ಕಾಂಗ್ರೆಸ್ ಪಕ್ಷದಿಂದ ಮಾತ್ರ ಹೆಣ್ಣು ಮಕ್ಕಳ ರಕ್ಷಣೆ ಸಾಧ್ಯ:ರಾಧಾ ವಿಜಯರಾಘವೇಂದ್ರ.

 ಚಿಕ್ಕನಾಯಕನಹಳ್ಳಿ : ಹೆಣ್ಣುಮಕ್ಕಳಿಗೆ ಚುನಾವಣಾ ಮತದಾನ ಹಕ್ಕು ಕೊಟ್ಟ ಪ್ರಥಮ ಸಾಲಿನ ರಾಷ್ಟ್ರಗಳಲ್ಲಿ ಭಾರತವು ಒಂದು, ಡಾ..ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಡಿಯಲ್ಲಿ ಕಾಂಗ್ರೆಸ್ ಪಕ್ಷ ಶಾಸನ ಮಾಡಿ ದೇಶದ ಎಲ್ಲ ಹೆಣ್ಣು ಮಕ್ಕಳಿಗೂ ಸಂರಕ್ಷಣೆ ಮತ್ತು ಸಮಾನತೆ ಕಲ್ಪಿಸಿರುವುದರಲ್ಲಿ ಪಕ್ಷ ಕಾಂಗ್ರೆಸ್ ಎಂದು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಧಾ ವಿಜಯರಾಘವೇಂದ್ರತಿಳಿಸಿದರು.


 ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜನವರಿ 16 ಸೋಮವಾರದಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ *ನಾ ನಾಯಕಿ* ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ೧೦ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ, ಯುವ ನಾಯಕಿ ಪ್ರಿಯಾಂಕ ಗಾಂಧಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.


ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಲಿರುವ ಪ್ರಣಾಳಿಕೆಗೆ ಕೆಲ ಅಂಶಗಳನ್ನು ಸೇರಿಸಲು ಸಲಹೆ ನೀಡಲಾಗುವುದು. *ನಾ ನಾಯಕಿ* ಸಮಾವೇಶಕ್ಕೆ ತಾಲೂಕಿನ ವಿಧಾನಸಭಾ ಕ್ಷೇತ್ರದ 262 ಭೂತ್ಗಳಿಂದ ತಲಾ ಮೂವರು ಕಾರ್ಯಕರ್ತರು ಭಾಗವಹಿಸುವರು. ನಮ್ಮ ದೇಶದಲ್ಲಿನ ಮಹಿಳೆಯರಿಗೆ ಹೆಚ್ಚು ಸ್ಥಾನಮಾನ, ರಕ್ಷಣೆ ನೀಡುವಲ್ಲಿ ಬೇಕಾದಂತ ಕಾನೂನು, ಹೊರಡಿಸಬೇಕೆಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಹೆಚ್ಚು ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಬಲ ನೀಡಲು ಮುಂದಾಗ ಬೇಕಿದೆ.

 *ಪ್ರಣಾಳಿಕೆಯಲ್ಲಿ ಒತ್ತಾಯ.* ಮಹಿಳೆಯರು ಲೋಕಸಭೆ, ವಿಧಾನಸಭೆಯಲ್ಲಿ 50% ಪರ್ಸೆಂಟ್ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು.

 ವಯಸ್ಕ ಹೆಣ್ಣು ಮಕ್ಕಳಿಗೆ ನೈರ್ಮಲ್ಯ ಸ್ವಚ್ಛತೆಗೆ ಸ್ಯಾನಿಟರಿ ಪ್ಯಾಡ್ ಅನ್ನು ಉಚಿತವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಬೇಕು.

