ಫೆ.24ರಂದು ಬೆಳಿಗ್ಗೆ 11 ರಿಂದ ಸಂಜೆ 6ರವರೆಗೆ ಕೆ.ಬಿ ಕ್ರಾಸ್ ಸ್ವೀಕರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

 ಚಿಕ್ಕನಾಯಕನಹಳ್ಳಿ : ಫೆ.24ರಂದು ಬೆಳಿಗ್ಗೆ 11 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.



220 ಕೆ.ವಿ ಕೆ.ಬಿ ಕ್ರಾಸ್ ಸ್ವೀಕರಣಾ ಕೇಂದ್ರದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ದಿನಾಂಕ: 24.02.2023 ರಂದು ಹಮ್ಮಿಕೊಂಡಿರುವುದರಿಂದ ಸದರಿ ದಿನದಂದು ಬೆಳಿಗ್ಗೆ 11:00 ರಿಂದ ಸಂಜೆ 06:00 ರವರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ, ಚಿಕ್ಕನಾಯಕನಹಳ್ಳಿ, ಶೆಟ್ಟಿಕೆರೆ, ಹುಳಿಯಾರು, ಹಂದನಕೆರೆ, ತಿಮ್ಮನಹಳ್ಳಿ ಹಾಗೂ ಕಾತ್ರಿಕೇಹಾಲ್ ವಿದ್ಯುತ್ ಉಪಸ್ಥಾವರಗಳಿಂದ ವಿದ್ಯುತ್‌ ಸರಬರಾಜಾಗುವ ಎಲ್ಲಾ 11 ಕೆವಿ ಪೂರಕಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸುವಂತೆ ಬೆ.ವಿ.ಕಂ, ಚಿಕ್ಕನಾಯಕನಹಳ್ಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು