ಮಧುಗಿರಿ:ನನ್ನ ಸ್ನೇಹಿತ ಕೆ.ಎನ್ ರಾಜಣ್ಣನ ಸಹಕಾರದಿಂದ ನಾನು ಪಾರ್ಲಿಮೆಂಟ್ ಸದಸ್ಯನಾಗಿ ಆಯ್ಕೆಯಾಗಿದ್ದು ಚುನಾವಣೆಯಲ್ಲಿ ಗೆದ್ದ ನಂತರ ಇದೇ ಮೊದಲ ಬಾರಿ ನಮ್ಮ ಸ್ನೇಹಿತರ ಜತೆ ವೇದಿಕೆ ಹಂಚಿಕೊಂಡಿದ್ದೇನೆ ಎಂದು ಬಿಜೆಪಿಯ ಸಂಸದ ಜಿ.ಎಸ್ ಬಸವರಾಜು ತಿಳಿಸಿದರು.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಸುದ್ದೇಕುಂಟೆಯಲ್ಲಿ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮಲ್ಲಿ ಮಾತನಾಡಿದ ಅವರು ಈ ದೇವಸ್ಥಾನವನ್ನು ಅಭಿವೃದ್ಧಿಗೆ ನಾನು ಮತ್ತು ರಾಜಣ್ಣ ಮಾಡುತ್ತೇವೆ, ಅಭಿವೃದ್ಧಿ ಕೆಲಸ ಮಾಡಬೇಕು ಹೊರೆತು ಟೀಕೆ ಮಾಡಬಾರದು. ನಾನು ನೀವು ಯಾವುದೆ ಪಕ್ಷ ಇದ್ದರೂ ಒಂದಲ್ಲ ಒಂದು ದಿನ ಸಾಯಬೇಕು ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿ ಮಾಡಬೇಕಿದೆ ಎಂದರು.
ಯಾರು ನಿಮ್ಮ ಆಭಿವೃದ್ಧಿಗೆ ಶ್ರಮಿಸುತ್ತಾರೋ ಅಂತಹವರಿಗೆ ನೀವು ಮತಹಾಕಿ ದುಡ್ಡು, ಸೀರೆ ಅರಶಿನ ಕುಂಕುಮ ಕೊಡುವವರನ್ನು ದೂರವಿಡಿ, ನಾನು ಒಂದು ಪಕ್ಷ ರಾಜಣ್ಣ ಒಂದು ಪಕ್ಷ ಆದರೆ ಯಾರೆ ಆಗಲಿ ಕೆಲಸ ಮಾಡುವ ವ್ಯಕ್ತಿ ಕೆ.ಎನ್ ರಾಜಣ್ಣಗೆ ಈ ಬಾರಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಗೆಲ್ಲಿಸಿ, ನಾನು ರಾಜಣ್ಣ ಸೇರಿ ನೀರಾವರಿ ಯೋಜನೆಗಳಲ್ಲಿ ಪ್ರಚಲಿತ ಕಾರ್ಯಕ್ರಮಗಳು ಜಾರಿಗೆ ತರಲು ಚಿಂತನೆ ನಾನು ರಾಜಣ್ಣ ಮಾಡುತಿದ್ದೇವೆ ಎಂದರು.
ಮಾಜಿ ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ ಹೆಣ್ಣು ಮಕ್ಕಳು ಅರಿಶಿನ ಕುಂಕುಮ ನೋಡಿ ಭಾವನಾತ್ಮಕ ವಿಚಾರದಿಂದ ನನಗೆ ಮತಗಳು ಕಡಿಮೆಯಾಗಿವೆ. ನಾನು ಶಾಸಕಾನಗಿದ್ದರೆ ಮಧುಗಿರಿ ಜಿಲ್ಲಾ ಕೇಂದ್ರ, ಹಾಗೂ ತಾಲ್ಲೂಕಿನ 54 ಕೆರೆಗಳನ್ನು ಎತ್ತಿನಹೊಳೆ ಮೂಲಕ ತುಂಬಿಸುವ ಕೆಲಸ ಮಾಡುತಿದ್ದೆ, ನನ್ನ ಸೋಲಿನಿಂದ ನನಗೇನು ನಷ್ಟ ಆಗಿಲ್ಲ ಜನಪರ ಕೆಲಸಗಳು ಕುಂಠಿತವಾಗಿವೆ ಸಂಸದರು ಹೇಳಿದಂತೆ ಜನಪರ ಕೆಲಸ ಯಾರು ಮಾಡುತ್ತಾರೆ ಅಂತವಹರಿಗೆ ನಿಮ್ಮ ಆರ್ಶಿವಾದ ಇರಲಿ ಎಂದರು.
ವರದಿ : ಮಧುಗಿರಿ ಬಾಲು ಪಣಿಂದ್ರ
