ಹೃದಯಾಘಾತದಿಂದ ಶುಶ್ರೂಷಕಿ ಸಾವು.

 ಪಾವಗಡ : ತೀವ್ರ ಹೃದಯಾಘಾತದಿಂದ ಶುಶ್ರೂಷಕಿ (ಸ್ಟಾಫ್ ನಸ್೯ ) ಆಕಾಲ ಮರಣವನ್ನಪ್ಪಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.




ಪಾವಗಡ ಪಟ್ಟಣದ ಶ್ರೀನಿವಾಸ ನಗರದ ನಿವಾಸಿ ಭಾರತಿ (59)ಮೃತ ದುರ್ದೈವಿ 


ಈಕೆ ಮಧುಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು 


ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಎದೆ ನೋವು ಜಾಸ್ತಿ ಆಗಿ ಹೆಚ್ಚಿನ ಚಿಕಿತ್ಸೆ ಪಡೆಯಲು ತುಮಕೂರಿಗೆ ತೆರಳುವ ಮಾರ್ಗ ಮದ್ಯದಲ್ಲಿ ಸಾವನ್ನಪಿದ್ದಾರೆ 

ಉತ್ತಮ ಶುಶ್ರೂಷಕಿ ಎಂಬ ಹೆಗ್ಗಳಿಕೆ ಪಡೆದಿದ್ದ ಭಾರತಿಯವರ ಸಾವಿನ ಸುದ್ದಿ ಕೇಳಿ ತಾಲ್ಲೂಕಿನ ಖ್ಯಾತ ವೈದ್ಯ ಡಾ. ಜಿ. ವೆಂಕಟರಾಮಯ್ಯ, ಡಾ. ಶಶಿಕಿರಣ್, ಮಾಜಿ ಶಾಸಕ ತಿಮ್ಮರಾಯಪ್ಪ, ಡಾ. ಕಿರಣ್ ಮುಂತಾದ ಹಲವು ಗಣ್ಯರು ಅವರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿದಿದ್ದಾರೆ.


ವರದಿ : ಪಾವಗಡ ಶ್ರೀನಾಥ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು