ಫೆ. 28ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೊಂಡವಾಡಿ ಚಂದ್ರಶೇಖರ್.

ಮಧುಗಿರಿ :  ಫೆ. 28ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೊಂಡವಾಡಿ ಚಂದ್ರಶೇಖರ್.


 ತುಮಕೂರು ಸಹಕಾರಿ ಹಾಲು ಒಕ್ಕೂಟ, ಜಿಲ್ಲಾ ರೈತರ ಮತ್ತು ಎಂಪಿಸಿಎಸ್ ನೌಕರರ ಹಾಗೂ ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ, ಮಧುಗಿರಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ಎಂ.ಎಸ್. ರಾಮಯ್ಯ ಆಸ್ಪತ್ರೆ ಬೆಂಗಳೂರು, ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುಮಕೂರು, ಶ್ರೀ ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ತುಮಕೂರು, ಅಶ್ವಿನಿ ಆಯುರ್ವೇದ ಆಸ್ಪತ್ರೆ ತುಮಕೂರು, ಗುರು ಶ್ರೀ ಆಸ್ಪತ್ರೆ ಮಧುಗಿರಿ ಹಾಗೂ ಕೊಂಡವಾಡಿ ಚಂದ್ರಶೇಖರ್ ಅಭಿಮಾನಿ ಬಳಗ ಇವರ ಸಂಯುಕ್ತ ಆಶಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೆ ಫೆಬ್ರವರಿ 28ರಂದು ಮಂಗಳವಾರ ಮಿಡಿಗೇಶಿ ಹೋಬಳಿಯ ಹೊಸಕೆರೆ ಪ್ರಾಥಮಿಕ ಶಾಲೆ ಆವರಣ ಹೊಸಕೆರೆ ಇಲ್ಲಿ ಬೆಳಿಗ್ಗೆ 9 ರಿಂದ ಮದ್ಯಾಹ್ನ 2 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು ಎಲ್ಲಾ ಹಾಲು ಉತ್ಪಾದಕರು ಹಾಗೂ ಸಾರ್ವಜನಿಕರು ಶಿಬಿರದ ಉಪಯೋಗವನ್ನು ಪಡೆಯಬೇಕೆಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.


 ತಾಲೂಕಿನ ಸಾರ್ವಜನಿಕರಲ್ಲಿ ಹಲವು ವಿವಿಧ ಆರೋಗ್ಯ ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸಲು ಜನತೆಯ ಮನೆ ಬಾಗಿಲಿಗೆ ಈ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು ಶಿಬಿರದಲ್ಲಿ ನುರಿತ ವೈದ್ಯರಿಂದ ಹೃದಯ ಸಂಬಂಧಿ, ಮೂಳೆ, ಕಿವಿ, ಮೂಗು, ಗಂಟಲು, ಚರ್ಮ, ದಂತ ಚಿಕಿತ್ಸೆ ಮಕ್ಕಳ ತಜ್ಞರು ಇರಲಿದ್ದು ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡಲಿದ್ದಾರೆ. ಮುಖ್ಯವಾಗಿ ತಾಲೂಕಿನ ಜನರಲ್ಲಿ ಬಿಪಿ ಮತ್ತು ಶುಗರ್ ಕಾಯಿಲೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲಿದ್ದು ಇದರೊಂದಿಗೆ ಕಣ್ಣಿನ ಸಮಸ್ಯೆಗಳ ಬಗ್ಗೆ ಎಲ್ಲಾ ರೀತಿಯ ಚಿಕಿತ್ಸೆ ನೆರವನ್ನು ನೀಡಲು ವಿಶೇಷ ತಂಡವನ್ನು ರಚಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಕನ್ನಡಕವನ್ನು ಉಚಿತವಾಗಿ ನೀಡುವುದಲ್ಲದೆ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಲಾಗುವುದು. ವಿಶೇಷವಾಗಿ ಈ ಶಿಬಿರದಲ್ಲಿ ಹಾಲು ಉತ್ಪಾದಕರಿಗೆ ಮೇವು ಮತ್ತು ಮೇವಿನ ಬೀಜಗಳ ಬಗ್ಗೆ ಹಾಗೂ ಪಶು ಆಹಾರದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ಮತ್ತು ರೈತರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಹಸು ಖರೀದಿಗೆ ಸಾಲ ಸೌಲಭ್ಯವನ್ನು ನೀಡಲು ವಿವಿಧ ಬ್ಯಾಂಕುಗಳು ಭಾಗವಹಿಸಲಿದ್ದು ಅಲ್ಲಿ ಎಲ್ಲ ರೀತಿಯ ಸಾಲ ಸೌಲಭ್ಯದ ನೆರವನ್ನು ಸಹ ರೈತರಿಗೆ ನೀಡಲಾಗುವುದು. ಈ ಶಿಬಿರವು ರೈತರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು ಹೆಚ್ಚಿನ ಜನಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಹಾಗೂ ಸಾರ್ವಜನಿಕರ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಇದೇ ಸಮಯದಲ್ಲಿ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ, ಪಶುವೈದ್ಯ ದೀಕ್ಷಿತ್, ತಾಲೂಕು ತುಮುಲ್ ವಿಸ್ತರಣಾಧಿಕಾರಿಗಳಾದ ಗಿರೀಶ್, ದರ್ಶನ್, ಧರ್ಮವೀರ್, ಮಹಾಲಕ್ಷ್ಮಿ ಮಾರೇಗೌಡ, ಜೊತೆಗಿದ್ದರು.



ವರದಿ : ಮಧುಗಿರಿ ಬಾಲು ಪಾಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು