ಪಾವಗಡ : ತುಮಕೂರು ರಾಯದುರ್ಗ ರೈಲ್ವೆ ನಿಲ್ದಾಣ ಬಳಿ ರೈತರ ಪ್ರತಿಭಟನೆ.
ಅನಾದಿಕಾಲದಿಂದಲೂ ರೈತರು ಜಾನುವಾರುಗಳು ಒಡಾಡುತ್ತಿದ್ದ ದಾರಿಯನ್ನು ಬಂದ್ ಮಾಡಿರುವ ರೈಲ್ವೆ ಕಾಮಗಾರಿ ಮಾಡುವ ಗುತ್ತಿಗೆದಾರರು.
ಕಳೆದಾ ಎರಡು ವರ್ಷಗಳಿಂದ ಸುಮಾರು ೫೦ ಕ್ಕೂ ರೈತರ ಜಮೀನುಗಳಿಗೆ ಹೊಗಲು ದಾರಿಯಿಲ್ಲ ಹಾಗೂ ದನಕರುಗಳು ಹಾಗೂ ಕುರಿ ಮೇಕೆಗಳು ಮೇವಿಗೆ ತೆರಳಲು ಕೂಡ ದಾರಿಯಿಲ್ಲ.
ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಸ್ಪಂದಿಸದ ತಹಶಿಲ್ದಾರ್ ಮತ್ತು ತುಮಕೂರು ಜಿಲ್ಲಾಧಿಕಾರಿ.
ರೈತರು ಪ್ರತಿನಿತ್ಯ ಜಮೀನುಗಳಿಗೆ ತೆರಳಲು ನಾನಾ ಕಷ್ಟ ಪಡಬೇಕಾದ ದುಸ್ಥಿತಿ ಎದುರಾಗಿದೆ .
ಕೆರಳಿದ ರೈತರು ಶಾಮಿಯಾನ ಹಾಕಿ ದಾರಿ ಮಾಡುವ ತನಕ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕೆ.ರಾಮಪುರ ರೈಲ್ವೆ ನಿಲ್ದಾಣ ಬಳಿ ನೂರಾರು ರೈತರಿಂದ ಪ್ರತಿಭಟನೆ.
ದಾರಿ ಮಾಡುವ ತನಕ ರೈತರ ಪ್ರತಿಭಟನೆ ಮುಂದುವರೆಯಲಿದೆ.
ಭೂಮಿ ನೀಡಿದ ರೈತರ ತಲೆಯ ಮೇಲೆ ಚಪ್ಪಡಿ ಕಲ್ಲು ಹಾಕಿದ ಗುತ್ತಿಗೆದಾರರು.
ಭೂಮಿ ನೀಡಿದ ರೈತರಿಗೆ ತುಮಕೂರು ಮತ್ತು ರಾಯದುರ್ಗ ರೈಲ್ವೆ ಯೋಜನೆಯಿಂದ ಅನ್ಯಾಯ.
ವರದಿ : ಪಾವಗಡ ಶ್ರೀನಾಥ್.
