ಗುಬ್ಬಿ : ಶಿಕ್ಷಣವನ್ನು ನೀಡುವ ಮೂಲಕ ಬಡವರ ಮಕ್ಕಳಿಗೆ ದಾರಿ ಮಾಡಿಕೊಟ್ಟಿರುವ ಚಿದಂಬರ ಆಶ್ರಮ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿದೆ ಎಂದು ವಿದ್ಯಾ ವಾಚಸ್ಪತಿ ಡಾಕ್ಟರ್ ಪಾವಗಡ ಪ್ರಕಾಶ್ ತಿಳಿಸಿದರು.
ಪಟ್ಟಣದ ಚಿದಂಬರ ಆಶ್ರಮದಲ್ಲಿ ಅವಧೂತ ಶ್ರೀ ಚಿದಂಬರ ಶರ್ಮರ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬದುಕಿನಲ್ಲಿ ಏನಿಲ್ಲ ಎಂಬುದರ ಬದಲಾಗಿ ಬದುಕನ್ನೇ ಬದಲಾವಣೆ ಮಾಡಿಕೊಂಡು ಸಮಾಜಕ್ಕೆ ಒಂದಷ್ಟು ಕೊಡುಗೆಯನ್ನು ನೀಡುತ್ತೇವೆ ಎಂಬ ಮನಸ್ಸು ಮನುಷ್ಯನಿಗೆ ಬಂದಾಗ ಅವನು ನಿಸ್ವಾರ್ಥಿಯಾಗುತ್ತಾನೆ ಸಮಾಜದ ಅಭಿವೃದ್ಧಿಯ ಕಡೆ ಗಮನಹರಿಸುತ್ತಾನೆ ನಾವು ಕಲಿತಿರುವಂತಹ ವಿದ್ಯೆಯನ್ನು ಇನ್ನಿತರ ಅಭಿವೃದ್ಧಿಗೆ ಬಳಸಿದಾಗ ಸಕಲರಿಗೂ ಒಳಿತಾಗುತ್ತದೆ ಎಂದು ತಿಳಿಸಿದರು.
ಶಿರಳಾಗಿ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಮಾತನಾಡಿ
ಬೇರೆಯವರು ಚನ್ನಾಗಿರಲಿ ಎಂದು ನಾವು ಭಾವಿಸಿದಾಗ ಮಾತ್ರ ಸನಾತನ ಧರ್ಮದ ಮೌಲ್ಯಗಳು ಉಳಿಯುತ್ತವೆ.
ಬದುಕಿನಲ್ಲಿ ತ್ಯಾಗ ಮಾಡುವ ಗುಣ ನಮಗೆ ಬೇಕು ಶಾಂತಿ ಯಾವುದರಿಂದ ಸಿಗುತ್ತದೆ ಎಂದು ನೋಡಿದಾಗಅದು ಸಿಗುವುದು ಬೇರೆಯವರಿಗೆ ಸಹಕಾರ ಮಾಡಿದಾಗ ಮಾತ್ರ ಎಂಬುದನ್ನು ನಾವು ಅರಿಯಬೇಕಾಗಿದೆ.ಸ್ವಾರ್ಥ ಬಿಟ್ಟು ಹೋದಾಗ ಮಾತ್ರ ಚಿದಂಬರ ಶರ್ಮರಂತೆ ಬದುಕಬಹುದು ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯ ವಿಶ್ವನಾಥ ಚಕ್ರವರ್ತಿ ಗುರೂಜಿ ಮಾತನಾಡಿ
ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಮೂಲಕ ಅವರ ಬದುಕಿಗೆ ದಾರಿಯಾಗಿದ್ದಾರೆ ಈ ಚಿದಂಬರ ಆಶ್ರಮವನ್ನು ಕಟ್ಟಿ ಬೆಳೆಸಿರುವ ಕೀರ್ತಿ ಶಿವಣ್ಣನವರಿಗೆ ಸಲ್ಲುತ್ತದೆ ಇಲ್ಲಿನ ಸಂಸ್ಕೃತಿ ಸಂಸ್ಕಾರ ಸನಾತನ ಧರ್ಮಕ್ಕೆ ಇಂದು ಬೆಳವಣಿಗೆ ಆಗುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಿದಂಬರಆಶ್ರಮದ ನಿರ್ವಾಹಕ ಡಾ ಸಚ್ಚಿದಾನಂದ ಎಸ್ ಸೊಗಲ, ಆಶ್ರಮದ ಟ್ರಸ್ಟಿ ಕೆ ಆರ್ ಲಕ್ಷ್ಮಿನಾರಾಯಣ ಸೇರಿದಂತೆ ಆಶ್ರಮದ ಪದಾಧಿಕಾರಿಗಳು ಅವರ ಅನುಯಾಯಿಗಳು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
