ಗುಬ್ಬಿ: ಮುಂದೆ ಗುರಿ ಹಿಂದೆ ಗುರು ಇದ್ದಾಗ ಸಾಧನೆ ಎನ್ನುವುದು ತನ್ನಷ್ಟಕ್ಕೆ ತಾನೇ ಹುಡುಕಿಕೊಂಡು ಬರುತ್ತದೆ ಎಂದು ತೆವಡೆಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಬಿದ್ದಾಂಜನೇಯ ಸ್ವಾಮಿ ದೇವಾಲಯದ ಬಳಿ ನವಜ್ಞಾನ ಜ್ಯೋತಿ ಮಹಿಳಾ ಸಂಸ್ಥೆ ದಾವಣಗೆರೆ ಆ ಯೋಜನೆ ಮಾಡಿದ್ದ ಮಹಿಳಾ ವಿಕಾಸ ಯೋಜನೆ ವಿದ್ಯಾರ್ಥಿ ವಿಕಾಸ ಯೋಜನೆ ಹಾಗೂ ರೈತ ಮಾರ್ಗದರ್ಶಿ ಯೋಜನೆಗಳ ಆಶ್ರಯದಲ್ಲಿ ಉಚಿತ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಮಾಡಿ ಮಾತನಾಡಿದವರು ಮಹಿಳೆಯರ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆ ಸಾಧ್ಯವಾಗುತ್ತದೆ ಹೆಣ್ಣೊಂದು ಕಲಿತರೆ ಶಾಲೆಯಂತೆ ತೆರೆದಂತೆ ಎಂಬ ಮಾತಿನಂತೆ ಕುಟುಂಬದಲ್ಲಿ ಹೆಣ್ಣಿನ ಪಾತ್ರ ಬಹಳ ದೊಡ್ಡದು ಮತ್ತು ವಿಶೇಷ ಕಾಯಕವೇ ಕೈಲಾಸ ಎಂಬಂತೆ ಪ್ರತಿಯೊಬ್ಬರು ಬದುಕಿದಾಗ ಮಾತ್ರ ಕುಟುಂಬ ಹಾಗೂ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಸೋಮಾರಿಗಳಾಗದೆ ಅವರ ಅನ್ನವನ್ನು ಅವರ ಜೀವನವನ್ನು ಸಾಗಿಸುವಂತಹ ಕೆಲಸವನ್ನು ಪ್ರತಿಯೊಬ್ಬರೂ ಮಾಡಿದಾಗ ಮಾತ್ರ ಕುಟುಂಬ ಮತ್ತು ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮುರುಳಿದಾರ್ ಹಾಲಪ್ಪ ಮಾತನಾಡಿ ದೇಶದ ಬಜೆಟ್ಟನ್ನು ರಾಜಕೀಯದವರು ಮಾಡಿದರೆ ನಮ್ಮ ಮನೆಯ ಬಜೆಟ್ಟನ್ನು ನಮ್ಮ ತಾಯಿ ಮಾಡುತ್ತಾರೆ ಕಷ್ಟಕಾಲದಲ್ಲಿ ಸುಖಕಾಲದಲ್ಲಿ ಹೇಗೆ ಜೀವನ ಸಾಗಿಸಬೇಕು ಎಂಬ ಯೋಜನಾಧಿಕಾರಿ ನಮ್ಮ ಮನೆಯ ಮಹಿಳೆಯರೇ ಎಂಬುದನ್ನು ನಾವು ಮರೆಯುವಂತಿಲ್ಲ ಮಹಿಳೆಯರ ಸಬಲೀಕರಣದಿಂದ ದೇಶದ ಬೆಳವಣಿಗೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ಹೆಣ್ಣು ಶಾಂತಿ ಸ್ವರೂಪಿಯಾಗಿದ್ದು ಭೂಮಿಯಂತೆ ಸಂಪನನ್ನಳು ಮನೆಯಲ್ಲಿ ಕಷ್ಟವಿರಲಿ ಸುಖವಿರಲಿ ಎಲ್ಲರನ್ನೂ ಕಾಪಾಡುವ ದೇವತೆ ಎಂದರೆ ಅದು ಹೆಣ್ಣು ಮಾತ್ರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನವಜ್ಞಾನ ಜ್ಯೋತಿ ಮಹಿಳಾ ಸಂಸ್ಥೆಯ ಕಾರ್ಯದರ್ಶಿ ವಾಸಂತಿ ಎಚ್ ಜಿ ಮಾಚಿದೇವ ಸಂಘ ದ ಕಾರ್ಯದರ್ಶಿ ರೇಣುಕ ಎಸ್ ಡಿ ದಿಲೀಪ್ ಕುಮಾರ್ ಪ್ರಸಾದ್, ಮುಸ್ಲಿಂ ಮುಖಂಡ ಶೌಕತ್ ಆಲಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಗಾಯಿತ್ರಿ ನಾಗರಾಜು,ನವಜ್ಞಾನ ಜ್ಯೋತಿ ಮಹಿಳಾ ಸಂಸ್ಥೆ ಗುಬ್ಬಿ ನಿರ್ವಹಾಕಿ ಎಂ ಎನ್ ಶಾಂತಮ್ಮ, ಸೇರಿದಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಆಡಳಿತ ವರ್ಗದವರು ಹಾಜರಿದ್ದರು.
