ಚಿಕ್ಕನಾಯಕನಹಳ್ಳಿ : ಸಿರಿಧಾನ್ಯವೆಂಬುದು ಆಹಾರವಲ್ಲ ಅದು ಶಕ್ತಿಯ ಕಣಜ " ಎಂದು ಧಾರವಾಡ ಸಿರಿಧಾನ್ಯ ಸಂಸ್ಕರಣಾ ಘಟಕದ ಹಿರಿಯ ನಿರ್ದೇಶಕರಾದ ಶ್ರೀ ದಿನೇಶ್ ಎಂ. ರವರು ತಿಳಿಸಿದರು.
ಪಟ್ಟಣದ ಶ್ರೀ ಬನಶಂಕರಿ ಪ್ರಾರ್ಥನಾ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ . "ಸಿರಿಧಾನ್ಯ ಬಳಸುವುದರಿಂದ ಸಕ್ಕರೆ ಖಾಯಿಲೆ ರಕ್ತದೊತ್ತಡ ಮುಂತಾದ ಕಾಯಿಲೆಗಳಿಂದ ನಮ್ಮ ಕುಟುಂಬವನ್ನು ಮುಕ್ತಗೊಳಿಸಬಹುದು. ನಮ್ಮ ಪೂರ್ವಜರು ಸಿರಿಧಾನ್ಯ ಬಳಸುತ್ತಿದಿದ್ದುರಿಂದ ದೀರ್ಘಾಯುಷ್ಯಗಳಾಗಿದ್ದರು. ಯೋಜನೆಯು ಇದರ ಬಳಕೆ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ "ಎಂದು ಹೇಳಿದರು.
ತುಮಕೂರು ಜಿಲ್ಲೆಯ ನಿರ್ದೇಶಕರಾದ ಶ್ರೀ ದಿನೇಶ್ ಡಿ.ಯವರು ಮಾತನಾಡಿ "ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಈ ತಾಲೂಕಿನಲ್ಲಿ ಪ್ರಾರಂಭಗೊಂಡು 12 ವರ್ಷಗಳಾಗಿದೆ. ಸಂಘಗಳಲ್ಲಿ ಶಿಸ್ತು ಬದ್ಧ ವ್ಯವಹಾರ, ಮಹಿಳಾ ಸಬಲೀಕರಣ, ಸಂಸ್ಕಾರಯುತ ಜೀವನ ನಡೆಸುವ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಿದೆ.ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ನಿರ್ವಹಿಸಲ್ಪಡುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಬನಶಂಕರಿ ಪ್ರಾರ್ಥನಾ ಮಂದಿರದ ಶ್ರೀ ಬನಶಂಕರಯ್ಯ ರವರು ಮಾತನಾಡಿ "ಈ ಕಾರ್ಯಕ್ರಮ ಯಶಸ್ವಿಯಾಗಲು ನೀವೆಲ್ಲ ಸಹಕಾರ ನೀಡಿರುತ್ತೀರಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ "ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಹನುಮಂತರಾಜರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಮಮತಾ ದ್ರುವ ಕುಮಾರ್ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು. ತಾ. ಕ ಸಾ ಪ ಅಧ್ಯಕ್ಷ ಎಂ ಎಸ್ ರವಿಕುಮಾರ್,
ತಾಲ್ಲೂಕು ಯೋಜನಾಧಿಕಾರಿಗಳಾದ ಪ್ರೇಮಾನಂದ ಎಲ್. ಬಿ. ರವರು ಸರ್ವರನ್ನು ಸ್ವಾಗತ ಮಾಡಿದರು. ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕ ಭಾಸ್ಕರ್ ಅವರು ಧನ್ಯವಾದಗೈದರು . ಜ್ಞಾನವಿಕಾಸ ಸಮನ್ವಯಧಿಕಾರಿ ನೇತ್ರಾವತಿ, ಮೇಲ್ವಿಚಾರಕರದ ರಮೇಶ್, ರೇಣುಕಾ ಪ್ರಸಾದ್, ಲೋಕೇಶ್, ಅರುಣ್, ಸೇವಾಪ್ರತಿನಿಧಿಗಳು,ಮಹಿಳಾ ಸದಸ್ಯರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.


