ಚಿಕ್ಕನಾಯಕನಹಳ್ಳಿ:ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಅರ್ಜಿಸಲ್ಲಿಸಿರುವ 2018ರ ನಮೂನೆ 57ರ ಅರ್ಜಿಗಳನ್ನು ಪರೀಶಿಲಿಸಿ ಮಂಜೂರಾತಿ ಚೀಟಿ ನೀಡುತ್ತಿರುವುದು ರಾಜ್ಯದಲ್ಲೇ ಪ್ರಥಮ ತಾಲ್ಲೂಕಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬಗರ್‍ಹುಕುಂ ಸಾಗುವಳಿ ಚೀಟಿ ವಿತರಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ಸಾಗುವಳಿ ಚೀಟಿ ನೀಡುವಂತಹ ಬಗರ್‍ಹುಕುಂ ನಡೆಸುವುದು ಅಷ್ಟು ಸುಲಭದ ಮಾತಲ್ಲ ಅದರಲ್ಲಿ ನಮೂನೆ 50, 53, ಹಾಗೂ 57ರ ಅರ್ಜಿಗಳನ್ನು ವಿಲೇವಾರಿ ಮಾಡಬೇಕಾಗಿದೆ.
1989-90ರಲ್ಲಿ ನಮೂನೆ 50ರಲ್ಲಿ 1998ರಲ್ಲಿ ನಮೂನೆ 53ರಲ್ಲಿ ಹಾಗೂ 2018ರಲ್ಲಿ ನಮೂನೆ 57ರಲ್ಲಿ ಅರ್ಜಿಸಲ್ಲಿಸಿದ್ದು ಇನ್ನು 50 ಹಾಗೂ 53ರ ಅರ್ಜಿಗಳನ್ನು ಮೊದಲು ವಿಲೇವಾರಿ ಮಾಡಿ ನಂತರದಲ್ಲಿ ನಮೂನೆ 57ನ್ನು ವಿತರಿಸಬೇಕಿತ್ತು.
ಅದರಂತೆ ಕ್ರಮಕೈಗೊಂಡು 1989ರ ಹಾಗೂ 1998ರ ಅರ್ಜಿಗಳಲ್ಲಿ ಇದ್ದಂತಹ ಅನೇಕ ತಕರಾರುಗಳನ್ನು ಬಗೆಹರಿಸಿ ನಂತರದಲ್ಲಿ 57ರಲ್ಲಿನ ಅರ್ಜಿಗಳನ್ನು ಪರೀಶಿಲಿಸಿ ಈಗ ಸಾಗುವಳಿ ಚೀಟಿ ನೀಡುತ್ತಿದ್ದು ಇದೇ ಮೊದಲ ತಾಲ್ಲೂಕಾಗಿದೆ ಇದರೊಂದಿಗೆ 2013ರಿಂದ 2017ರ ನಡುವೆ ವಿತರಿಸಿಲಾಗಿದ್ದಂತಹ ಸಾಗುವಳಿ ಚೀಟಿಗಳು ಅಕ್ರಮವಾಗಿವೆ ಎಂದು ಸರ್ಕಾರದ ಹಂತದಲ್ಲಿ ಅದು ಉಪವಿಭಾಧಿಕಾರಿಗಳು ವಜಾ ಮಾಡಲು ಬರೆಯಲಾಗಿತ್ತು ಅದರೆ ಸರ್ಕಾರ ಅವುಗಳನ್ನು ಮತ್ತೇ ಪುನರ್ ಪರೀಶಿಲನೆ ಮಾಡಿ ಅರ್ಹರಿರುವಂತಹ ರೈತರಿಗೆ ವಿತರಿಸಲು ಸುಮಾರು 770ಅರ್ಜಿಗಳನ್ನು ಬಗರ್‍ಹುಕುಂ ಕಮಿಟಿಗೆ ನೀಡಲಾಗಿದೆ.
ಸಾಗುವಳಿ ಚೀಟಿ ವಿತರಣೆಮಾಡಿರುವ ರೈತರಿಗೆ ಕೂಡಲೇ ಪಹಣಿ ಖಾತೆ ಮಾಡಿಕೊಡುವಂತೆ ತಹಶೀಲ್ದಾರ್ ಗೆ ಸೂಚನೆ ನೀಡಿ ಯಾವುದೇ ದಲ್ಲಾಳಿಗಳನ್ನು ಹತ್ತಿರಕ್ಕೆ ಸೇರಿಸಬೇಡಿ ಹಾಗೂ ರೈತರು ದಲ್ಲಾಳಿಗಳ ಹತ್ತಿರ ಸಾವಿರಾರು ರೂಪಾಯಿಗಳನ್ನು ಕೊಟ್ಟು ಕಳೆದುಕೊಳ್ಳಬೇಡಿ, ನೇರ ವಾಗಿ ನಮ್ಮನ್ನು ಕಾಣಿ ಎಂದು ರೈತರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ತಹಸೀಲ್ದಾರ್ ಬಿ.ತೇಜಸ್ವೀನಿ ಮೂರು ಹಂತಗಳಲ್ಲಿ ಬಗರ್‍ಹುಕುಂ ಸಾಗುವಳಿ ಚೀಟಿ ನೀಡುತ್ತಿದ್ದು ಹಂತಹಂತವಾಗಿ ವಿತರಣೆ ಮಾಡುತ್ತಿದ್ದು ನಮೂನೆ 57ರ ಅರ್ಜಿಗಳನ್ನು ಪರೀಶಿಲನೆ ಮಾಡುತ್ತಿದ್ದೇವೆ ಅದರಂತೆ 2013 ರಿಂದ 2018ವರೆಗಿನ ತನಿಖೆಯಲ್ಲಿದ್ದ ಅರ್ಜಿಗಳನ್ನು ಪರೀಶಿಲನೆ ಮಾಡಲಾಗುತ್ತಿದೆ ಎಂದ ಅವರು ಇಂದು ಕಸಬಾ, ಶೆಟ್ಟಿಕೆರೆ, ಹುಳಿಯಾರು ಹೋಬಳಿಯ ರೈತರಿಗೆ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಾ ತಹಸೀಲ್ದಾರ್ ಮಮತಾ, ಬಗರ್ ಹುಕುಂ ಸಮಿತಿ ಸದಸ್ಯರಾದ ನಿರಂಜನಮೂರ್ತಿ, ಲತಾಕೇಶಮೂರ್ತಿ, ಶಂಕರಲಿಂಗಯ್ಯ, ಸೇರಿದಂತೆ ನೂರಾರು ರೈತರು ಇದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.
