ದಿ ಸೈಲೆಂಟ್ ಒಲಂಪಿಯಾಡ್ ಕ್ರೀಡೆ ಯಲ್ಲಿ ಶ್ರವಣ ದೋಷ ಮಕ್ಕಳ ಗೆಲುವು ತಾಲ್ಲೂಕು, ಜಿಲ್ಲೆಗೆ ಕೀರ್ತಿ ಹೆಚ್ಚಿದೆ ಎಂದು ಮುಖ್ಯ ಶಿಕ್ಷಕ ಸಿದ್ದೇಶ್.

 ಚಿಕ್ಕನಾಯಕನಹಳ್ಳಿ : ದಿ ಸೈಲೆಂಟ್ ಒಲಂಪಿಯಾಡ್ ಕ್ರೀಡೆ ಯಲ್ಲಿ ಶ್ರವಣ ದೋಷ ಮಕ್ಕಳ ಗೆಲುವು ತಾಲ್ಲೂಕು, ಜಿಲ್ಲೆಗೆ ಕೀರ್ತಿ ಹೆಚ್ಚಿದೆ ಎಂದು ಮುಖ್ಯ ಶಿಕ್ಷಕ ಸಿದ್ದೇಶ್ ತಿಳಿಸಿದರು.



ಶೆಟ್ಟಿಕೆರೆ ಹೋಬಳಿ ಬಿ ಪಾಳ್ಯ ಶ್ರೀ ಸಿದ್ದರಾಮೇಶ್ವರ ವಾಕ್ ಶ್ರವಣ ದೋಷ ಮಕ್ಕಳ ವಸತಿ ಶಾಲೆಯ ಮಕ್ಕಳು ಮುಂಬೈನಲ್ಲಿ ನಡೆದ ಶ್ರವಣದೋಷ ಮಕ್ಕಳ ದಿ ಸೈಲೆಂಟ್ ಒಲಂಪಿಯಾಡ್ 2023ರ ಕ್ರೀಡಾಕೂಟಗಳಾದ 50,100, ರಿಲೇ,ರನ್ನಿಂಗ್, ಟ್ರಾಕ್ ರೇಸ್, ಲೇಮನ್ ಸ್ಫೂನ್ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ, ತೃತೀಯ ಸ್ಥಾನ ಪಡೆದು ಬಹುಮಾನ ಪಡೆದಿದ್ದಾರೆ.ಹಾಗೂ ಮುಂಬೈ ನ , ಪ್ರಮುಖ ಪ್ರವಾಸಿ ಸ್ಥಳ ನೆಹರು ಸೈನ್ಸ್ ಸೆಂಟರ್ ವೀಕ್ಷಣೆ ಮಾಡಿರುವುದು ಶಾಲಾ ಮಕ್ಕಳಲ್ಲಿ ಸಂತಸ ಮನೆ ಮಾಡಿದೆ.



 ಯಶಸ್ವಿನಿ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಜಗದಾಂಬ ಸದಾಶಿವಯ್ಯ, ಚಂದ್ರಮ್ಮ ಚಂದ್ರಶೇಖರಯ್ಯ, ಹಾಗೂ ನಿರ್ದೇಶಕರಾದ ಅದಲಗೆರೆ ಬಸವರಾಜು, ಶಾಲಾ ಮುಖ್ಯ ಶಿಕ್ಷಕ ಸಿದ್ದೇಶ್, ಶಿಕ್ಷಕಿಯಾದ ಪ್ರೇರಣ, ಕೆಂಪಯ್ಯ ಸೇರಿದಂತೆ ಶಾಲಾ ಮಕ್ಕಳನ್ನು ಅಭಿನಂದಿಸಿದ್ದಾರೆ.



ವರದಿ : ಚಿಕ್ಕನಾಯಕನಹಳ್ಳಿ ಚಂದ್ರು 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು