ಗುಬ್ಬಿ: ಪುರಾತನ ಕಲೆಗಳಲ್ಲಿ ಒಂದಾದ ಭರತನಾಟ್ಯ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು ಈ ದೃಷ್ಟಿಯಿಂದ ಗ್ರಾಮೀಣ ಮಟ್ಟದಲ್ಲಿನ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಲೆಂದು ಇಂದು ನಾವು ಈ ನೃತ್ಯದ ಕಾರ್ಯಕ್ರಮ ಹಮ್ಮಿಕೊಂಡಿದ್ದೆವೇ ಎಂದು ಖ್ಯಾತ ರಂಗ ನಿರ್ದೇಶಕಿ ಕಲಾವಿದೆ ರಾಜ್ಯ ಸಭೆಯ ಮಾಜಿ ಸದಸ್ಯೆ ಬಿ ಜಯಶ್ರೀ ತಿಳಿದಿಸಿದರು ಅವರು ಗುಬ್ಬಿಯ ತೊಂಗನಹಳ್ಳಿ ಗ್ರಾಮದಲ್ಲಿ ಜರುಗಿದ ಸಂಕ್ರಾಂತಿ ಉತ್ಸವದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಓಡಿಸ್ಸಿ ನೃತ್ಯ ತರಬೇತಿ ಹಾಗೂ ಮಕ್ಕಳ ಬೇಸಿಗೆ ಶಿಬಿರವನ್ನು ಟ್ರಸ್ಟ್ ವತಿಯಿಂದ ನೆಡೆಸಲಾಗುವುದು ಈ ಶಿಬಿರದ ನಿರ್ದೇಶಕರಾಗಿ ಚಿಕ್ಕಮಂಗಳೂರಿನ ಖ್ಯಾತ ರಂಗ ಕರ್ಮಿ ವಿನೀತ್ ಕುಮಾರ್ ಆಯ್ಕೆ ಯಾಗಿದ್ದರೆ ಎಂದು ತಿಳಿಸಿದರು 7 ಗಂಟೆಗೆ ತೊಂಗನಹಳ್ಳಿಯ ಬನದವ್ವ ಬಯಲು ರಂಗಮಂದಿರದಲ್ಲಿ ಮಾಲತಮ್ಮ ಆರ್ಟ್ ಫೌಂಡೇಷನ್ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮ ಜನರ ಮನ ಸೂರೆಗೊಂಡಿತ್ತು
ಬೆಂಗಳೂರಿನ ಸಮನ್ವಿತ ತಂಡದವರು ನೆಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ 6 ಭರತ ನಾಟ್ಯಗಳನ್ನು ಪ್ರದರ್ಶಿಸಲಾಯಿತು ಗಣೇಶ ಅಲರಿಪ್ಪು,ಗಣೇಶ ಕೌತವಮ್,ಅಂಬಾಶಾಂಭವಿ,ಶ್ರೀರಾಮಚಂದ್ರ,ಕಾಳಿಂಗ ನರ್ತನ,ಭೈರವ ನರ್ತನಗಳನ್ನು ಪ್ರಸ್ತುತಪಡಿಸಲಾಯಿತು.ತಂಡದ ಮುಖ್ಯಸ್ಥೆ ಶ್ರೀಮತಿ ಸಿಮ್ರಾನ್. ಕಾರ್ಯದರ್ಶಿ ಕೆ ಆನಂದ ರಾಜು ,ಸದಸ್ಯ ರಾಜೇಶ್ ಗುಬ್ಬಿ, ಭಾಗವಹಿಸಿದ್ದರು.