 ಮಹಿಳೆಯರನ್ನು ಅತಿ ಹೆಚ್ಚು ಕಾಡುತ್ತಿರುವ ಗರ್ಭ ಚೀಲ ಕಂಠದ ಕ್ಯಾನ್ಸರ್ ವಿರುದ್ಧ ತಡೆಗಟ್ಟಲು ಎಚ್. ಪಿ.ವಿ. ಲಸಿಕೆ ನೀಡಬೇಕು ಎಂಬ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯಿಸಲಾಗುವುದು ಎಂದರು.


 ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿಡಿ ಚಂದ್ರಶೇಖರ್ ಮಾತನಾಡಿ ಹೆಣ್ಣು ಮಕ್ಕಳಿಗೆ ಲೋಕಸಭಾ ರಾಜ್ಯಸಭಾ ಮತ್ತು ವಿಧಾನಸಭೆಗಳಲ್ಲಿ ಶೇಕಡಾ 50% ರಷ್ಟು ಮೀಸಲಾತಿಯನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಧಿಕಾರದಲ್ಲಿ ಲೋಕಸಭೆ ಯಲ್ಲಿ ವಿಶೇಷ ಮೀಸಲಾತಿ ಬಿಲ್ ಮಸೂದೆ ಬಿಲ್ ಪಾಸ್ ಹೊರಡಿಸಲಾಗಿತ್ತು,ಆದರೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆ ಬಿಲ್ ಮಸೂದೆ ಆಗದೆ ಉಳಿದಿದೆ..


 ಮಹಿಳೆಯರ ಸಮಾನತೆಗೆ ವಿರೋಧ ವ್ಯಕ್ತಪಡಿಸುವ ಬಿಜೆಪಿ, ಮಿತ್ರ ಪಕ್ಷಗಳು ಸಂಪೂರ್ಣ ಬಹುಮತದಲ್ಲಿದ್ದರುಸಹ ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ಕಲ್ಪಿಸುವಲ್ಲಿ ಹಿಂದೆ ಬಿದ್ದಿವೆ..

ಬಿಜೆಪಿ ಸರ್ಕಾರದಲ್ಲಿ ಬೇಟಿ ಬಚಾವೋ, ಎಂಬುದು ಕೇವಲ ನಾಟಕೀಯ ವಾಗಿ ಉಳಿದ ಘೋಷಣೆಯಾಗಿದೆ.. ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಜಾರಿಗೆ ತರುವ ಯೋಜನೆಗಳ ಬಗ್ಗೆ ನಾ ನಾಯಕಿ ಸಮಾವೇಶದಲ್ಲಿ ಮಂಡನೆಯಾಗಲಿದೆ ಎಂದರು..


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಬಸವರಾಜು ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಉಕ್ಕಿನ ಮಹಿಳೆ ಎಂದೇ ಹೆಸರಾಗಿದ್ದರು. ಅವರ ಮೊಮ್ಮಗಳು ಪ್ರಿಯಾಂಕ ಗಾಂಧಿ ಅವರಲ್ಲಿ ಇಂದಿರಾಗಾಂಧಿ ಅವರಂತಹ ದಿಟ್ಟ ಗುಣಗಳಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರು ರಾಜ್ಯದಲ್ಲಿದ್ದರೆ ಪಕ್ಷಕ್ಕೆ ಲಾಭವಾಗಲಿದೆ. ಈ ಕುರಿತು ಅವರನ್ನು ಕೇಳಿಕೊಳ್ಳಲಾಗಿದೆ ಎಂದರು.


 ಈ ವೇಳೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಆಕಾಂಕ್ಷಿ ಡಾ.. ವಿಜಯ ರಾಘವೇಂದ್ರ, ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಅಗಸರಹಳ್ಳಿ ಮೂರ್ತಿ, ಶ್ರೀಧರ್, ರಾಜ್ಯ ಸೇವಾದಳ ಕಾರ್ಯದರ್ಶಿ ಕೆ.ಜೆ.ಕೃಷ್ಣೇಗೌಡ, ಸುರೇಶ್ ನಾಯ್ಕ, ಜಾಕಿರ್ ಇತರರು ಭಾಗವಹಿಸಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು