ಅವಕಾಶ ಸಿಕ್ಕಾಗ ಜನರ ಕೆಲಸ ಮಾಡಿ ಋಣ ತೀರಿಸಬೇಕು: ಮಾಜಿ ಮುಖ್ಯಮಂತ್ರಿ ಸಂಸದ ಡಿವಿ ಸದಾನಂದ ಗೌಡ.

ಚಿಕ್ಕನಾಯಕನಹಳ್ಳಿ : ನೇರ -ನಡೆ-ನುಡಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಜಿ ಅವರನ್ನು ಎರಡನೇ ಬಾರಿ ಬಿಜೆಪಿ ಪಕ್ಷವನ್ನು ಆಶೀರ್ವದಿಸಿದ್ದೀರಿ ಜನರ ಒಳಿತಿಗಾಗಿ ಕೆಲಸ ಮಾಡಿದ್ದು ನೀವುಗಳು ನಮ್ಮ ಕೆಲಸಗಳಿಗೆ ಮಾರ್ಕ್ಸ್ ನೀಡಿ ಎಂದು ಜನರ ಹತ್ತಿರ ಹೋಗುವ ಪಕ್ಷ ಬಿಜೆಪಿ ಎಂದು ಮಾಜಿ ಮುಖ್ಯಮಂತ್ರಿ ಸಂಸದ ಡಿವಿ ಸದಾನಂದ ಗೌಡ ತಿಳಿಸಿದರು.


ಚಿಕ್ಕನಾಯಕನಹಳ್ಳಿ, ವಿಧಾನಸಭಾ ಕ್ಷೇತ್ರದ ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಬುಕ್ಕಾಪಟ್ಟಣ ಹೋಬಳಿಯ ಗಾಣದ ಹುಣಸೆ ಮತ್ತು ನೇರಲ ಗುಡ್ಡ ಬೂತ್ ಕೇಂದ್ರಗಳಲ್ಲಿಮನೆ ಮನೆಗೆ ತೆರಳಿ ಕರ ಪತ್ರ ಹಂಚುವಿಕೆ, ಸ್ಟಿಕರ್ ಹಂಟಿಸುವುದು,ಗೋಡೆ ಬರಹ, ಸದಸ್ಯತ್ವ ನೊಂದಣಿ ಹಾಗೂ ಪಲಾನುಭವಿಗಳ ಭೇಟಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು.


 ನರೇಂದ್ರ ಮೋದಿ ಅವರು ದೇಶವಾಸಿಗಳಲ್ಲಿ ಒಂದು ಅವಕಾಶ ನೀಡಿ, ದೇಶದವನ್ನ ವಿಶ್ವದಲ್ಲೇ ಗುರುತಿಸುವಂತಹ ಕೆಲಸ ಮಾಡಿ ತೋರಿಸುತ್ತೇವೆ, ಹಾಗೂ ಅಭಿವೃದ್ಧಿ ಮತ್ತು ಶುಶಾಸನ ಎರಡು ದ್ಯೇಯ ದೊಂದಿಗೆ ಕೊಟ್ಟ ಮಾತಿನಂತೆ ನಡೆಯುತ್ತಿರುವ 8, 9 ವರ್ಷಗಳ ಹಿಂದಿನ ಸರ್ಕಾರಗಳು ಭಾರತ ದೇಶವನ್ನು ಸಣ್ಣ ಸಣ್ಣ ರಾಷ್ಟ್ರಗಳಲ್ಲಿ ಆಹಾರಕ್ಕೆ ಆರೋಗ್ಯಕ್ಕೆ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿಟ್ಟಿದ್ದರು ಆದರೆ ನರೇಂದ್ರ ಮೋದಿಯವರ ಅವಧಿಯಲ್ಲಿ ಭಾರತ ದೇಶದಿಂದ ಉಚಿತವಾಗಿ ಹೊರ ರಾಷ್ಟ್ರಗಳಿಗೆ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಜಪಾನ್ ಜರ್ಮನ್ ಅಮೇರಿಕಾ ದೊಡ್ಡ ದೊಡ್ಡ ರಾಷ್ಟ್ರಗಳಿಗೆ ಉಚಿತ ಲಸಿಕೆಯನ್ನು ನೀಡುವ ಮೂಲಕ ಭಿಕ್ಷೆ ಬೇಡುವ ರಾಷ್ಟ್ರ ಅಲ್ಲ, ಭಿಕ್ಷೆ ನೀಡುವ ದೇಶ ಎಂದು ಸಾಬೀತು ಮಾಡಿದ್ದಾರೆ.

