ರಸ್ತೆ ಸಂಪರ್ಕ ಎಲ್ಲಿ ಚೆನ್ನಾಗಿರುತ್ತೆ ಅಲ್ಲಿ ವಹಿವಾಟು ಚೆನ್ನಾಗಿರುತ್ತೆ, ಎಲ್ಲಿ ವಹಿವಾಟು ಚೆನ್ನಾಗಿರುತ್ತೆ ಅಲ್ಲಿನ ಜನತೆ ಆರ್ಥಿಕವಾಗಿ ಚೆನ್ನಾಗಿ ಇರುತ್ತಾರೆ. :-- ಜೆ ಸಿ ಮಾಧುಸ್ವಾಮಿ.

 ಚಿಕ್ಕನಾಯಕನಹಳ್ಳಿ :ರಸ್ತೆಗಳು ಬದುಕನ್ನು ಹಸನು ಮಾಡುತ್ತವೆ, ರಸ್ತೆಯ ಮೂಲಕ ಸಂಪರ್ಕ ವ್ಯಾಪಾರ ವಹಿವಾಟು ಹೋರಾಟಕ್ಕೆ ಉತ್ತಮ ಸ್ಥಿತಿ ನಿರ್ಮಾಣ ಆದರೆ ಅಭಿವೃದ್ಧಿಗೆ ಮೈಲುಗಲ್ಲು ಆಗುತ್ತವೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ನುಡಿದರು.




 ಪಟ್ಟಣದ ಕಾಡೇನಹಳ್ಳಿ ಬಳಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 6 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕೆ.ಎಸ್.ಆರ್.ಟಿ.ಸಿ ಘಟಕಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು. 

 ಪಟ್ಟಣದ ಬಹು ದಿನಗಳ ಬೇಡಿಕೆ ಬಸ್ ಡಿಪೋ ಈಡೇರುತ್ತಿದ್ದು ಎಲ್ಲಾ ಹಳ್ಳಿಗಳಿಗೂ ಬಸ್ಸಾರಿಗೆ ಸೌಲಭ್ಯ ಸುಲಭವಾಗಿ ಸಿಗುವುದರಿಂದ ವಿದ್ಯಾಭ್ಯಾಸಕ್ಕೆ, ಬೇರೆ ಕಡೆ ಪ್ರಯಾಣ ಮಾಡಲಿಕ್ಕೆ ತಾಲೂಕಿನ ಜನತೆಗೆ ಅನುಕೂಲವಾಗಲಿದೆ.


ಬಸ್ ಡಿಪೋ ಸ್ಥಾಪನೆಗೆ ಹೋರಾಡಿದಂತ ಕಂಡಕ್ಟರ್ ಮತ್ತೆ ಡ್ರೈವರ್ ಗಳಿಗೆ ಘಟಕ ಸ್ಥಾಪನೆಯಾದ ಸಂದರ್ಭದಲ್ಲಿ ಸ್ಥಳೀಯವಾಗಿ ನೌಕರರಿಗೆ ಹೆಚ್ಚು ಅವಕಾಶ ನೀಡಿ ನೆಮ್ಮದಿಯ ಜೀವನ ಒದಗಿಸಲು ಸಚಿವರು ಅಧಿಕಾರಿಗಳಲ್ಲಿ ಕೋರಿದರು.


ಅಭಿವೃದ್ಧಿಯಲ್ಲಿ ಎಂದೆಂದೂ ಕಾಣದ ಅಭಿವೃದ್ಧಿ ಚಿಕ್ಕನಾಯಕನಹಳ್ಳಿಯಲ್ಲಿ ಆಗಿದ್ದರು ಸಹ, ಅಭಿವೃದ್ಧಿ ಆಗಿಲ್ಲ ಎಂದು ಬೊಬ್ಬೆ ಹೊಡೆಯುವರು ಹೇಳುವವರು ನನ್ನ ಅಭಿವೃದ್ಧಿ ಕಾರ್ಯಗಳು ಅವರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಟೀಕಾಕಾರರಿಗೆ ಗುದ್ದು ನೀಡಿದರು.

ಪಟ್ಟಣದಲ್ಲಿ 60 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಪ್ರಾರಂಭವಾಗಿಗಿದ್ದು ಪ್ರತಿ ಮನೆ ಮನೆಗೂ ಸರಕಾರದ ಹಣದಿಂದಲೇ ಉಚಿತ ಪೈಪ್ ಸಂಪರ್ಕ ಕಲ್ಪಿಸಲಾಗುತ್ತಿದೆ, ತಾಲ್ಲೂಕಿನ ವಿವಿಧ ದೇವಾಲಯಗಳಿಗೆ 7 ಕೋಟಿ ಹಣ ಬಿಡುಗಡೆಯಾಗಿದ್ದು ಪಟ್ಟಣದ ಆಂಜನೇಯಸ್ವಾಮಿ ದೇವಾಲಯದ ಸಮುದಾಯ ಭವನಕ್ಕೆ3 ಕೋಟಿ ರೂಪಾಯಿ ಬಿಡುಗಡೆಯಾಗಿದೆ,


 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೇಮಾವತಿ ನಾಲಾ ಟೆಂಡರ್ ಕರೆದಿದ್ದರೂ ಕಾರಣಾಂತರಗಳಿಂದ ನಾಲಾ ಕಾಮಗಾರಿ ಪ್ರಾರಂಭವಾಗಿರಲಿಲ್ಲ, ಈಗ ಪ್ರಾರಂಭವಾಗಿ ನಾಲೆಯಲ್ಲಿ ನೀರು ಹರಿದು ಕೆರೆಗಳು ತುಂಬುತ್ತಿವೆ, ಇದರಿಂದ ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿದೆ, ಪಟ್ಟಣದಲ್ಲಿ 30 ರಿಂದ 40 ಕೋಟಿ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ ನಿರ್ಮಿಸಲು ಸ್ಥಳದ ಅಭಾವದಿಂದ ಈಗ ಶೆಟ್ಟಿಕೆರೆ ರಸ್ತೆಯಲ್ಲಿರುವ ಆಯುರ್ವೇದ ಆಸ್ಪತ್ರೆ ಕೆಡವಿ ಆ ಸ್ಥಳದಲ್ಲಿ ತಾಯಿ ಮಗು ಆಸ್ಪತ್ರೆಯನ್ನು ನಿರ್ಮಿಸಲಾಗವುದು ಮತ್ತು ಪಟ್ಟಣದ ಹತ್ತಿರ ಸ್ಲಂ ಬೋರ್ಡ್ ವತಿಯಿಂದ 430 ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಲಾಗುವುದು ಎಂದರು.

 ಪಟ್ಟಣದಲ್ಲಿ 15 ವರ್ಷಗಳ ಹಿಂದೆ ಮೈನ್ಸ್ ಹಣದಲ್ಲಿ ಬಡವರಿಗೆ ನಿವೇಶನ ನೀಡಲು ಜಮೀನು ತೆಗೆದುಕೊಂಡರೂ ಇದುವರೆಗೂ ಪುರಸಭೆಯಿಂದ ನಿವೇಶನ ನೀಡಲಾಗಿಲ್ಲ, ಶೀಘ್ರವೇ ನಿವೇಶನ ಹಂಚಲಾಗುವುದು ಎಂದರಲ್ಲದೆ, ಪಟ್ಟಣದ ಪುರಸಭೆಗೆ ನಗರೋತ್ಥಾನ ಯೋಜನೆಯಡಿ 10 ಕೋಟಿ ಬಿಡುಗಡೆಯಾಗಿದೆ ಈ ಹಣವನ್ನು ಪಟ್ಟಣದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ ಮುಗಿದ ನಂತರ ರಸ್ತೆ ಅಭಿವೃದ್ದಿ ಮಾಡಲಾಗುವುದು ಎಂದರು.

 ಈಗಾಗಲೇ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸಲು 320 ಕೋಟಿ ಹಣ ಬಿಡುಗಡೆ ಮಾಡಿದ್ದು ಇದುವರೆಗೆ 114 ಓವರ್ ಹೆಡ್ ಟ್ಯಾಂಕ್ ಗಳನ್ನು ಮಾಡಲಾಗಿ ಬೋರನ ಕಣಿವೆಯಿಂದ ಈ ಭಾಗದ ಹುಳಿಯಾರು ಸೇರಿದಂತೆ 4 ಗ್ರಾಮ ಪಂಚಾಯ್ತಿಗಳ ಹಳ್ಳಿಗಳ ಮನೆ ಮನೆಗೆ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುವುದು. ತಾಲ್ಲುಕಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ತರಲು ಪ್ರಯತ್ನಿಸಿದೆ ಇದಕ್ಕೆ 12 ಎಕರೆ ಜಮೀನು ಅವಶ್ಯಕತೆ ಇದ್ದು ಎಲ್ಲೂ 12 ಎಕರೆ ಸರ್ಕಾರಿ ಜಮೀನು ಸಿಗದೆ ಇರುವುದರಿಂದ ನೆನೆಗುದಿಗೆಗೆ ಬಿದ್ದಿದೆ ಎಂದರು.

 ರಸ್ತೆ ಸಾರಿಗೆ ನಿಗಮನ ವಿಭಾಗೀಯ ಗಜೇಂದ್ರ ಕುಮಾರ್ ಮಾತನಾಡಿ, ಬಸ್ ಘಟಕ ನಿರ್ಮಿಸಲು 4 ಎಕರೆ 3 ಗುಂಟೆ ಜಮೀನು ಮಂಜೂರಾಗಿದ್ದು 6 ಕೋಟಿ ವೆಚ್ಚದಲ್ಲಿ ಬಸ್ ಡಿಪೋ ಮಾಡಲಾಗುತ್ತಿದೆ, ಬಸ್ ಘಟಕದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ, ಜಿಲ್ಲೆಯಲ್ಲಿ 8 ಬಸ್ ಘಟಕಗಳಿದ್ದು 310 ಬಸ್ ಗಳು ಆಪರೇಟ್ ಆಗುತ್ತಿವೆ, ಘಟಕದಲ್ಲಿ 250 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ, ಇದರಿಂದ ತಾಲ್ಲೂಕಿನಲ್ಲಿ ಉತ್ತಮ ಸಾರಿಗೆ ವ್ಯವಸ್ಥೆಯಾಗಲಿದೆ ಕೆ.ಎಸ್.ಆರ್.ಟಿ.ಸಿ ಘಟಕದ ಕಾಮಗಾರಿ 9 ತಿಂಗಳಲ್ಲಿ ಮುಗಿಯಲಿದೆ,ಎಂದರು.


  ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ ಹಲವಾರು ವರ್ಷಗಳ ನೆನೆಗುದಿಯೇ ಬಿದ್ದಿದ್ದ ಕೆ ಎಸ್ ಆರ್ ಟಿ ಸಿ ಡಿಪೋ ಕಡತ , ಬಹುದೊಡ್ಡ ಕಷ್ಟದ ಕೆಲಸವನ್ನು ಸಚಿವರ ಸಹಕಾರದಿಂದ ಒಂದೊಂದೇ ಸಮಸ್ಯೆ ಬಗೆಹರಿಸಿ ಸಕಾರಗೊಳಿಸಿದ ಸಚಿವರಿಗೆ ಧನ್ಯವಾದಗಳು ತಿಳಿಸಿದರು.


ಜೆಸಿಎಂ ಪರ ಕಾಂಗ್ರೆಸ್ ಸದಸ್ಯೆ ಬ್ಯಾಟಿಂಗ್: ಸಚಿವರು ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಟೀಕಿಸುವವರಗೆ ಕಾಣುತ್ತಿಲ್ಲ. ಅವರ ಕಣ್ಣಿಗೆ ಪೊರೆ ಬಂದಿರಬೇಕು ಎಂದು ಪುರಸಭೆ ಕಾಂಗ್ರೆಸ್ ಸದಸ್ಯೆ ಉಮಾ ಪರಮೇಶ್ ಹೇಳಿದರು.


ಈ ವೇಳೆಪುರಸಭಾಧ್ಯಕ್ಷೆ ಪುಷ್ಪ ಹನುಮಂತರಾಜು, ಉಪಾಧ್ಯಕ್ಷೆ ಮಮತಾ ಧ್ರುವ ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಮುಖ್ಯಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯ ರೇಣುಕ್ ಪ್ರಸಾದ್, ಮಲ್ಲಿಕಾರ್ಜುನಸ್ವಾಮಿ,ಲಕ್ಷ್ಮೀಪಾಂಡುರಂಗಯ್ಯ,ಮಲ್ಲಿಕಾರ್ಜುನಸ್ವಾಮಿ, ಮಿಲಿಟರಿ ಶಿವಣ್ಣ,ಸೇರಿದಂತೆ ಹಲವರು ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು