ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪರ್ವ ಇಂದು ಸಹ ಮುಂದುವರೆಯಿತು

 ಗುಬ್ಬಿ : ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಪರ್ವ ಇಂದು ಸಹ ಮುಂದುವರೆಯಿತು


.

 ತಾಲೂಕಿನ ಮಾರಶೆಟ್ಟಿಹಳ್ಳಿ ಹಳ್ಳಿ ಗ್ರಾಮದಲ್ಲಿ ವಾಸಣ್ಣ ಅಭಿಮಾನಿ ಬಳಗದಿಂದ ಸುಮಾರು 200 ಹೆಚ್ಚು ಜನ ರಾಜೀನಾಮೆಯನ್ನು ಸಲ್ಲಿಸಿದರು.

  ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಮುನೇಶ್ 20 ವರ್ಷಗಳಿಂದ ಆಡಳಿತ ಮಾಡುತ್ತಿರುವ ಶಾಸಕರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರು ಯಾವ ಪಕ್ಷಕ್ಕೆ ಹೋದರು ಪಕ್ಷೇತರ ಅಭ್ಯರ್ಥಿಯಾಗಿ ಹೋದರು ನಾವು ಅವರ ಜೊತೆಯಲ್ಲಿ ಸಾಗುತ್ತೇವೆ ಎಂದು ತಿಳಿಸಿದರು.

 ದಲಿತ ಮುಖಂಡ ಕುಂದರನಹಳ್ಳಿಕುಂದಾರನ ಹಳ್ಳಿ ರವೀಶ್ ಮಾತನಾಡಿ 20 ವರ್ಷದ ಹಿಂದೆ ಗೆದ್ದಿರುವಂತಹ ಶಾಸಕರುಗಳು ನಮ್ಮ ಸಮುದಾಯವನ್ನು ಗುರುತಿಸಲೇ ಇಲ್ಲ ಇವರು ಬಂದ ಮೇಲೆ ನೇರವಾಗಿ ಅವರ ಬಳಿ ಹೋಗಿ ಕೆಲಸ ಕಾರ್ಯಗಳನ್ನು ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.

 ಮುಖಂಡ ಸಿದ್ದಲಿಂಗಪ್ಪ ಮಾತನಾಡಿ ನಿರಂತರ ಜನರ ಸಂಪರ್ಕದಲ್ಲಿರುವ ಶಾಸಕ ಶ್ರೀನಿವಾಸ್ ಅವರು ಈ ಭಾಗದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಶ್ರಮಿಸಿದ್ದು ಅವರ ಜೊತೆಯಲ್ಲಿ ನಾವು ಸಾಗುತ್ತೇವೆ ಎಂದು ತಿಳಿಸಿದರು.

 ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ ಮಾತನಾಡಿ ನಾವೆಲ್ಲರೂ ಸಹ ಜಾತ್ಯಾತೀತ ಜನತಾ ದಳವನ್ನು ಬಿಟ್ಟು ಶ್ರೀನಿವಾಸ್ ಅವರು ಯಾವ ಪಕ್ಷಕ್ಕೆ ತೆರಳುತ್ತಾರೋ ನಾವೆಲ್ಲ ಅವರ ಜೊತೆಗೆ ಸಾಗುತ್ತೇವೆ ಅವರ ಅಭಿವೃದ್ಧಿ ಕೆಲಸ ಹಾಗೂ ಅವರ ಪ್ರೀತಿ ನಮನ್ನ ಮತ್ತೆ ಅವರ ಜೊತೆಗೆ ಕರೆದು ಕೊಂಡು ಹೋಗುತ್ತದೆ ಎಂದು ತಿಳಿಸಿದರು.ವಿ

 ಇದೇ ಸಂದರ್ಭದಲ್ಲಿ ಮುಖಂಡ ವೆಂಕಟೇಶ್ ಹಲವು ಮುಖಂಡರು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು