ಚಿಕ್ಕನಾಯಕನಹಳ್ಳಿ : ನೂತನ ತಾಲ್ಲೂಕು ದಂಡಾಧಿಕಾರಿಯಾಗಿ ಅರ್ಚನಾ ಭಟ್. ಡಿ ಅಧಿಕಾರ ಸ್ವೀಕಾರ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಮಾಡಿದ್ದ ತಹಸಿಲ್ದಾರ್ ಬಿ.ತೇಜಸ್ವಿನಿ ಯವರನ್ನು ಕರ್ನಾಟಕ ರಾಜ್ಯಪಾಲರ ಆದೇಶ ಅನುಸಾರ ಮತ್ತು ಅವರ ಹೆಸರಿನಲ್ಲಿ ಜಿ.ಎಸ್. ಸುಶೀಲ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ( ಸೇವೆಗಳು 3. ವಿ. ನಿ ) ಮಂಡ್ಯ ಜಿಲ್ಲೆ ರಾಮನಗರ ತಾಲೂಕಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತ ದೃಷ್ಟಿಯಿಂದ ವರ್ಗಾವಣೆ ಮಾಡಿದ್ದು , ಚಿಕ್ಕ ನಾಯಕನಹಳ್ಳಿ ತಾಲ್ಲೂಕಿನಲ್ಲಿ ತೆರವಾದ ತಾಲ್ಲೂಕು ದಂಡಾಧಿಕಾರಿಗಳ ಸ್ಥಾನಕ್ಕೆ ವಿರಾಜಪೇಟೆ ತಾಲ್ಲೂಕು,ಕೊಡಗು ಜಿಲ್ಲೆ ಮಡಿಕೇರಿಯಿಂದ ತಹಶೀಲ್ದಾರ್ ಗ್ರೇಡ್ 1, ಅರ್ಚನಾ ಭಟ್. ಡಿ.ರವರನ್ನು ಚಿಕ್ಕನಾಯಕನಹಳ್ಳಿಯ ಗ್ರೇಡ್ - 1 ತಹಶೀಲ್ದಾರರಾಗಿ ನೇಮಕ ಮಾಡಲಾಗಿದೆ.
ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.