 ಮೋದಿ ಅವರ ಆಡಳಿತದ ಮಂತ್ರಿಮಂಡಲಗಳಲ್ಲಿ ಯಾವೊಬ್ಬ ಸದಸ್ಯನೂ ಲಂಚ ಭ್ರಷ್ಟಾಚಾರ ಮಾಡಿಲ್ಲ, ಈ ಹಿಂದೆ ಮಂತ್ರಿಮಂಡಲದಲ್ಲಿ ಭ್ರಷ್ಟಾಚಾರವೇ ತಾಂಡವಾಡುತ್ತಿತ್ತು.


ಅದೇ ರೀತಿ ರಾಜ್ಯದಲ್ಲಿ ಮೋದಿಯವರ ಪಟ್ಟದ ಶಿಷ್ಯ ಜೆ. ಸಿ.ಮಾಧುಸ್ವಾಮಿಯವರು ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಮುಂದೆ ತಮ್ಮ ಅಭಿವೃದ್ಧಿ ಕಾರ್ಡ್ ತೋರಿಸಿ ಮತ ಕೇಳುತ್ತಿದ್ದಾರೆ ಎಂದರು.


ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ. ಸಿ.ಮಾಧುಸ್ವಾಮಿಯವರು ಅಧ್ಯಕ್ಷತೆ ವಹಿಸಿಮಾತನಾಡಿ ವಿಜಯ ಸಂಕಲ್ಪ ಯಾತ್ರೆ ರಾಜ್ಯದ್ಯಂತ ಮಾಡುತ್ತಿದ್ದೇವೆ, ಸುಮ್ಮನೆ ಸಂಕಲ್ಪ ಮಾಡುವುದಲ್ಲ ಮತ್ತೆ ಬಿಜೆಪಿ ಸರ್ಕಾರವನ್ನು 2023, 2024ರಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ವಿಜಯದತ್ತ ಕೊಂಡೊಯ್ಯುತ್ತೇವೆ, ಆಳ್ವಿಕೆಗೆ ಅನುವು ಮಾಡಿ ಕೊಡುತ್ತೇವೆ ಎಂಬ ಸಂಕಲ್ಪ ಮಾಡುತ್ತಿದ್ದೇವೆ ಎಂದರು.


 ನಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಮಾಡಿದ ಕೆಲಸವನ್ನು ಜನರ ಮನಸ್ಸಿಗೆ ತರಬೇಕು, ಸರ್ಕಾರ ರಚಿಸೋ ಮುಂಚೆ ಹೇಳಿದ ಮಾತಿನಂತೆ ನಡೆದುಕೊಂಡಿದ್ದೇವಾ ಎಂದು ಜನರ ಬಾಯಿಂದ ಕೇಳಬೇಕು.

 ನಮ್ಮ ಅವಧಿಯಲ್ಲಿ ಎರಡು ಬಾರಿ ಕೋವಿಡ್ ಮಹಾಮಾರಿ, ನೆರೆಹಾವಳಿಯಿಂದ ಸರ್ಕಾರ ತಲ್ಲಣಗೊಂಡ ಸಂದರ್ಭದಲ್ಲಿಯೂ ರಾಜ್ಯದ ರೈತರ ಬದುಕಿಗೆ ಯಾವುದಕ್ಕೂ ಅಡಚಣೆ ಆಗದೆ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ನಿಭಾಯಿಸಿದ್ದೇವೆ, ಹಾಗೂ ರಾಷ್ಟ್ರದ ಇತಿಹಾಸದಲ್ಲೇ ರೈತರ ಖಾತೆಗಳಿಗೆ ನೇರನಗದು ಮೂಲಕ ಕೇಂದ್ರದಿಂದ 6,000, ರಾಜ್ಯದಿಂದ 4,000, ಒಟ್ಟು 10,000 ಪ್ರೋತ್ಸಾಹ ಧನವನ್ನು ರಾಜ್ಯದ 53ವರೆ ಲಕ್ಷ ರೈತರುಗಳಿಗೆ ಹಣ ಒದಗಿಸಿದ್ದೇವೆ ಎಂದರು.


  ಈ ಸಂದರ್ಭದಲ್ಲಿ ವಿಧಾನಪರಿಷತ್ ಮುಖ್ಯಸಚೇತಕರಾದ ವೈ ಎ ನಾರಾಯಣಸ್ವಾಮಿ, ತಾ ಮಂಡಲ ಅಧ್ಯಕ್ಷರಾದ ಕೇಶವ ಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನ್ ಮೂರ್ತಿ, ಬುಕ್ಕಾಪಟ್ಟಣ ಮಂಜುನಾಥ್, ಸತ್ಯನಾರಾಯಣ, ಪುರಸಭಾ ನಾಮಿನಿ ಸದಸ್ಯ ಸಿ. ಮಲ್ಲಿಕಾರ್ಜುನ ಸ್ವಾಮಿ, ಹಾಗೂ ಹೋಬಳಿ ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು