ಗುಬ್ಬಿ : ಪಟ್ಟಣದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಟರಾಜ ನೃತ್ಯ ಶಾಲೆ, ತುಮಕೂರು ವತಿಯಿಂದ ತುಮಕೂರು ಚಿಕ್ಕನಾಯಕನಹಳ್ಳಿ ಗುಬ್ಬಿ ತಿಪಟೂರು ತಾಲೂಕಿನ ವಿದ್ಯಾರ್ಥಿಗಳು ವಿಶೇಷ ಭರತನಾಟ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಮಕ್ಕಳಿಗೆ ಕೇವಲ ದುಡಿಯುವುದಕ್ಕೆ ಮಾತ್ರ ಅವರಿಗೆ ಶಿಕ್ಷಣ ಕೊಡದೆ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗಳನ್ನು ಹುಡುಕುವ ಪ್ರಯತ್ನ ಮಾಡಿದಾಗ ಅವರು ಕಂಡಿತವಾಗಿ ಸಾಧನೆಯ ಹಾದಿ ಹಿಡಿಯುತ್ತಾರೇ ಕೇವಲ ನಮ್ಮ ಸ್ವಾರ್ಥಕ್ಕೆ ಮಾತ್ರ ಬದುಕಡೆ ಸಮಾಜಕೆ ನಮ್ಮಿಂದ ಆಗುವ ಸಹಾಯವನ್ನು ಸಹ ಮಾಡಬೇಕು ಎಂದು ತಿಳಿಸಿದ್ರು.
ಗುಬ್ಬಿ ವೀರಣ್ಣ ಟ್ರಸ್ಟ್ ನ ಸದಸ್ಯ ಆನಂದ್ ರಾಜ್ ಮಾತನಾಡಿ ಗತ ಕಾಲದಿಂದ ಭಾರತ ನಾಟ್ಯ ನಮ್ಮಲ್ಲಿ ಇದ್ದು ರಾಜ ಮಹಾರಾಜಾ ರಾಕಾಲದಿಂದ ನಿರಂತರ ವಾಗಿ ನಡೆಯುತ್ತಿದೆ ಅದನ್ನು ಪ್ರೋತ್ಸಾಹ ಮಾಡಿಕೊಂಡು ಬಂದಿರುವ ನಟರಾಜ ನೃತ್ಯ ಶಾಲೆಗೆ ಅಭಿನಂದನೆಗಳು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ನಳಿನಾ, ರಾಜೇಶ್ ಗುಬ್ಬಿ, ಕಲಾವಿಧ ರಾದ ಚಂದ್ರು ,ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
