ಗುಬ್ಬಿ : ಚಿರತೆ ದಾಳಿಗೆ ಬೇಸತ್ತಿದ್ದ ಜನರಲ್ಲಿ ಆತಂಕ ಸೃಷ್ಟಿಸಿದ ರಸ್ತೆ ದಾಟುತ್ತಿರುವ ಚಿರತೆ ದೃಶ್ಯ.
ತಾಲೂಕಿನ ಮಡೇನಹಳ್ಳಿ ಮೂಲಕ ತೊರೆಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವರನ ಮೊಬೈಲ್ ಕ್ಯಾಮರಾದಲ್ಲಿ ಚಿರತೆ ಯಾವುದೇ ಭಯವಿಲ್ಲದೇ ರಸ್ತೆ ದಾಟುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
ಮಡೇನಹಳ್ಳಿ ತೊರೆಹಳ್ಳಿ ಜವರೇಗೌಡನ ಪಾಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಮನೆಯಲ್ಲಿ ಸಾಕಿದಂತಹ ಕೋಳಿ ಕುರಿ ದನ ಕರುಗಳನ್ನು ತಿಂದಿರುವ ಘಟನೆ ಬಹಳಷ್ಟು ನಡೆದಿದೆ ಜನರು ಆತಂಕದಲ್ಲಿರುವ ಇಂತಹ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಭಯ ಹುಟ್ಟಿಸಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
ಚಿರತೆ ದಾಳಿಯಿಂದ ಸಮಸ್ಯೆಯಾದಾಗ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ ಕಾಟಚಾರಕ್ಕೆ ಬೋನ ಇಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ ಇದರಿಂದ ಯಾವುದೇ ಚಿರತೆ ಸೆರೆ ಹಿಡಿಯಲು ಹಾಗಿಲ್ಲ ಮುಂದಿನ ದಿನಗಳಲ್ಲಿ ನಮ್ಮ ಭಾಗದಲ್ಲಿರುವ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂಬುದು ಜನರ ಮಾತು.
