ಸ್ವತಂತ್ರದ ಕಲ್ಪನೆ, ಪ್ರತಿಯೊಬ್ಬ ನಾಗರಿಕರ ಅಬ್ಯುದಯ :-ಸಚಿವ ಜೆ. ಸಿ. ಮಾಧುಸ್ವಾಮಿ.

 ಚಿಕ್ಕನಾಯನಹಳ್ಳಿ : ಮಹಾತ್ಮ ಗಾಂಧಿಯವರ ಕನಸಿನಂತೆ, ದೇಶದ ಪ್ರತಿ ನಾಗರಿಕನು ಅಭಿವೃದ್ಧಿ ಆದರೆ, ಆ ದೇಶ ಸ್ವತಂತ್ರ ವಾಗುತ್ತದೆ. ಪ್ರತಿವ್ಯಕ್ತಿ ಸ್ವಾಭಿಮಾನಿಯಿಂದ ಬಾಳುವಂತ ಸ್ಥಿತಿ ನಿರ್ಮಾಣ ಆದರೆ ಆ ದೇಶ ವ್ಯಕ್ತಿಯನ್ನು ಸ್ವತಂತ್ರನು ಎಂದು ಕರೆಯಬಹುದಾಗಿದ್ದು, ಆಗ ಆ ದೇಶಕ್ಕೆ ಗೌರವ ಬರುತ್ತೆ, ಎಂದು ತಿಳಿಸಿದ ಕಾನೂನು ಸಚಿವ. ಜೆ. ಸಿ. ಮಧುಸ್ವಾಮಿ.



 ಪಟ್ಟಣದ ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಸಡಗರ ಸಂಭ್ರಮದಿಂದ 74ನೇ ಗಣರಾಜ್ಯೋತ್ಸವದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.


ಪಥ ಸಂಚಲನ ನಡೆಸಿದ ಪೊಲೀಸ್, ಗೃಹರಕ್ಷಕ ದಳ ಹಾಗೂ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಹಲವು ಭಾಷೆ, ಧರ್ಮ, ಸಮುದಾಯಗಳಿದ್ದರೂ ಎಲ್ಲರೂ ಹೊಂದಿಕೊಂಡು ಬಾಳುತ್ತಿರುವ ದೇಶವೆಂದರೆ ಅದು ಭಾರತದಲ್ಲಿ ಮಾತ್ರ. ವಿವಿಧತೆಯಲ್ಲಿ ಏಕತೆ ಸಾರಿದ ಜಗತ್ತಿನಲ್ಲೆ ಶ್ರೇಷ್ಠ ರಾಷ್ಟ್ರವಾಗಿ ನಮ್ಮ ದೇಶ ಹೊರಹೊಮ್ಮಿದೆ ಎಂದು ತಿಳಿಸಿದರು.



ಸ್ವಾತಂತ್ರ್ಯ ಬಂದ ಮೇಲೆ ನಾವೆಲ್ಲರೂ ಹೇಗೆ ಕಾನೂನು, ಧರ್ಮ, ಮಾನವಿಯತೆ ಬದುಕಬೇಕೆಂಬ ನಿಟ್ಟಿನಲ್ಲಿ ಎಲ್ಲ ಅಂಶಗಳನ್ನು ಒಳಗೊಂಡ ಸಂವಿಧಾನ ರಚಿಸಿಕೊಂಡು ಇಲ್ಲಿಗೆ 73 ವರ್ಷಗಳು ಕಳೆದಿವೆ.


ದೇಶಕ್ಕೆ ಸೂಕ್ತ ಸಂವಿಧಾನ ರಚಿಸಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್, ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಇಂದು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.


ನಂತರ ವಿವಿಧ ಶಾಲೆಗಳ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಶಭೂಷಣ ತೊಟ್ಟು ಹಾಗೂ ದೇಶದ ಹಿರಿಮೆ ಸಾರುವ ದೇಶ ಭಕ್ತಿಗೀತೆಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಮನರಂಜಿಸಿದರು.


ವಿಶೇಷ ವಾಗಿ ಸಚಿವರು ತಮ್ಮ ಭಾಷಣದಲ್ಲಿ ಹೆಚ್ಚು ಸಮಯವನ್ನು ಬಿಜೆಪಿ ಸರ್ಕಾರದ ಸಾಧನೆ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡಲು ಬಳಸಿಕೊಂಡು ಅಭಿವೃದ್ದಿ ಆಗಿಲ್ಲ ಎಂದು ಹೇಳುವ ಟೀಕಾಕಾರರಿಗೆ ತಿರುಗೇಟು ನೀಡಿದರು.


ರಾಷ್ಟ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಿಂದೆಂದು ಕಂಡಿರದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೋವಿಡ್ ನಂತರ ರಾಜ್ಯದ ಹಣಕಾಸು ಸ್ಥಿತಿಯನ್ನು ಸುಸ್ಥಿಗೆ ತರಲಾಗಿದೆ ಎಂದರು. 


ನಾಲ್ಕು ನಗರಗಳಲ್ಲಿ ಒಂದು ಸಾವಿರ ಮಕ್ಕಳು ಇರುವ ದೊಡ್ಡ ಹಾಸ್ಟೆಲ್ಗಳನ್ನು ಕಟ್ಟಿಸಿ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ರೈತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ವ್ಯವಸ್ಥೆ, ವಿದ್ಯಾರ್ಥಿ ವೇತನ ಮುಂತಾದವುಗಳನ್ನು ನೀಡಿ ಪರಿಶಿಷ್ಟ ಜಾತಿ, ಪಂಗಡದವರ ಮೀಸಲು ಪ್ರಮಾಣ ಹೆಚ್ಚಿಸಿರುವುದು ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮೊದನೆಯದು.


ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ತರುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ವಿವರಿಸಿದರು.


ಹಿಂದುಳಿದ ವರ್ಗದ ಮೀಸಲಾತಿ ವಿಚಾರ ಸುಪ್ರೀಂಕೋರ್ಟ್ನ ಮುಂದಿದ್ದು, ಈಗಿರುವ ಮೀಸಲಾತಿಯನ್ನೇ ಮುಂದುವರಿಸಿಕೊಂಡು ಹೋಗುತ್ತೇವೆಂದು ಅರ್ಜಿ ಹಾಕಿಕೊಂಡು ವಾದ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ, ಜಿಪಂ, ತಾಪಂ ಚುನಾವಣೆಗಳನ್ನು ಮುಂದೂಡಲಾಗಿದೆ.


ಮಲೆನಾಡು ಮತ್ತು ಕ್ಷಿಣ ಕನ್ನಡ ನಾಡಿನ ರೈತರಿದ್ದ 7ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್ನಿಂದ ಬೇರ್ಪಡಿಸಿ ಅವರಿಗೇ ಕೊಡುವ ಪ್ರಯತ್ನ ನಡೆದಿದೆ. ರಾಜ್ಯದ ಜನತೆಗೆ ಎಲ್ಲರಿಗೂ ಮನೆ ಕಲ್ಪಿಸಿ ಕೊಡಲಾಗುತ್ತಿದೆ.


ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಐಸಿಯುಗಳನ್ನು ಮಾಡಿ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹಾಗೂ ತಾಯಿ- ಮಗು ಆಸ್ಪತ್ರೆ ಮಂಜುರಾಗಿದ್ದು ಎಲ್ಲಾ ಸೌಲಭ್ಯ ಒದಗಿಸಲಾಗುವುದು.ತುಮಕೂರಿನ ಸಾರ್ವಜನಿಕ ಆಸ್ಪತ್ರೆಗೆ 600 ಬೆಡ್ ಸೌಲಭ್ಯಗಳನ್ನು ಕಲ್ಪಿಸಿ ಸುಸಜ್ಜಿತಗೊಳಿಸಲಾಗಿದೆ.ರಾಜ್ಯದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.


ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಕೈಜೋಡಿಸಿ53 ಲಕ್ಷ ರೈತರ ಖಾತೆಗಳಿಗೆ ತಲಾ 10ಸಾವಿರ ರೂ.ಪ್ರೋತ್ಸಾಹ ಧನ ಹಾಕುವ ವ್ಯವಸ್ಥೆ ಮಾಡಲಾಗಿದೆ.ಜತೆಗೆ ತಾವು ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ನೀಡಿದರು. 


 ಈ ವೇಳೆ ತಹಸೀಲ್ದಾರ್ ಬಿ.ತೇಜಸ್ವಿನಿ, ಸಿಪಿಐ ನಿರ್ಮಲಾ, ಪುರಸಭಾಧ್ಯಕ್ಷೆ ಪುಷ್ಪಾ ಹನುಮಂತರಾಜು, ಉಪಾಧ್ಯಕ್ಷೆ ಮಮತಾ ದ್ರುವಕುಮಾರ್, ತಾ. ಪಂಚಾಯತ್ ಇ.ಒ.ವಸಂತ್ ಕುಮಾರ್, ಬಿ.ಇ.ಒ. ಮನಮೋಹನ್, ಪುರಸಭಾ ಮುಖ್ಯಧಿಕಾರಿ ಶ್ರೀನಿವಾಸ್ ಇತರರು ವೇದಿಕೆ ಮೇಲಿದ್ದರು.


ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡ ಸಂಘದ ವೇದಿಕೆ, ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು