ಹಮಾಲಿ ಕಾರ್ಮಿಕ ಸಂಘನೆಯ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ.

 ಪಾವಗಡ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮಾಲಿ ಕಾರ್ಮಿಕ ಸಂಘನೆಯ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ಕೈಗೊಂಡು ನಂತರ ತಹಶಿಲ್ದಾರ್ ವರದರಾಜು ಅವರಿಗೆ ಮನವಿ ಪತ್ರ ನೀಡಿದರು. 


ಕಾಯಕ ನಿಧಿ ಯೋಜನೆಯ ಅಡಿ ಹಮಾಲಿ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ, ನಿವೃತ್ತಿ ಪರಿಹಾರಗಳು, ಯಶಸ್ವಿನಿ ಯೋಜನೆಯ ಸೌಲಭ್ಯವನ್ನು ಎಲ್ಲಾ ಹಮಾಲಿ ಕಾರ್ಮಿಕರಿಗೆ ಸರ್ಕಾರ ಜಾರಿಗೊಳಿಸಬೇಕು. 

ವಸತಿ, ಕನಿಷ್ಠ ವೇತನ , ಲೈಸೆನ್ಸ್ ನವೀಕರಣ, ವಿಮಾ ಸೌಲಭ್ಯ, ಬೋನಸ್ , ಇನ್ನಿತರ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸಿ ಕೊಡಬೇಕು ಎಂದು ಮುಖಂಡರು ಒತ್ತಾಯಿಸಿದರು. 


ನಂತರ ಎ.ಪಿ.ಎಂ.ಸಿ. ಕಾರ್ಯದರ್ಶಿ ಯವರಿಗೂ ಮನವಿ ಪತ್ರ ಸಲ್ಲಿಸಿದರು. 


ಹಮಾಲಿ ಸಂಘದ ಮುಖಂಡರಾದ ಗಂಗಾಧರ, ನಾಗರಾಜು, ರಾಮಾಂಜನೇಯಲು, ಮೊದ್ಲೇಟಪ್ಪ ಇತರರು ಹಾಜರಿದ್ದರು.


ವರದಿ : ಪಾವಗಡ ಶ್ರೀನಾಥ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು