಯೇ ಬರಬೇಕಾಗಿತ್ತು,


ಆ ಸಂದರ್ಭದಲ್ಲಿ *ಹೇಮಾವತಿ ನೀರನ್ನ ಚೊಂಬಿನಲ್ಲಿ ತರಬೇಕೆಂದು ಕುಹೂಕವಾಡಿದವರು ಇಂದು ನೀರಾವರಿ ತಜ್ಞ, ವಿಶ್ವೇಶ್ವರಯ್ಯ ನಾನೇ ಎಂಬುದಾಗಿ* ಹೇಳಿಕೊಳ್ಳುತ್ತಿದ್ದಾರೆ..


ಅಂದು *ರೈತರುಗಳಿಗೆ ಎತ್ತಿಕಟ್ಟುವ ಕೆಲಸವನ್ನ ಪ್ರತಿ ಸಂದರ್ಭದಲ್ಲೂ ಸಚಿವರು ಮಾಡಿದ್ದಾರೆ. ನನ್ನನ್ನು* ನಾಲ್ಕುವರೆ ವರ್ಷಗಳಿಂದ ಏನೂ ಮಾತನಾಡದ ಮಾಜಿ ಶಾಸಕರು ಚುನಾವಣಾ ಸಂದರ್ಭದಲ್ಲಿ ಮಾತನಾಡುತ್ತಾರೆ ಎಂದು ಸಭೆಗಳಲ್ಲಿ ಹೇಳುತ್ತಾರೆ, *ನಮ್ಮ ಕ್ಷೇತ್ರಕ್ಕೆ ಸಚಿವ ಸ್ಥಾನ ಲಭಿಸಿರುವುದರಿಂದ ತಾಲ್ಲೂಕು ಅಭಿವೃದ್ದಿಯಾಗಲಿ ಅಂದು ಮಾತನಾಡದೇ ಇದದ್ದು,* ಆದರೆ ಅವರ *ಸ್ವ ಅಭಿವೃದ್ಧಿ ಹೆಚ್ಚು ಮಾಡಿಕೊಂಡಿದ್ದು ಬಿಟ್ಟರೆ, ಕ್ಷೆತ್ರ, ಜನಸಾಮಾನ್ಯರ ಅಭಿವೃದ್ಧಿ ಆಗಿಲ್ಲ.* 

 **ಕ್ಷೇತ್ರಕ್ಕೆ ಕೊಟ್ಟಿರುವುವಂತಹ ಕೆಲಸಗಳು ಯಾವುದು ಪರ್ಸೆಂಟೆಜ್ ಹೆಚ್ಚು ಸಿಗುತ್ತೋ ಆ ಕೆಲಸಗಳನ್ನು* ಆರಂಭಿಸಿದ್ದಾರೆ.


 ಅವರು, ಮಾಜಿ ಪ್ರಧಾನಮಂತ್ರಿ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬರಲು ಅವರ್ಯಾರು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದ್ದಾರೆ, ಇದುಅವರ ಹೆಸರು ಹೇಳಲು ಯೋಗ್ಯತೆ ಇಲ್ಲ ಎಂದ ಅವರು, ಸಚಿವರು ಜನರು ತಮ್ಮ ಸಮಸ್ಯೆಗಳ ಬಗ್ಗೆ ಕೇಳಲು ಬಂದರೆ ಬೈದು ಕಳಿಸುತ್ತಾರೆ, ಮತ ಹಾಕಿಲ್ಲವೇ ಜನರು, ಜನಪ್ರತಿನಿಧಿಗಳಾದ ನಾವು ಜನರ ಜೊತೆಯಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಸಚಿವರಿಗೆ ಗೊತ್ತಿಲ್ಲವೇ ದುರಹಂಕಾರದಿಂದ ಜನರನ್ನು ಬೈದು ಕಳಿಸುತ್ತಾರೆ, ಇದೇ ರೀತಿ *ರಾಜ್ಯದ ರೈತರು, ಬುದ್ದಿಜೀವಿಗಳು, ಮಠದ ಸ್ವಾಮೀಜಿಯವರನ್ನು ನಿಂದನೆ ಮಾಡಿರುವುದು ರಾಜ್ಯದ ಜನ ನೋಡಿದ್ದಾರೆ.* 


 ನಾನು ಜಾತಿ ಬೇದ ಮಾಡದೇ ಇದ್ದುದರಿಂದ ಎಲ್ಲಾ ಜನಾಂಗದವರು ನನ್ನ ಜೊತೆಯಲ್ಲಿದ್ದಾರೆ, ಅಧಿಕಾರವಿರಲಿ ಇಲ್ಲದಿರಲಿ ಸದಾ ಜನರ ಕಷ್ಟ, ಸುಖದಲ್ಲಿ ಸ್ಪಂದಿಸುತ್ತಿದ್ದೇನೆ, ಸಚಿವರ ತರಹ ಅಧಿಕಾರ ಇದ್ದಾಗ ಒಂದು ತರ,,ಇಲ್ಲದಿದ್ದಾಗ ಒಂದು ತರಹ ನನ್ನ ಸಂಸ್ಕೃತಿ ಅಲ್ಲ ಎಂದರು.

 *ಎತ್ತಿನಹೊಳೆ ನೀರು ತಾಲ್ಲೂಕಿಗೆ ಅಲೋಕೇಷನ್ ಆಗಿಲ್ಲ, ಆದರೂ ಕಿಲೋ ಮೀಟರ್ ಗಟ್ಟಲೆ ಪೈಪ್ ಲೈನ್ ಎಲ್ಲಾ ಕೆರೆಗಳಿಗೆ ಹಾಕುತ್ತಿದ್ದು ಪೈಪ್ ಲೈನ್ ಕಮಿಷನ್ ದಂಧೆ* ಮಾಡಿಕೊಂಡಿದ್ದಾರೆ.


 ಯಾವ ಒಬ್ಬ ಕಾರ್ಯಕರ್ತರು ಇವರ ಅವಧಿಯಲ್ಲಿ ಯಾರೂ ನಾಯಕರಾಗಿ,ಆರ್ಥಿಕವಾಗಿ ಬೆಳೆದಿಲ್ಲ, ಸಚಿವರು ಮಾತ್ರ ಆರ್ಥಿಕವಾಗಿ ದೃಢವಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿ, ನಾಲಿಗೆ ಮೇಲೆ ಹಿಡಿತರವಿರಲಿ ಎಂದು ಎಚ್ಚರಿಸಿದ್ದಾರೆ.

ಹೊನ್ನೆಬಾಗಿ ಸುತ್ತಮುತ್ತಲ ಗ್ರಾಮಗಳ ನೂರಾರು ರೈತರ *ಜಮೀನು ತೋಟಗಳು ಡೀಮ್ಡ್ ಫಾರೆಸ್ಟ್ ಸೆಕ್ಷನ್4 ಗೆ ಒಳಪಟ್ಟು ಆತಂಕ ನಿವಾರಿಸಲು ಆದೇಶದ ಬಗ್ಗೆ ರೈತರು ಸಚಿವರ ಬಳಿ ಕೇಳಲು ಹೋದರೆ ಕೋರ್ಟ್* ಗೆ ಹೋಗಿ ಎಂದು ಹೇಳುತ್ತಾರೆ, ಕಾನೂನು ಸಚಿವರಾಗಿ ತಿದ್ದುಪಡಿ ತಂದು ರೈತರನ್ನು ಉಳಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ಮಾಜಿ ಶಾಸಕರು ಹಿರಿಯರಿಗೆ ಕಾಲಿಗೆ ಬೀಳುತ್ತಾರೆ ಎಂದು ಹೇಳುತ್ತಾರೆ, ಹಿರಿಯರಿಗೆ ಕಾಲಿಗೆ ಬೀಳುವುದು ಹಿಂದೂ ಧರ್ಮದ ಸಂಸ್ಕೃತಿ ಅಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿ ಚುನಾವಣೆಯಲ್ಲಿ ರಾತ್ರಿ ಹಗಲು ದುಡಿದ ಕಾರ್ಯಕರ್ತರನ್ನು ದೂರ ತಳ್ಳುತ್ತಿದ್ದಾರೆ, ಉದಾಹರರಣೆಯಾಗಿ ಆಲದಕಟ್ಟೆ ತಿಮ್ಮಯ್ಯ, ಚಿಕ್ಕಬಿದರೆ ಚಂದ್ರಣ್ಣನವರು ಅವರ ಚುನಾವಣೆಯಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿದ್ದಾರೆ, ಅವರಿಗೆ ಸಹಾಯ ಮಾಡುವ ಬದಲು ಅವರ ಆಸ್ತಿಯನ್ನೆಲ್ಲಾ ತೆಗೆದುಕೊಂಡಿದ್ದಾರೆ, ಶಾಂತ್ ಕುಮಾರ್ ಸಹ ಮನೆ ಮಠ ಮಾರಿಕೊಳ್ಳುವಂತಾಗಿದೆ ಎಂದು ಹೇಳಿದರಲ್ಲದೆ ಇವರ ರೀತಿಯಲ್ಲಿ ನಾನು ಆಸ್ತಿಯನ್ನು ಮಾಡಿಲ್ಲ, ಯಾವುದೇ ಲಾಕರ್ ಇಟ್ಟುಕೊಂಡಿಲ್ಲ , ನನ್ನ ಹೆಸರಲ್ಲಿ ಕಾರು,ಮನೆ ಬಿಟ್ಟು ಬೇರೆ ಏನೂ ಇಲ್ಲ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪುರಸಭಾಧ್ಯಕ್ಷೆ ಪುಷ್ಪ ಹನುಮಂತರಾಜು, ಜೆಡಿಎಸ್ ತಾ ಅಧ್ಯಕ್ಷ ರಾಮಚಂದ್ರಯ್ಯ, ಕಲ್ಲೇಶ್ , ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೊನ್ನೆಬಾಗಿ ಶಶಿಧರ್ , ದಬ್ಬಗುಂಟೆ ರವಿಕುಮಾರ್,ಚೇತನಾ, ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು