ಪ್ರಧಾನಿ ನರೇಂದ್ರ ಮೋದಿಯವರ ತಲೆಮೇಲೆ ಹಾಗೂ ಕೊರಳಲ್ಲಿ ಕಂಗೊಳಿಸಿದ ಅಡಿಕೆ ಹಾರ ಹಾಗೂ ಪೇಟ ತಯಾರು ಮಾಡಿದ್ದು ಯಾರು ಗೊತ್ತಾ !

ಪ್ರಧಾನಿ ನರೇಂದ್ರ ಮೋದಿಯವರ ತಲೆಮೇಲೆ ಹಾಗೂ ಕೊರಳಲ್ಲಿ ಕಂಗೊಳಿಸಿದ ಅಡಿಕೆ ಹಾರ ಹಾಗೂ ಪೇಟ ತಯಾರು ಮಾಡಿದ್ದು ಯಾರು ಗೊತ್ತಾ !



ಗುಬ್ಬಿ : ಎಚ್ಎಲ್ ಘಟಕ ಉದ್ಘಾಟನೆಗೆ ಬಂದಿದ್ದ ಸನ್ಮಾನ್ಯ ಶ್ರೀ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡಿಕೆ ಪೇಟ ಹಾಗೂ ಅಡಿಕೆ ಹಾರ ಹಾಕಲಾಯಿತು ಆ ಪೇಟ ಹಾಗೂ ಹಾರವನ್ನು ತಯಾರು ಮಾಡಿದ್ದು ಅನ್ನುತ್ತೀರಾ ಇಲ್ಲಿದೆ ನೋಡಿ.


ಗುಬ್ಬಿ ತಾಲೂಕಿನ ಕಸಬಾ ಹೋಬಳಿ ನಡುವಲಪಾಳ್ಯ ಗ್ರಾಮದ ರೈತ ಎನ್ ಆರ್ ನಟರಾಜು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾದ ಆಹಾರವನ್ನು ಹಾಗೂ ಪೇಟವನ್ನು ಜಿಲ್ಲೆಯ ಪರವಾಗಿ ನೀಡುವ ಉದ್ದೇಶದಿಂದ ತಮ್ಮ ಮನೆಯಲ್ಲಿ ಇದ್ದಂತಹ ಅಡಿಕೆಯಿಂದ ಪೇಟ ಹಾಗೂ ಹಾರವನ್ನು ತನ್ನದೇ ಆದ ರೀತಿಯಲ್ಲಿ ತಯಾರು ಮಾಡಲಾಗಿತ್ತು.



ಕಲ್ಪತರು ನಾಡು ಅಂದರೆ ತುಮಕೂರು ಜಿಲ್ಲೆ ತೆಂಗು ಹಾಗೂ ಅಡಿಕೆಗೆ ವಿಶೇಷವಾಗಿ ಹೆಸರು ಮಾಡಿದೆ ಗುಬ್ಬಿ ಸುತ್ತಮುತ್ತಲ ರೈತರು ಹೆಚ್ಚು ಅಡಿಕೆ ವ್ಯಾಪಾರ ಮಾಡುತ್ತಿದ್ದು ದೇಶದ ಪ್ರಧಾನಿ ಅವರಿಗೆ ವಿಶೇಷವಾಗಿ ತನ್ನದೇ ಅದ ರೀತಿಯಲ್ಲಿ ಗೌರವಿಸುವ ಉದ್ದೇಶದಿಂದ ರೈತ ನಟರಾಜು 300 ಗ್ರಾಮ್ ಚೂರು ಅಡಿಕೆಯಿಂದ ಟೋಪಿ ಹಾಗೂ ಎರಡು ಕೆಜಿ ಉಂಡೆ ಅಡಿಕೆಯಿಂದ ಹಾರವನ್ನು ತಯಾರು ಮಾಡಿದ್ದಾರೆ. 

ಗುಬ್ಬಿ ತಾಲೂಕಿನ ಒಬ್ಬ ರೈತನ ಕೈಯಿಂದ ತಯಾರಾದ ಅಡಿಕೆ ಕಿರೀಟ ದೇಶದ ಪ್ರದಾನಿಯವರ ತಲೆ ಮೇಲೆ ಕಂಗೊಳಿಸಿದ್ದು ಗುಬ್ಬಿ ತಾಲೂಕಿನ ಹೆಮ್ಮೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು