ಚಿಕ್ಕನಾಯಕನಹಳ್ಳಿ : ಸಂವಿಧಾನವೇ ರಾಷ್ಟ್ರದ 135 ಕೋಟಿ ಜನರ ಹಿತ ಕಾಯುವ ವ್ಯಕ್ತಿ ಯಾಗಿ ಉದಯಿಸಿದ ಸೂರ್ಯ ಡಾ.ಬಿ ಆರ್ ಆoಬೇಡ್ಕರ್ ಆಗಿದ್ದಾರೆ ಎoದು ಕರ್ನಾಟಕ ಮಾದಿಗ ದಂಡೋರ ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಪಟ್ಟಣದ ನೆಹರು ಸರ್ಕಲ್ ನಲ್ಲಿ ಈ ರಾಷ್ಟ್ರಕ್ಕೆ ಸoವಿಧಾನ ಸಮರ್ಪಣೆ ಅಂಗವಾಗಿ ವಿವಿಧ ದಲಿತ ಸಂಘಟನೆಗಳ ಮುಖಂಡರುಳಿಂದ 74 ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸಂವಿಧಾನ ದಿನ ಆಚರಣೆ ಮಾಡುವ ಮೂಲಕ ಡಾ. ಬಿ. ಆರ್ ಆoಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ರಾಷ್ಟ್ರದ ಸಂವಿಧಾನ ಶಿಲ್ಪಿ,ಶಿಕ್ಷಣ ಸoಘಟನೆ ಹೋರಾಟದ ಆರಿವು ನೀಡಿದ ಆವರನ್ನು ನಾವು ಹೃದಯಾoತರಾಳದಲ್ಲಿ ನೆನೆಯ ಬೇಕು. ಹಾಗೂ ಡಾ ಬಿ.ಆರ್. ಆoಬೇಡ್ಕರ್ ರವರ ಸಂವಿಧಾನ ಆಶಯಗಳು ಸರ್ವರಿಗೂ ದೂರೆಯುವoತೆ ಆಳುವ ಸರ್ಕಾರಗಳು ಗಮನಹರಿಸ ಬೇಕು ಎಂದರು.
ದಲಿತ ಮುಖಂಡ ಡಿ ಎಸ್ ಎಸ್ ಸಂಚಾಲಕ ಸಿ ಎಸ್.ಲಿoಗದೇವರು ಮಾತನಾಡಿ ಜಗದ ತಾರತಮ್ಯದ ಬದುಕು ಕoಡು ನಾಡಿನ ಸಮಾನತೆ ನೆಲೆಗೆ ರಾಜ್ಯಾಳ್ವಿಕೆಗೆ ಸoವಿಧಾನ ನಿಘoಟಿನ ಆಧಾರದಿಂದಾದರೂ ಸoವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬರು ದೀನ ದಲಿತರ ಬದುಕಿಗೆ ಬೇಳಕಾದವರು ಎಂದು ನುಡಿದರು.
ಈ ವೇಳೆ ಗೋ.ನಿ. ವಸoತಕುಮಾರ್,ಕೃಷ್ಣಮೂರ್ತಿ, ದುಗಡಿಹಳ್ಳಿ ಬಸವರಾಜ್, ತೀರ್ಥಪುರ ಪರಮೇಶ್, ಕೆ ಇ ಬಿ ನಾಗರಾಜು, ಆರೂಗ್ಯ ಇಲಾಖೆ ಮoಜುನಾಥ್,ಪುರಸಭೆ ಪೌರಕಾರ್ಮಿಕರು ಮುoತಾದವರು ಬಾಗವಹಿಸಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.
