ಕೊಡಿಗೇನಹಳ್ಳಿ ಹೋಬಳಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಕೆ.ಪಿ. ಅಶ್ವತ್ಥನಾರಾಯಣ.

 


ಮಧುಗಿರಿ: ಕೊಡಿಗೇನಹಳ್ಳಿ ಗ್ರಾಮದಲ್ಲಿ ಜ.30   ಸೋಮವಾರರಂದು  ನಡೆಯುವ  ಹೋಬಳಿ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಡಿಗೇನಹಳ್ಳಿ ಗ್ರಾಮದ ರಂಗಭೂಮಿ ಕಲಾವಿದ ಡಾ. ಕೆ ಪಿ ಅಶ್ವತ್ಥನಾರಾಯಣರವರ ನಿವಾಸಕ್ಕೆ  ಮಂಗಳವಾರ ಸಂಜೆ  ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಹಾಗೂ ಹೋಬಳಿ ಘಟಕದ  ಪದಾಧಿಕಾರಿಗಳು  ಭೇಟಿ ನೀಡಿ  ಅಧಿಕೃತ ಆಹ್ವಾನ ಪತ್ರ ನೀಡುವುದರೊಂದಿಗೆ ಆಹ್ವಾನಿಸಿದರು. 


 ರಂಗಭೂಮಿ ಕಲಾವಿದ ಡಾ. ಕೆ ಪಿ ಅಶ್ವತ್ಥನಾರಾಯಣ್ ಮಾತನಾಡಿ,  ನಾನು ಎಂದು ಪ್ರಚಾರಕ್ಕೋ  ಅಥವಾ ಪ್ರಶಸ್ತಿಗೆಂದೋ ಕೆಲಸ ಮಾಡಿದವನಲ್ಲ. ನನ್ನ ವೃತ್ತಿಯನ್ನು ಕಾಯಕವೇ ಕೈಲಾಸವೆಂದು ಅರಿತು ಎಲೆಮರದ ಕಾಯಿಯಂತೆ ಮುನ್ನಡೆಯುತ್ತಿದ್ದವನಿಗೆ ಇವತ್ತು ತಾಲ್ಲೂಕು ಹಾಗೂ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನನ್ನ ಸೇವೆಯನ್ನು ಗುರುತಿಸಿ ಗೌರವಿಸಿರುವುದು ಜೀವನದಲ್ಲಿ ಮರೆಯಲಾಗದ ಸಂತಸದ ಕ್ಷಣ. ಕನ್ನಡ ಮನಸುಗಳು ನನ್ನ ಮೇಲೆ ನಂಬಿಕೆಯಿಟ್ಟು ಅತ್ಯಂತ ಗೌರವ ಸ್ಥಾನ ನೀಡಿರುವುದಕ್ಕೆ  ಯಾವುದೇ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದರು.

 

ಐ.ಎ.ಎಸ್. ಅಧಿಕಾರಿ ಧನರಾಜು,  ತಾಲ್ಲೂಕು ಕಸಾಪ ಉಪಾಧ್ಯಕ್ಷ  ಎ.ರಾಮಚಂದ್ರಪ್ಪ, ಗೌರವ ಕಾರ್ಯದರ್ಶಿ  ರಂಗಧಾಮಯ್ಯ, ನಿರ್ದೇಶಕರಾದ ಟಿ.ರಂಗಧಾಮಯ್ಯ  ಹಾಗೂ ಹೋಬಳಿ ಘಟಕದ ಅಧ್ಯಕ್ಷ ಕೆ.ಎಲ್. ನಂದೀಶಯ್ಯ, ಸಹ ಕಾರ್ಯದರ್ಶಿ  ರಾಕೇಶ್ ವಂಗೋಲ್,   ಖಜಾಂಚಿ  ರಾಮು , ಶಿಕ್ಷಕ ಮಂಜುನಾಥ್, ಪುರವರ ಹೋಬಳಿ ಕಾರ್ಯದರ್ಶಿ ಜಿ.ರಘು ಮತ್ತು ಐ.ಡಿ.ಹಳ್ಳಿ ಹೋಬಳಿ ಕಾರ್ಯದರ್ಶಿ ಶಿಕ್ಷಕ ಸಿ.ಇ.  ಶಾಂತಕುಮಾರ್ ಇದ್ದರು.


ವರದಿ: ಮಧುಗಿರಿ ಬಾಲುಪಣಿಂದ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು