ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಆಯ್ಕೆ.

 ಗುಬ್ಬಿ : ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೂತನ ಕಟ್ಟಡ ಕಟ್ಟುವುದೇ ನನ್ನ ಗುರಿ ಎಂದು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ್ ತಿಳಿಸಿದರು.



 ತಾಲೂಕಿನ ಕಲ್ಲೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ  ಶಿವಕುಮಾರ್ 07 ಮತವನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಗೋವಿಂದಯ್ಯ ಅವಿರೋಧ ವಾಗಿ ಆಯ್ಕೆಯಾದರು.

ಇದೆ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲಾ ನಿರ್ದೇಶಕರುಗಳ ಸಹಕಾರವನ್ನು ಪಡೆದು ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ ಸಾಲ ಸೌಲಭ್ಯ ಸೇರಿದಂತೆ  ವ್ಯವಸಾಯ ಸೇವಾ ಸಹಕಾರವನ್ನು  ಅಭಿವೃದ್ದಿ ಪಥದಲ್ಲಿ ತೆಗೆದುಕೊಂಡು ಹೋಗಲು  ಎಲ್ಲಾ ರೀತಿಯ  ಸಹಕಾರ ಪಡೆದು ಕೆಲಸ ಮಾಡುತ್ತೇನೆ  ಇನ್ನು ಡಿಸಿಸಿ ಬ್ಯಾಂಕಿನಿಂದ  ಹೆಚ್ಚಿನ ಸಹಕಾರ ಪಡೆದು ಈ ಭಾಗದ ಎಲ್ಲಾ ರೈತರಿಗೂ ಅನುಕೂಲ ಕಲ್ಪಿಸುವುದು ನನ್ನ ಗುರಿ ಎಂದು ತಿಳಿಸಿದರು.

  ಚುನಾವಣಾ ಅಧಿಕಾರಿಯಾಗಿ ಮಹಾಂತೇಶ್ ನಿರ್ವಹಣೆ ಮಾಡಿದರು. ಇದೆ ಸಂದರ್ಭದಲ್ಲಿ ಸಿದ್ದರಾಮಯ್ಯ, ರಾಮೇಗೌಡ, ಕಮಲಮ್ಮ, ಉಮೇಶ್,ಹಜರಾತ್ ಸೇರಿದಂತೆ ನಿರ್ದೇಶಕರು ಹಲವು ಮುಖಂಡರುಗಳು 

 ಹಾಜರಿದ್ದರು. ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಖುಷಿ ಪಟ್ಟರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು